ಬೆಳಗಾವಿ-ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಬೆನ್ನಲ್ಲೆ ಇತ್ತ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಮತ್ತೆ ಶುರುವಾಗಿದೆ, ಮಹಾರಾಷ್ಟ್ರದಲ್ಲಿ ಅಜೀತ್ ಪವಾರ ಹೇಳಿಕೆ ನೀಡಿದಂತೆಯೇ ಬೆಳಗಾವಿಯ ಎಂಈಎಸ್ ನಾಯಕರು ಹೇಳಿಕೆ ನೀಡುವ ಮೂಲಕ ಗಡಿಯಲ್ಲಿ ಅಶಾಂತಿಯ ವಾತಾವರಣ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಶುರುವಾಗಿದ್ದು ದೇಶದ್ರೋಹ ಕೇಸ್ ಕೈ ಬಿಟ್ಟ ಬೆನ್ನಲ್ಲೇ ಪುಂಡಾಟಿಕೆ ಆರಂಭವಾಗಿದೆ.ನಾಡದ್ರೋಹಿ ಎಂಇಎಸ್ ಮುಖಂಡನಿಂದ ಭಾಷಾ ಸಾಮರಸ್ಯ ಕದಡುವ ಹುನ್ನಾರ ನಡೆಸಿದ್ದು
ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡುವ ಮೂಲಕ ಶುಭಂ ಶಳಕೆ ಪುಂಡಾಟಿಕೆ ಪ್ರದರ್ಶಿಸಿದ್ದಾನೆ.
ಎಂಇಎಸ್ ಮುಖಂಡ ಶುಭಂ ಶಳಕೆ ತನ್ನ ಫೇಸ್ ಬುಕ್ ನಲ್ಲಿ ಗಡಿ ವಿವಾದದ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದಾನೆ.
ಸಂಪೂರ್ಣ ಸಂಯುಕ್ತ ಮಹಾರಾಷ್ಟ್ರ ಶೀರ್ಷಿಕೆಯಡಿ ಸಂಯುಕ್ತ ಮಹಾರಾಷ್ಟ್ರ ಹೇಗಿರುತ್ತದೆ ಎನ್ನುವ ನಕ್ಷೆ ಪೋಸ್ಟ್ ಮಾಡಿದ್ದು ಇದು ಈಗ ವಿವಾದಕ್ಕೆ ಕಾರಣ ವಾಗಿದ್ದು,ಈ ಪೋಸ್ಡ್ ಗೆ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಆಕ್ರೋಶ ವ್ಯೆಕ್ತವಾಗಿದೆ.
ಸಂಯುಕ್ತ ಮಹಾರಾಷ್ಟ್ರ ನಕ್ಷೆಯಲ್ಲಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸೇರಿಸಲಾಗಿದೆ.ಸಂಯುಕ್ತ ಮಹಾರಾಷ್ಟ್ ನಕ್ಷೆಯನ್ನು ಫೇಸ್ ಬುಕ್ ಮತ್ತು ಇತರ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಶುಭಂ ಶಳಕೆ ಕಾಲು ಕೆದರಿ ಜಗಳಕ್ಕೆ ನಿಂತಿದ್ದಾನೆ.
ಮಹಾರಾಷ್ಟ್ರ ವಾದಿಗಳೇ ನಮಗೆ ಮನಃಪೂರ್ವಕವಾಗಿ ಮಹಾರಾಷ್ಟ್ರ ದಿನಾಚರಣೆಯ ಶುಭಕೋರಲು ಆಗುತ್ತಿಲ್ಲ.
ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತದ ಹೋರಾಟದ ಮುನ್ನುಡಿ ಬರೆದಿದೆ.ಬೆಳಗಾವಿ ಸೇರಿ ಗಡಿ ಭಾಗದ ಮರಾಠಿಗರು ನ್ಯಾಯಕ್ಕಾಗಿ ಕಾಯುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ್ದಾನೆ.ವಿವಾದಾತ್ಮಕ ಪೋಸ್ಟ್ ಹಾಕುವ ಮೂಲಕ ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಮತ್ತೆ ಖ್ಯಾತೆ ತೆಗೆದಿದೆ.