ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿಯೊಬ್ಬ,ತನ್ನ ವಾರ್ಡಿನಲ್ಲಿ ಸಂಬ್ರಮಿಸುತ್ತಿರುವಾಗ, ವಿಜಯೋತ್ಸವ ಆಚರಿಸುವ ಸಂಧರ್ಭದಲ್ಲಿ ಈ ವಿಜಯಶಾಲಿಗೆ ಮೋಬೈಲ್ ಕಾಲ್ ಬರುತ್ತೆ,ತಕ್ಷಣ ವಿಜಯೋತ್ಸವ ನಿಲ್ಲಿಸಿ,ಆತ ಹೋಗಿದ್ದಾದರೂ ಎಲ್ಲಿ.? ಆತ ಮಾಡಿರುವ ಕಾರ್ಯದ ಬಗ್ಗೆ ಕೇಳಿದ್ರೆ,ಕಣ್ಣೀರು ಕಪಾಳಕ್ಕೆ ಬರುವದರಲ್ಲಿ,ಸಂದೇಹವೇ ಇಲ್ಲ,
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ನಂ 7 ರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆದ್ದ, ಗಣಾಚಾರಿ ಗಲ್ಲಿಯ ಶಂಕರ ಪಾಟೀಲ. ಮಾಜಿ ಮಹಾಪೌರ ವಿಜಯ ಮೋರೆ ಅವರ ಅಪ್ಪಟ ಶಿಷ್ಯ, ನಿನ್ನೆ ರಾತ್ರಿ ಈ ಶಂಕರ ಪಾಟೀಲ ತನ್ನ ವಾರ್ಡಿನಲ್ಲಿ ಸಂಭ್ರಮ ಪಡುತ್ತಿರುವ ಸಂಧರ್ಭದಲ್ಲಿ ಈತನ ಮೋಬೈಲ್ ಗೆ ಕಾಲ್ ಬರುತ್ತೆ, ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಬಡವನೊಬ್ಬ ಮೃತಪಟ್ಟಿದ್ದಾನೆ,ಶವ ಸಂಸ್ಕಾರ ಮಾಡಬೇಕಾಗಿದೆ ಎಂದು ಮಾಹಿತಿ ಸಿಗುತ್ತಿದ್ದಂತೆಯೇ ಆತ ತಕ್ಷಣ ವಿಜಯೋತ್ಸವ ನಿಲ್ಲಿಸಿ ತನ್ನ ಗೆಳೆಯರೊಂದಿಗೆ ಸ್ಮಶಾನಕ್ಕೆ ತೆರಳಿ ಶವ ಸಂಸ್ಕಾರ ಮುಗಿಸಿ, ನಗರ ಸೇವಕನಾಗಿ ಮಾನವೀಯ ಸೇವೆ ಮಾಡುವದರ ಮೂಲಕ ಸೇವಕ ಅಂದ್ರೆ ಹೀಗಿರಬೇಕು ಎಂದು ತೋರಿಸಿದ್ದಾರೆ.
ಗಣಾಚಾರಿ ಗಲ್ಲಿಯ ನಿವಾಸಿ ಆಗಿರುವ ಶಂಕರ ಪಾಟೀಲ ಹಲವಾರು ವರ್ಷಗಳಿಂದ ಜನ ಸೇವೆ ಮಾಡುತ್ತಲೇ ಬಂದಿದ್ದು,ಈತನ ಸೇವೆ,ಗಮನಿಸಿದ ವಾರ್ಡ್ ನಂ 7 ರ ಮತದಾರರು ನಿಜವಾದ ಸೇವಕನಿಗೆ ಅಧಿಕಾರ ಕೊಟ್ಟಿದ್ದಾರೆ. ಅಧಿಕಾರ ಸಿಕ್ಕ ಬಳಿಕ ಬಹಳಷ್ಟು ಜನ ಬದಲಾಗುತ್ತಾರೆ ಆದ್ರೆ ಶಂಕರ ಪಾಟೀಲನ ಸೇವೆಯಲ್ಲಿ ಯಾವುದೇ ವ್ಯತ್ಯಾಸ ಆಗಲಿಲ್ಲ.
ಮೈತುಂಬ ಗುಲಾಲು ಸುರಿದುಕೊಂಡು,ಪಟಾಕಿಸಿಡಿಸಿ,ಬೆಂಬಲಿಗರು ಶಂಕರ ಪಾಟೀಲನನ್ನು ಹೆಗಲ ಮೇಲೆ ಹೊತ್ಕೊಂಡು ಕುಣಿಯುತ್ತಿರುವಾಗ ಮೀಬೈಲ್ ರಿಂಗ್ ಟೋನ್ ಕೇಳಿ,ಕಾಲ್ ರಿಸೀವ್ ಮಾಡಿದ ಶಂಕರ ಪಾಟೀಲ ತಕ್ಷಣ ಸಂಭ್ರಮಕ್ಕೆ ವಿರಾಮವಿಟ್ಟು ಮಾನವೀಯ ಸೇವೆ ಮಾಡಿದ ಶಂಕರ ಪಾಟೀಲ ಅವರ ಸೇವೇಗೆ ಸಲಾಂ…..