ನಾಳೆ ಬೆಳಗಾವಿಗೆ ಶಿವಸೇನೆ ಶಾಸಕ ರಾಜೇಶ್ ಪಾಟೀಲ ,ಗಡಿ ಕ್ಯಾತೆಗೆ ಮತ್ತೆ ಶಿವಸೇನೆ ಹುನ್ನಾರ .
ಬೆಳಗಾವಿ- ಬೆಳಗಾವಿ ಗಡಿಯಲ್ಲಿ ಬೆಂಕಿಗೆ ತುಪ್ಪ ಸುರಿದು ,ಕಾಲು ಕೆದರಿ ಜಗಳ ಮಾಡುವ ಶಿವಸೇನೆ ಬೆಳಗಾವಿಯಲ್ಲಿ ಮತ್ತೆ ಗಡಿ ವಿವಾದ ಕೆಣಕುವ ,ಮುಗ್ದ ಮರಾಠಿ ಭಾಷಿಕರನ್ನು ಪ್ರಚೋದಿಸುವ ದುಸ್ಸಹಾಸಕ್ಕೆ ಮುಂದಾಗಿದೆ .
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಡಳಗಾವಿ ,ಬೂದರ್ ಬಾಲ್ಕಿ ಸಂಯಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ್ದ ಚಂದಗಡ ಶಾಸಕ ರಾಜೇಶ್ ಪಾಟೀಲ್ ನಾಳೆ ಬೆಳಗಾವಿಗೆ ಬರಲಿದ್ದು ನಾಳೆ ಭಾನುವಾರ ಮಧ್ಯಾಹ್ನ 3-00 ಘಂಟೆಗೆ ಬೆಳಗಾವಿಯ ಅನಿಗೋಳದಲ್ಲಿರುವ ಆದರ್ಶ್ ಮಲ್ಟಿಪರ್ಪಸ್ ಸೊಸೈಟಿಯ ಸಭಾಂಗಣದಲ್ಲಿ ಎಂಈಎಸ್ ಯುವ ಘಟಕ ಆಯೋಜಿಸಿರುವ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕರ್ನಾಟಕ ಸರ್ಕಾರದ ವಿರುದ್ಧ ,ಕನ್ನಡಿಗರ ವಿರುದ್ಧ ಸದಾ ಬೆಂಕಿ ಉಗುಳುವ ಶಿವಸೇನೆಯ ಶಾಸಕ ರಾಜೇಶ್ ಪಾಟೀಲ್ ಬೆಳಗಾವಿ ಗಡಿ ಪ್ರವೇಶಿಸಲು ಪೋಲಿಸರು ಅವಕಾಶ ನೀಡುತ್ತಾರೆಯೋ ಅಥವಾ ರಾಜೇಶ್ ಪಾಟೀಲರನ್ನು ಗಡಿಯಲ್ಲೇ ಬಂಧಿಸುತ್ತಾರೋ ಎನ್ನುವದನ್ನು ಕಾದು ನೋಡಬೇಕಿದೆ .
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ