ಬೆಳಗಾವಿ – ಪೌರತ್ವ ತಿದ್ದು ಪಡಿ ಕಾಯ್ದೆಯ. ವಿಚಾರದಲ್ಲಿ ಹಿಂಸಾಚಾರ ಸಲ್ಲದು ಬಾಂಗ್ಲಾದೇಶದ ನುಸುಳುಖೋರರ ಬಗ್ಗೆ ಕಾಳಜಿ ಇದ್ದರೆ ಹೋರಾಟ ಮಾಡುವವರು ನುಸುಳುಖೋರರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಲಿ ಯಾರೋ ಒಬ್ರು ನಮ್ಮ ಮನೆಗೆ ಬೆಂಕಿ ಹಚ್ಚಲು ಬಂದಾಗ ಸುಮ್ಮನಿರಲು ಸಾಧ್ಯವಿಲ್ಲ ,ದಂಗೆಕೋರರಿಗೆ ಬಂದೂಕಿನಿಂದ ಉತ್ತರ ಕೊಡಿ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದು ಕೇಂದ್ರ ರಾಜ್ಯ ರೇಲ್ವೆ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.
ದೇಶದ ಹಿತದೃಷ್ಟಿಯಿಂದ ಹಿಂಸಾಚಾರದ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡದಂತೆ ಆಯಾ ಸರಕಾರಗಳು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಕೇಂದ್ರ ರಾಜ್ಯ ರೈಲ್ಬೆ ಖಾತೆ ಸಚಿವ ಸುರೇಶ ಅಂಗಡಿ ಹೇಳಿದರು.
ಶುಕ್ರವಾರ ಸದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಭದ್ರತೆಗೆ 370 ಕಾಯ್ದೆ, ತಲಾಖೆ ಕಾಯ್ದೆ, ರಾಮಮಂದಿರದ ತೀರ್ಪು ಹೆಮ್ಮೆ ಪಡುವಂಥದ್ದು,ಇತ್ತೀಚೆಗೆ ಪೌರತ್ವದ ಕಾಯ್ದೆ ಮಸುದೆಯನ್ನು ಜಾರಿಗೆ ತಂದರು.
ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಇಸ್ಲಾಂ ರಾಷ್ಟ್ರ ಎಂದು ಘೋಷಣೆ ಮಾಡಿದ ಮೇಲೆ ಮೂರು ರಾಷ್ಟ್ರದ ಜನ ಸೌಹಾರ್ದತೆಗಾಗಿ ಅಲ್ಲಿನ ಜನ ಭಾರತಕ್ಕೆ ಬರುಲು ತುದಿಗಾಗಲಲ್ಲಿ ನಿಂತಿದ್ದರು. ಆದರೆ ಕೇಂದ್ರ ಗೃಹ ಸಚಿವ ಪೌರತ್ವ ಕಾಯ್ದೆ ಜಾರಿಗೆ ತಂದರು. ಇದನ್ನು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿರೋಧ ಪಕ್ಷದವರು ಈ ಕಾಯ್ದೆಯನ್ನು ವಿರೋಧಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಾರ್ವಜನಿಕ ಹಾಗೂ ರೈಲ್ವೆ ಇಲಾಖೆಯ ಆಸ್ತಿಪಾಸ್ತಿ ಹಾನಿ ಮಾಡಬಾರದು. ಒಂದು ವೇಳೆ ಮಾಡಿದರೆ ಆಯಾ ರಾಜ್ಯದ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂದರು.
ಭಾರದಲ್ಲಿ ನುಸುಳುಕೋರರು ಜಾಸ್ತಿ ಆಗಿದ್ದಾರೆ. ಅವರು ಎಲ್ಲ ಕ್ಷೇತ್ರದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಆದ್ದರಿಂದ ಪೌರತ್ವ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ಭಾರತದ ಜನರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಇದನ್ನು ವಿರೋಧ ಪಕ್ಷದವರು ವಿನಾಕಾರಣ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಯಾ ರಾಜ್ಯ ಸರಕಾರಗಳಿಗೆ ರೈಲ್ವೆ ಇಲಾಖೆಯನ್ನು ರಕ್ಷಣೆ ಮಾಡುವಂತೆ ಸೂಚಿಸಲಾಗಿದೆ. ಒಂದು ರೈಲು ನಿರ್ಮಾಣ ಮಾಡಬೇಕಾದರೆ 15 ಲಕ್ಷಕ್ಕೂ ಅಧಿಕ ಬರುತ್ತದೆ. ಸರಕಾರದ ಆಸ್ತಿ ಹಾನಿ ಮಾಡುವವರ ವಿರುದ್ದ ಗುಂಡಿಕ್ಕಿ ಎಂದು ಆಕ್ರೋಶದಿಂದ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವ ಯು.ಟಿ.ಖಾದರ್ ಜವಬ್ದಾರಿಯುತದಲ್ಲಿರುವವರು. ಜನರನ್ನು ಪ್ರಚೋಧನಕಾರಿ ಹೇಳಿಕೆ ನೀಡಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಸಕ ಅಭಯ ಪಾಟೀಲ,ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಡಾ.ವಿ.ಐ.ಪಾಟೀಲ, ನಗರಾಧ್ಯಕ್ಷ ರಾಜೇಂದ್ರ ಹರಕುಣಿ, ಬಿಜೆಪಿ ಮುಖಂಡ ಎಂ.ಬಿ.ಜೀರಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.