ಬೆಳಗಾವಿ- ಬಿಸಿ ಬಿಸಿ ಚಹಾ ಕೊಡಲಿಲ್ಲ ಅಂತ ಹೆಂಡತಿಯ ಜೊತೆ ಜಗಳಾಡಿ ಸಿಟ್ಟಿಗೆದ್ದು ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೬೩ ವರ್ಷದ ಅಜ್ಜ ಮಲಪ್ರಭಾ ವಾರ್ಡಿನ ಮೂರನೇಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ಆಥಣಿ ತಾಲೂಕಿನ ಕೋಕಟನೂರ ಗ್ರಾಮದ ೬೩ ವರ್ಷ ವಯಸ್ಸಿನ ನಿಂಗಪ್ಪ ಕಳೆದ ಒಂದು ತಿಂಗಳಿನಿಂದ ಮೂತ್ರಪಿಂಡದ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಳೆ ಬೀಳುತ್ತಿದೆ ಚಳಿ ಜಾಸ್ತಿಯಾಗಿದೆ ಚಹಾ ತರುವಂತೆ ತನ್ನ ಮಡದಿಗೆ ತಿಳಿಸಿದ್ದಾನೆ ಪಾಪ ಅಜ್ಜಿ ಆಸ್ಪತ್ರೆಯ ಕ್ಯಾಂಟೀನದಿಂದ ಚಹಾ ತಂದು ಕೊಟ್ಟಿದ್ದಾಳೆ ಚಹಾ ತಣ್ಣಗಾಗಿದೆ ಎಂದು ಜಗಳಾಡಿದ್ದಾನೆ ಆಯ್ತು ಮತ್ತೊಂದು ಬಾರಿ ಬಿಸಿ ಬಿಸಿ ಚಹಾ ತರಲು ಅಜ್ಜಿ ಕ್ಯಾಂಟೀನ ಗೆ ಹೋಗುತ್ತಿದ್ದಂತೇಯೇ ನಿಂಗಪ್ಪ ಇತ್ತ ಮೂರನೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ