ಬೆಳಗಾವಿ-ಭಾಷೆಯ ಹೆಸರಿನಲ್ಲಿ ಬೆಳಗಾವಿಯ ಶಾಂತಿ ಕದಡುತ್ತ ಬಂದಿರುವ ನಾಡವಿರೋಧಿ ಎಂಈಎಸ್ ಈಗ ಚುನಾವಣೆಯ ಹೆಸರಿನಲ್ಲಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿದೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಎಂಈಎಸ್ ಮತ್ತು ಶಿವಸೇನೆಯ ಮೈತ್ರಿ ಅಭ್ಯರ್ಥಿಯಾಗಿರುವ ಶುಭಂ ಶಿಳಕೆ ಈಗ ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ,ಚುನಾವಣೆಯ ಹೆಸರಿನಲ್ಲಿ ವೋಟು ಕೇಳಿ ನೋಟು ತೆಗೆದುಕೊಳ್ಳುವ ಕಾನೂನು ಬಾಹಿರ ದಂಧೆ ಶುರು ಮಾಡಿದ್ದಾರೆ.
ಶುಭಂ ಶುಳಕೆ ಮರಾಠಿ ಭಾಷಿಕರು ಹೆಚ್ವಿನ ಸಂಖ್ಯೆಯಲ್ಲಿರುವ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಜೊತೆಗೆ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುತ್ತಿರುವ ಗಂಭೀರ ವಿಷಯ ಈಗ ಬೆಳಕಿಗೆ ಬಂದಿದೆ.
ಭಾಷೆಯ ಹೆಸರಿನಲ್ಲಿ ಮತ ಕೇಳುತ್ತ ಬಂದಿರುವ ಎಂಈಎಸ್ ಈಗ ಬಹಿರಂಗವಾಗಿ ಭಾಷೆಯ ಹೆಸರಿನಲ್ಲಿ ಮತಯಾಚಿಸುವ ಜೊತೆಗೆ ಹಣ ಸಂಗ್ರಹಣೆಗೆ ಮುಂದಾಗಿದ್ದು,ಮುಗ್ದ ಮರಾಠಿ ಭಾಷಿಕರು,ಶುಭಂ ಶಿಳಕೆಯ ಪ್ರಚೋದನಾಕಾರಿ ಭಾಷಣಗಳಿಗೆ ಮರುಳಾಗಿ ಈತನಿಗೆ ಬಹಿರಂಗವಾಗಿ ದೇಣಿಗೆ ಕೊಡುತ್ತಿದ್ದಾರೆ. ದೇಣಿಗೆ ಸಂಗ್ರಹ ಮಾಡುತ್ತಿರುವ ವಿಡಿಯೋ ಬೆಳಗಾವಿ ಸುದ್ಧಿ ಡಾಟ್ ಕಾಮ್ ಗೆ ಸಿಕ್ಕಿದೆ.
ಚುನಾವಣೆಯ ಹೆಸರಿನಲ್ಲಿ ಎಂಈಎಸ್ ಅಭ್ಯರ್ಥಿ ಶುಭಂ ಶಿಳಕೆ ಲಕ್ಷಾಂತರ ರೂ ದೇಣಿಗೆ ಸಂಗ್ರಹ ಮಾಡಿದ್ದು ದೇಣಿಗೆ ಕೊಟ್ಟವರಿಗೆ ಅಧಿಕೃತವಾಗಿ ರಸೀದಿ ಕೊಡುತ್ತಿದ್ದರೂ ಚುನಾವಣಾ ಆಯೋಗ ಇದಕ್ಕೆ ಕಡಿವಾಣ ಹಾಕಿ,ಚುನಾವಣೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿರುವ ಎಂಈಎಸ್ ಅಭ್ಯರ್ಥಿ ಶುಭಂ ಶಿಳಕೆ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕಾಗಿದೆ..