ಸುವರ್ಣಸೌಧದ ಅಂಗಳದಲ್ಲಿ ಹೆಬ್ಬಾವು ಪ್ರತ್ಯಕ್ಷ….!!

ಬೆಳಗಾವಿ- ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು ಅದಕ್ಕಾಗಿ ಸೌಧದಲ್ಲಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

ಸುವರ್ಣಸೌಧದ ಅಂಗಳದಲ್ಲಿ ಉದ್ಯಾನವನದ ಸುತ್ತಮುತ್ತಲು ಸ್ವಚ್ಛತಾ ಕಾಮಗಾರಿಯೂ ಭರದಿಂದ ಸಾಗಿದ್ದು ಇಂದು ಮಧ್ಯಾಹ್ನದ ಹೊತ್ತಿಗೆ ಒಂದಲ್ಲ ಎರಡಲ್ಲ,ಮೂರ್ನಾಲ್ಕು ಹೆಬ್ಬಾವುಗಳು ಹುತ್ತದಿಂದ ಹೊರಬಂದಿವೆ. ಸುವರ್ಣಸೌಧಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಟರ್ನ ತೆಗೆದುಕೊಳ್ಳುವ ಸ್ಥಳದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಜನರ ಕೂಗಾಟ ಕೇಳಿ ಹೆಬ್ಬಾವುಗಳು ಪಕ್ಕದ ಗಿಡಗಂಟೆಗಳಲ್ಲಿ ಮಾಯವಾಗಿವೆ.

ಅಧಿವೇಶನಕ್ಕೆ ಮುನ್ನ ಹೆಬ್ಬಾವುಗಳು ಸುವರ್ಣಸೌಧದ ಅಂಗಳದಲ್ಲಿ ಕಾಣಿಸಿಕೊಂಡಿದ್ದು ಸರ್ಕಾರಕ್ಕೆ ವರವೋ..ಶಾಪವೋ ಅನ್ನೋದನ್ನು ಭವಿಷ್ಯ ಹೇಳೋವ್ರಿಗೆ astrologer ಗಳಿಗೆ ಕೇಳುವದು ಅಗತ್ಯವಾಗಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *