Breaking News

ಶಾಂತಾಯಿ ಆಶ್ರಮ್ ಟೂ….ಮುಂಬಯಿ..ಫ್ಲಾಯಿಂಗ್….!

ಆಶ್ರಮದ ಆಶ್ರಿತರಿಗೆ ವಿಮಾನದಲ್ಲಿ ಪ್ರಯಾಣ…!

ಬೆಳಗಾವಿ- ಆ ವಯೋವೃದ್ಧರ ಕಣ್ಣಂಚಿನಲ್ಲಿ ಅದೇನೋ ಖುಷಿ. ಅವರು ತಾವೂ ಮುಂದೊಂದು ದಿನ ವಿಮಾನಯಾನ ಮಾಡುತ್ತೇವೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ವಿಮಾನ ಯಾನ ಮಾಡುತ್ತೇವೆ ಎಂದು ಕನಸು ಮನಸ್ಸಿನಲ್ಲೂ ಎಂದುಕೊಂಡಿರಲಿಲ್ಲ. ಸಮಾಜ ಸೇವಕ, ಮಾಜಿ ಮೇಯರ್‌ ವಿಜಯ ಮೋರೆ ನೇತೃತ್ವದಲ್ಲಿ ನಡೆಯುತ್ತಿರುವ ಶಾಂತಾಯಿ ವೃದ್ಧಾಶ್ರಮದಲ್ಲಿ ಉಚಿತವಾಗಿ ಆಶ್ರಯ ಪಡೆದುಕೊಂಡಿರುವ ಹಿರಿಯ ಜೀವಿಗಳಿಗೆ ಇದೀಗ ವಿಮಾನ ಯಾನ ಮಾಡುವ ಸೌಭಾಗ್ಯ ಕೂಡಿಬಂದಿದೆ.

ಶಾಂತಾಯಿ ವೃದ್ಧಾಶ್ರಮಕ್ಕೆ ಇದೀಗ 25 ವರ್ಷ ಪೂರ್ಣಗೊಂಡು ರಜತ ಮಹೋತ್ಸವದಲ್ಲಿ ಸಂಭ್ರಮದಲ್ಲಿದೆ. ಈ ಸಂಭ್ರಮಕ್ಕೆಮತ್ತಷ್ಟು ಮೆರಗು ನೀಡಲೆಂದು ಇಲ್ಲಿ ಆಶ್ರಯಪಡೆದುಕೊಂಡಿರುವ ಹಿರಿಯ ಜೀವಿಗಳನ್ನು ವಿಮಾನ ಯಾನ ಸೇವೆ ಒದಗಿಸಲು ವೃದ್ಧಾಶ್ರಮದ ಆಡಳಿತ ಮಂಡಳಿ ನಿರ್ಧರಿಸಿದೆ.

ಈ ಬಗ್ಗೆ ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಬೆಳಗಾವಿಶಾಂತಾಯಿ ವೃದ್ಧಾಶ್ರಮದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ವಯೋವೃದ್ಧರಿಗೆ ವಿಮಾನ ಯಾನ ಸೇವೆಯ ಭಾಗ್ಯ ಕಲ್ಪಿಸಲು ನಿರ್ಧರಿಸಲಾಗಿದೆ.

ಫೆ. 22 ರಂದು ವಿಮಾನದ ಮೂಲಕ ಬೆಳಗಾವಿಯಿಂದ ಮುಂಬೈಗೆ ಕರೆದುಕೊಂಡು ಹೋಗಲಾಗುವುದು. ಫೆ. 26 ರಂದು ಮುಂಬಯಿಯಿಂದ ಮರಳಿ ಬೆಳಗಾವಿಗೆ ಆಗಮಿಸಲಾಗುವುದು. ನಾಲ್ಕು ದಿನಗಳ ಕಾಲ ವಿವಿಧ ಸ್ಥಳಗಳಿಗೆ ವಯೋವೃದ್ಧರನ್ನು ಕರೆದೊಯ್ಯಲಾಗುವುದು. ವಯೋವೃದ್ದರು, ಆಶ್ರಮದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ 42 ಜನ ಪ್ರವಾಸದಲ್ಲಿ ಪಾಲ್ಗೊಳ್ಳುವರು ಎಂದರು.

ಮುಂಬೈ ವಿಮಾನ ನಿಲ್ದಾಣದಿಂದ ನೇರವಾಗಿ ಗೋಯಂಕಾ ಭವನಕ್ಕೆ ಕರೆದೊಯ್ಯಲಾಗುವುದು. ಇಸ್ಕಾನ್‌ ಮಂದಿರ, ಸಿದ್ದಿವಿನಾಯಕ ಮಂದಿರದ,ವಿಧಾನಭವನ,ನಾರಿಮನ ಪಾಯಿಂಟ್‌, ಗೇಟ್‌ ವೇ ಆಫ್‌ ಇಂಡಿಯಾ, ರೆಡ್‌ ಕಾರ್ಪೆಟ್‌ ವಾಕ್ಸ್‌ ಮ್ಯುಸಿಯಂ ಸೇರಿದಂತೆ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಲಾಗುವುದು. ಈ ಪ್ರವಾಸಕ್ಕೆ ವಿವಿಧ ದಾನಿಗಳು ನೆರವಾಗಿದ್ದಾರೆ ಎಂದು ಹೇಳಿದರು.

ಪಾಟೀಲ ಕುಟುಂಬದ ಕೊಡುಗೆಯಿಂದಾಗಿ ಶಾಂತಾಯಿ ವೃದ್ಧಾಶ್ರಮ 1998ರಲ್ಲಿ ಸ್ಥಾಪನೆಯಾಗಿದೆ. ಇಲ್ಲಿ ಅರ್ಹ ಸದಸ್ಯರಿಗೆ ಉಚಿತವಾಗಿ ಆಶ್ರಯನೀಡಲಾಗುತ್ತಿದೆ. ಇಲ್ಲಿ ಸದಸ್ಯ 22 ಮಹಿಳೆಯರು, 5 ಪುರುಷರು ಆಶ್ರಯ ಪಡೆದಿದ್ದಾರೆ. ಅವರಿಗೆ ಆತ್ಮ ವಿಶ್ವಾಸ ಮೂಡಿಸಿದೆ. ಯಾವುದೇ ಸರ್ಕಾರಿ ಸಹಾಯವಿಲ್ಲದೇ ಸದಸ್ಯರಿಗೆ ಆರೋಗ್ಯಕರ ಜೀವನವನ್ನು ಒದಿಗಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಂತಾಯಿ ವೃದ್ಧಾಶ್ರಮದ ನಿರ್ದೇಶಕ ರಾಜು ಗವಳಿ, ದಿಲೀಪ ಕುರಂದವಾಡೆ, ಮೆಹಬೂಬ ಮಕಾನದಾರ ಮೊದಲಾದವರು ಉಪಸ್ಥಿತರಿದ್ದರು.

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.