Breaking News

ಸುರೇಶ ಅಂಗಡಿ ಪಕ್ಷದ ಮೇಲಿನ ಶ್ರದ್ಧೆ…ಮತ್ತು ವಾರಸಾ….!!!

ಬೆಳಗಾವಿ-ಕೇಂದ್ರ ಸಚಿವರಾಗಿದ್ದ,ಭವಿಷ್ಯದ ಮುಖ್ಯಮಂತ್ರಿ ಎಂದು ಪ್ರಚಲಿತವಾಗಿದ್ದ,ಸುರೇಶ ಅಂಗಡಿ ಅವರ ಅಗಲಿಕೆಯನ್ನು ಇವತ್ತಿಗೂ ನಂಬಲಾಗುತ್ತಿಲ್ಲ.ಯಾಕಂದ್ರೆ ಸುರೇಶ ಅಂಗಡಿ ಅವರ ವ್ಯೆಕ್ತಿತ್ವ,ಅವರ ನೆನಪನ್ನು ಅಮರಗೊಳಿಸಿದೆ,ಅವರ ಸರಳತೆ,ಆತ್ಮೀಯತೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ವಿಶೇಷವಾದ ಸ್ಥಾನ ಪಡೆದಿದೆ….

ಸುರೇಶ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈಗ ಉಪ ಚುನಾವಣೆ ಎದುರಾಗಿದೆ,ಚುನಾವಣೆಯ ದಿನಾಂಕ ಇದೇ ವಾರದಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು ದಿವಂಗತ ಸುರೇಶ ಅಂಗಡಿ ಅವರ ವಾರಸುದಾರ ಯಾರಾಗಬಹುದು ಎನ್ನುವ ಪ್ರಶ್ನೆ ಈಗ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಬಿಜೆಪಿ ಕುಟುಂಬ ರಾಜಕೀಯ ಮಾಡುವದಿಲ್ಲ,ಸುರೇಶ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ನೀಡುವದಿಲ್ಲ ಎಂದು ಬಿಜೆಪಿ ವರಿಷ್ಠರು ಹೇಳದಿದ್ದರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಮಾತ್ರ ಇಂತಹದೊಂದು ಸುದ್ಧಿಗೆ ರೆಕ್ಕೆ ಪುಕ್ಕೆ ಕಟ್ಟುವ ಕೆಲಸ ಮಾಡುತ್ತಿರುವದು ಗುಟ್ಟಾಗಿ ಉಳಿದಿಲ್ಲ.
ಸುರೇಶ ಅಂಗಡಿ ಅವರ ನಯ ವಿನಯ,ಸರಳ ಸಜ್ಜನಿಕೆ,ಎಲ್ಲರ ಜೊತೆಗಿನ ಬಾಂಧವ್ಯ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಕೋಟೆ ಕಟ್ಟಲು ಭದ್ರ ಬುನಾದಿ ಹಾಕಿತ್ತು,ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠಗೊಳ್ಳಲು ಸುರೇಶ ಅಂಗಡಿ ಅವರು ಮಾಡಿದ ಶ್ರಮವನ್ನು ಬಿಜೆಪಿ ವರಿಷ್ಠರು ಮರೆತರೂ ಅವರ ಅಭಿಮಾನಿಗಳು ಮಾತ್ರ ಮರೆಯಲು ಸಾಧ್ಯವೇ ಇಲ್ಲ.

ಬೆಳಗಾವಿ ಲೋಕಸಭಾ ಮತ ಕ್ಷೇತ್ರದಲ್ಲಿ ಸುರೇಶ ಅಂಗಡಿ ಅವರು ನಿರಂತರವಾಗಿ ಗೆಲ್ಲಲು ಮರಾಠಾ ಸಮಾಜದ ಸಹಕಾರ ಮತ್ತು ಬೆಂಬಲವೇ ಅದಕ್ಕೆ ಮುಖ್ಯ ಕಾರಣವಾಗಿದೆ.

ಸುರೇಶ ಅಂಗಡಿ ಅವರು,ಮರಾಠಾ ಸಮಾಜದ ವಿಶ್ವಾಸ ಗಳಿಸಿದ್ದರು,ಈ ಸಮಾಜ ಅವರ ಬೆಂಬಲಕ್ಕೆ ನಿಂತಿರುವದರಿಙದಲೇ ಸುರೇಶ ಅಂಗಡಿ ಅವರು ನಿರಂತರವಾಗಿ ಜಯಶಾಲಿಗಳಾಗಿದ್ದರು.ಬಿಜೆಪಿ ಹೈಕಮಾಂಡ್ ಸುರೇಶ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಈ ಸಮಾಜದ ಬೆಂಬಲ ಬಿಜೆಪಿಗೆ ಸಿಗುವದು ತುಂಬಾ ಕಷ್ಟದಾಯಕ

ಯಾಕಂದ್ರೆ ಮರಾಠಿ ಸುದ್ಧಿ ಮಾದ್ಯಮಗಳಲ್ಲಿ,ಇಂತಹದೊಂದು ಸುದ್ಧಿ ಹರಿದಾಡುತ್ತಿದೆ.ಸುರೇಶ್ ಅಂಗಡಿ ಜೀವಂತವಾಗಿದ್ದರೆ,ಹಿಂದುತ್ವದ ಪ್ರತೀಕ ಭಗವಾ ಧ್ವಜ ರಕ್ಷಣೆ ಮಾಡುತ್ತಿದ್ದರು,ಎನ್ನುವ ಸಂದೇಶಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ…

ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾದ್ಯಕ್ಷ ಸಂಜಯ ಪಾಟೀಲ,ಬಿಜೆಪಿಯಿಂದ ಕಲ್ಲು ನಿಂತರೂ ಗೆಲ್ಲುತ್ತದೆ ಎಂದು ಹೇಳಿದ್ದಾರೆ.ಜೊತೆಗೆ ನಾವು ಯಾರಿಗೆ ಟಿಕೆಟ್ ಕೊಟ್ಟರೂ ನಾವು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಬಿಜೆಪಿ ನಾಯಕರಿಗೆ ಇದ್ದಂತೆ ಕಾಣುತ್ತಿದೆ.

ಆದ್ರೆ ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ಪರಿಸ್ಥಿತಿ ಬೇರೆಯೇ ಇದೆ.ಈ ಕ್ಷೇತ್ರದಲ್ಲಿ ಸುಮಾರು 4 ಲಕ್ಷ ಮರಾಠಾ ಸಮಾಜದ ಮತಗಳಿವೆ,ಈ ಸಮಾಜ ಇವತ್ತಿಗೂ ಸುರೇಶ ಅಂಗಡಿ ಕುಟುಂಬದ ಬೆನ್ನಿಗೆ ನಿಂತಿದೆ.ಅವರ ಕುಟುಂಬದವರಿಗೆ ಟಿಕೆಟ್ ಕೊಡಬೇಕು ಎನ್ನುವದು ಮರಾಠಾ ಮತ್ತು ಲಿಂಗಾಯತ ಸಮುದಾಯದ ಅಭಿಲಾಷೆಯಾಗಿದೆ.

ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಶೆಟ್ಟರ್ ಈಗ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟಿದ್ದಾರೆ.ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.ಆದ್ರೆ ನಮಗೆ ಟಿಕೆಟ್ ಕೊಡಿ ಎಂದು ಸುರೇಶ ಅಂಗಡಿ ಅವರ ಕುಟುಂಬದವರು ಎಲ್ಲಿಯೂ ಹೇಳಿಲ್ಲ,ಟಿಕೆಟ್ ಕೊಡಿ ಎಂದು ಬಿಜೆಪಿ ನಾಯಕರ ಬಾಗಿಲು ತಟ್ಟಿಲ್ಲ.ಬಿಜೆಪಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರ ಕುಟುಂಬದವರು ಹೇಳುತ್ತಿದ್ದು ಬಿಜೆಪಿ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವದನ್ನು ಎದುರಾಳಿ ಕಾಂಗ್ರೆಸ್ ಕಾಯುತ್ತಿದೆ.

ಒಂದು ವೇಳೆ ಬಿಜೆಪಿ ಸುರೇಶ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡದಿದ್ದರೆ ಬೆಳಗಾವಿಯಿಂದ ಕಾಂಗ್ರೆಸ್ ಮರಾಠಾ ಸಮಾಜದ ಅನೀಲ್ ಲಾಡ್ ಅವರನ್ನು ಕಣಕ್ಕಿಳಿಸಿ ಮರಾಠಾ ಸಮಾಜದ ಮತಗಳನ್ನು ಸೆಳೆಯಲು ತಂತ್ರ ರೂಪಿಸಿದೆ.ಬಿಜೆಪಿ ಅಭ್ಯರ್ಥಿ ಫೈನಲ್ ಆದ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ನಿರ್ಧರಿಸಿದೆ.

ಬಿಜೆಪಿ ವರಿಷ್ಠರು ಸುರೇಶ್ ಅಂಗಡಿ ಅವರ ಕುಟುಂಬದವರನ್ನು ಕಡೆಗಣಿಸಿದರೆ,ಮರಾಠಾ ಮತ್ತು ಲಿಂಗಾಯತ ಸಮಾಜದ ಮತಗಳನ್ನು ಗಿಟ್ಟಿಸಿಕೊಳ್ಳುವದು ಕಷ್ಟವಾಗುತ್ತದೆ.ಇದು ಕಹಿಯಾದರೂ ಇದು ಸತ್ಯ..

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.