ಬೆಳಗಾವಿ- ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಬೆಳಗಾವಿ ಮೆಥೋಡಿಸ್ಟ ಚರ್ಚ ಬದಿಯ ಕುಲಕರ್ಣಿ ಕುಟುಂಬಕ್ಕೆ ಸೇರಿದ ಖುಲ್ಲಾ ಜಾಗೆಯಲ್ಲಿ ಸ್ವಚ್ಛತಾ ಕಾಮಗಾರಿ ಆರಂಭಗೊಂಡಿದೆ
ಸೋಮವಾರ ನ್ಯಾಯಾಲಯದ ಆದೇಶದೊಂದಿಗೆ ಬೋಲ್ಡೆಜರ ಸಮೇತ ನೂರಾರು ಕೂಲಿ ಕಾರ್ಮಿಕರೊಂದಿಗೆ ಸ್ಥಳಕ್ಕೆ ಆಗಮಿಸಿದ ಶಂಕರ ಮುನವಳ್ಳಿ ಸ್ವಚ್ಛತಾ ಕಾಮಗಾರಿ ಆರಂಭಿಸಲು ಮುಂದಾದ ಸಂಧರ್ಭದಲ್ಲಿ ಮೆಥೋಡಿಸ್ಟ ಚರ್ಚನವರು ಕೆಲ ಕಾಲ ಪ್ರತಿಭಟನೆ ನಡೆಸಿ ಕಾಮಗಾರಿಗೆ ಅಡ್ಡಿ ಪಡಿಸುವ ಪ್ರಯತ್ನ ಮಾಡಿದರು ಈ ಸಂಧರ್ಭದಲ್ಲಿ ಮದ್ಯ ಪ್ರವೇಶಿಸಿದ ಪೋಲೀಸರು ಕುಲಕರ್ಣಿ ಕುಟುಂಬಕ್ಕೆ ಶಾಂತಿಯುತವಾಗಿ ಅವರ ಜಾಗೆಯಲ್ಲಿ ಎಂಜಾಯ್ ಮಾಡಲು ಮಾನ್ಯ ನ್ಯಾಯಾಲಯ ಆದೇಶ ನೀಡಿದೆ ನಿಮ್ಮ ಹತ್ತಿರ ಯಾವುದೇ ರೀತಿಯ ಆದೇಶಗಳಿದ್ದರೆ ಹಾಜರು ಪಡಿಸಿ ಎಂದು ಪೋಲೀಸರು ಗೊಂದಲಕ್ಜೆ ತೆರೆ ಎಳೆದರು
ಈಗ ಸದ್ಯಕ್ಕೆ ಕುಲಕರ್ಣಿ ಕುಟುಂಬಕ್ಕೆ ಸೇರಿದ ಸುಮಾರು ೨೬ ಎಕರೆ ಜಾಗೆಯಲ್ಲಿ ಬೋಲ್ಡೆಜರುಗಳು ಸದ್ದು ಮಾಡುತ್ತಿವೆ ನೂರಾರು ಕಾರ್ಮಿಕರು ಸ್ವಚ್ಛತಾ ಕಾಮಗಾರಿಯಲ್ಲಿ ನಿರತರಾಗಿದ್ದಾರೆ
ಅನೇಕ ಜನ ಪೋಲೀಸ ಅಧಿಕಾರಿಗಳು ಸ್ಥಳದಲ್ಲಿದ್ದು ಶಂಕರ ಮುನವಳ್ಳಿ ಹಾಗು ಕುಲಕರ್ಣಿ ಕುಟುಂಬ ತಮಗೆ ಸೇರಿದ ಜಾಗೆಯಲ್ಲಿ ಶಾಂತಿಯುತವಾಗಿ ಕಾಮಗಾರಿ ಆರಂಭಿಸಿದ್ದಾರೆ ಪೋಲೀಸರು ಶಾಂತತೆ ಕಾಪಾಡಿದ್ದಾರೆ
ಪರಿಸ್ಥಿತಿ ಶಾಂತವಾದ ಬಳಿಕ ಪೋಲೀಸ್ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ