ಬೆಳಗಾವಿ- ಬೆಳಗಾವಿ ನಗರದಲ್ಲಿ ಅಗಲೀಕರಣಗೊಂಡ ರಸ್ತೆಗಳಲ್ಲಿ ಡಾಂಬರೀಕರಣ ನಡೆದರೆ ಇತ್ತ ಇನ್ನೊಂದು ಕಡೆ ಜೆಸಿಬಿಗಳು ಸದ್ದು ಮಾಡುತ್ತಿವೆ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿರುವ ಖಡೇಬಝಾರಗೆ ಹೊಂದಿಕೊಂಡಿರುವ ಟೆಂಗಿನಕರ ಗಲ್ಲಿ ಮತ್ತು ಕಡೋಲ್ಕರ್ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿ ಆರಂಭಗೊಂಡಿದೆ
ಪಾಲಿಕೆ ಆಯುಕ್ತ ಶಶಿಧರ ಕುರೇರ ಗುರುವಾರ ಬೆಳಿಗ್ಗೆ ಟೆಂಗಿನಕರ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ಕಾಮಗಾರಿಗೆ ಚಾಲನೆ ನೀಡಿದರು ನಂತರ ಪಾಲಿಕೆ ಅಧಿಕಾರಿಗಳೊಂದಿಗೆ ಟೆಂಗಿನಕರ ಗಲ್ಲಿ ಆಝಾಧ ಗಲ್ಲಿ ಮತ್ತು ಕಡೋಲ್ಕರ್ ಗಲ್ಲಿಯಲ್ಲಿ ಸುತ್ತಾಡಿ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ತಮ್ಮ ತಮ್ಮ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣಕ್ಕೆ ಸಹಕರಿಸುವಂತೆ ಮನವಿ ಮಾಡಿಕೊಂಡರು
ಈ ಸಂಧರ್ಭದಲ್ಲಿ ಬೆಳಗಾವಿ ಸುದ್ಧಿ ಜೊತೆ ಮಾತನಾಡಿದ ಶಶಿಧರ ಕುರೇರ ಟೆಂಗಿನಕರ ಗಲ್ಲಿ ಮತ್ತು ಕಡೋಲ್ಕರ್ ಗಲ್ಲಿ ಮತ್ತು ಆಝಾಧ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್ ನಡೆಯಲಿದೆ ಎಂದು ತಿಳಿಸಲಾಗಿದೆ ಕೆಲವರು ಸ್ವಯಂ ಪ್ರೇರಿತ ರಾಗಿ ತಮ್ಮ ಕಟ್ಟಡಗಳನ್ನು ತೆರವು ಮಾಡಿಕೊಳ್ಳುತ್ತಿದ್ದಾರೆ ತೆರವು ಆಗದ ಕಟ್ಟಡಗಳನ್ನು ಪಾಲಿಕೆಯ ಜೆಸಿಬಿಗಳು ತೆರವು ಮಾಡಲಿವೆ ಎಂದು ತಿಳಿಸಿದರು
ಬೆಳಗಾವಿಯ ಫೋರ್ಟ ರಸ್ತೆ ಪಾಟೀಲ ಗಲ್ಲಿ ರಾಮಲಿಂಗ ಖಿಂಡ ಗಲ್ಲಿ ಮತ್ತು ದರ್ಬಾರ್ ಗಲ್ಲಿಯಲ್ಲಿ ರಸ್ತೆ ಅಗಲೀರಣಗೊಂಡು ಅಲ್ಲಿಯ ಮಾರುಕಟ್ಟೆ ಬೆಳೆದಿರುವದರಿಂದ ಪಾಂಗುಳ ಗಲ್ಲಿಯ ವ್ಯಾಪಾರಿಗಳು ಖುದ್ದಾಗಿ ಮಾಸ್ಟರ್ ಪ್ಲ್ಯಾನ್ ಮಾಡುವಂತೆ ಮುಂದೆ ಬಂದಿದ್ದಾರೆ ಮಾಸ್ಟರ್ ಪ್ಲ್ಯಾನ್ ಬಗ್ಗೆ ಬೆಳಗಾವಿ ನಗರದಲ್ಲಿ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯೆಕ್ತವಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ತಿಳಿಸಿದರು