ಬೆಳಗಾವಿ- ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ,ವಾಹನಗಳ ಪಾರ್ಕಿಂಗ್ ಗೆ ನಿಗದಿತ ಝೋನ್ ಇಲ್ಲದೇ ಇರುವದರಿಂದ ವಾಹನ ಸವಾರರು ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ಪಾರ್ಕ ಮಾಡಿ ದಿನನಿತ್ಯ ಸಾವಿರಾರು ರೂ ದಂಡ ಪಾವತಿಸುವ ಪರಿಸ್ಥಿತಿ ಬೆಳಗಾವಿಯಲ್ಲಿ ಸಾಮಾನ್ಯವಾಗಿದೆ.
ಬೆಳಗಾವಿ ನಗರದಲ್ಲಿ ಕಾರ್ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಬೆಳಗಾವಿಯ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ ,ಅಂದ್ರೆ ,ರವಿವಾರ ಪೇಟೆ,ಖಡೇಬಝಾರ್ ,ಗಣಪತಿ ಬೀದಿ,ಮಾರುತಿ ಬೀದಿ ಮತ್ತು ಸಮಾದೇವಿ ಗಲ್ಲಿಗಳಲ್ಲಿ ಫೋರ್ ವ್ಹೀಲರ್ ವಾಹನಗಳ ಪ್ರವೇಶ ನಿಷೇಧಿಸುವ ಚಿಂತನೆ ನಡೆದಿದೆ
ಫೋರ್ ವ್ಹೀಲರ್ ವಾಹನಗಳನ್ನು ಕೋಟೆಯ ಎದುರು ನಿರ್ಮಾಣವಾಗಲಿರುವ ಪಾರ್ಕಿಂಗ್ ಝೋನ್ ನಲ್ಲಿಯೇ ಪಾರ್ಕ ಮಾಡಿ ,ಈ ಪಾರ್ಕಿಂಗ್ ಸ್ಥಳದಿಂದ ,ರವಿವಾರ ಪೇಟೆ,ಖಡೇಬಝಾರ್ ,ಮಾರುತಿ ಬೀದಿ,ಗಣಪತಿ ಬೀದಿ ಸಮಾದೇವಿ ಗಲ್ಲಿಗೆ ಹೋಗುವ ಸಾರ್ವಜನಿಕರಿಗೆ ,ಅನಕೂಲ ಮಾಡಿಕೊಡಲು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಚಾರ್ಜೇಬಲ್ ಬ್ಯಾಟರಿ ಆಧಾರಿತ 50 ಇಲೆಕ್ಟ್ರಿಕಲ್ ವಾಹನಗಳನ್ನು ಖರೀಧಿ ಮಾಡಲಾಗಿದೆ
ಒಂದು ಇಲೆಕ್ಟ್ರಿಕಲ್ ವೆಹಕಲ್ ಗೆ ಎರಡು ಲಕ್ಷ ರೂ ಬೆಲೆ ಇದ್ದು 50ವೆಹಕಲ್ ಖರೀಧಿಸುವ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದೆ
ಈ 50 ಇಲೆಕ್ಟ್ರಿಕಲ್ ವಾಹನಗಳು ಕೋಟೆ ಯ ಎದುರು ನಿರ್ಮಾಣವಾಗಲಿರುವ ಪಾರ್ಕಿಂಗ್ ಝೋನ್ ನಲ್ಲಿ ತಮ್ಮ ವಾಹನಗಳನ್ನು ಪಾರ್ಕ ಮಾಡುವವರಿಗೆ ಲಿಫ್ಟ ಕೊಡಲಿವೆ
ಕೋಟೆಯ ಎದುರಿನ ಜಾಗವನ್ನು ಆದಾಯ ತೆರಿಗೆ ಇಲಾಖೆಗೆ ನೀಡಲಾಗಿತ್ತು ಈಗ ಈ. ಜಾಗೆಗೆ ಪರ್ಯಾಯವಾಗಿ ಆದಾಯ ತೆರಿಗೆ ಇಲಾಖೆಗೆ ಬೇರೆ ಜಾಗೆಯನ್ನು ನೀಡಲಾಗಿದ್ದು ,ಕೋಟೆಯ ಎದುರಿನ ಜಾಗವನ್ನು ಪಾರ್ಕಿಂಗ್ ಗಾಗಿ ಬಳಿಸಿಕೊಳ್ಳುವಂತೆ ಶಾಸಕ ಅಭಯ ಪಾಟೀಲ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
ಜಿಲ್ಲಾಧಿಕಾರಿಗಳು ಕೋಟೆಯ ಎದುರು ಪಾರ್ಕಿಂಗ್ ಝೋನ್ ನಿರ್ಮಾಣಕ್ಕಾಗಿ ಗ್ರೀನ್ ಸಿಗ್ನಲ್ ಕೊಡುವದಷ್ಟೇ ಬಾಕಿ ಇದೆ ಒಟ್ಟಾರೆ ಬೆಳಗಾವಿಯಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಸದ್ದಿಲ್ಲದೇ ಪರಿಹಾರದ ಪ್ರಯತ್ನಗಳು ನಡೆದಿವೆ