ಬೆಳಗಾವಿ- ಉತ್ತರ ಕರ್ನಾಟಕದ ಶಕ್ಕಿಯ ಸೌಧ,ಸುವರ್ಣ ವಿಧಾನ ಸೌಧ ವರ್ಷವಿಡಿ ಖಾಲಿ ಇರುವದರಿಂದ ಇಲಿ ಹೆಗ್ಗಣಗಳು ಇದನ್ನು ಹೈಜ್ಯಾಕ್ ಮಾಡಿಕೊಂಡಿದ್ದು ಇವುಗಳ ಕಾಟ ವಿಪರೀತವಾಗಿದೆ ಇದು ಲೋಕೋಪಯೋಗಿ ಇಲಾಖೆಗೆ ಕಿರಿಕಿರಿಯಾಗಿದೆ
ಅಧಿವೇಶನದ ಸಂಧರ್ಭದಲ್ಲಿ ಮಂತ್ರಿಗಳ ಎದುರಲ್ಲಿ ಇಲಿ ಹೆಗ್ಗಣಗಳು ಸುಳಿದಾಡಿದರೆ ಫಜೀತಿ ಆಗಬಹುದಲ್ಲ ಎಂದು ಹೆದರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೆಗ್ಗಣಗಳ ಹುತ್ತುಗಳನ್ನು ಮುಚ್ಚುವ ಕಾರ್ಯಾಚರಣೆ ಆರಂಭಿಸಿದ್ದಾರೆ ಬೆಳಗಾವಿಯಲ್ಲಿ ಐದು ನೂರು ಕೋಟಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಲಾಗಿದೆ ಇಲ್ಲಿ ವರ್ಷದಲ್ಲಿ ಹತ್ತು ಅಥವಾ ಹದಿನೈದು ದಿನ ಅಧಿವೇಷನ ನಡೆಯುತ್ತದೆ ಆಗೊಮ್ಮೆ ಇಗೊಮ್ಮೆ ಅಂತಾ ಸಮೀತಿಗಳ ಸಭೆ ನಡೆಯೋದು ಬಿಟ್ಟರೆ ವರ್ಷವಿಡೀ ಈ ಶಕ್ತಿಯ ಸೌಧ ಬಣ ಬಣ ಎನ್ನುತ್ತದೆ ಸುವರ್ಣ ವಿಧಾನ ಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ವಿಷಯ ಸ್ಥಬ್ಧವಾಗಿದೆ ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಧ್ವನಿ ಎತ್ತುವ ಉಸಾಬರಿ ಮಾಡದೇ ಇರುವದರಿಂದ ಇಲಿ ಹೆಗ್ಗಣಗಳು ಈ ಶಕ್ತಿಯ ಸೌಧಕ್ಕೆ ಲಗ್ಗೆ ಇಟ್ಟಿವೆ ವಿಶಾಲವಾಗಿರುವ ಕಟ್ಟಡದಲ್ಲಿ ಇಲಿ ಹೆಗ್ಗಣಗಳು ಸುರಂಗ ಮಾರ್ಗಗಳನ್ನು ಕೊರೆಯುತ್ತಿವೆ ಈ ಕಟ್ಟಡವನ್ನು ಸರ್ಕಾರಕ್ಕೆ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಸರ್ಕಾರದ ಜವಾಬ್ದಾರಿಯನ್ನು ಇಲಿ ಹೆಗ್ಗಣಗಳು ನಿಭಾಯಿಸಿ ಈ ಕಟ್ಟಡವನ್ನು ಚನ್ನಾಗಿ ಸದುಪಯೋಗ ಮಾಡಿಕೊಳ್ಳುತ್ತಿವೆ ಬೆಳಗಾವಿಯ ಸುವರ್ಣ ವಿಧಾನ ಸೌಧ ಚಟುವಟಿಕೆಯ ಕೇಂದ್ರ ಆಗಬೇಕು ಇಲ್ಲಿ ಕೆಲವು ರಾಜ್ಯಮಟ್ಡದ ಕಚೇರಿಗಳು ಸ್ಥಳಾಂತರಗೊಳ್ಳಬೇಕು ಕನಿಷ್ಠ ಮೂರು ತಿಂಗಳಿಗೊಮ್ಮೆ ಇಲ್ಲಿ ಸಚಿವ ಸಂಪುಟದ ಸಭೆ ನಡೆಯಬೇಕು ಎನ್ನುವದು ಇಲ್ಲಿಯ ಜನರ ಪ್ರಮುಖ ಬೇಡಿಕೆಯಾ