Breaking News

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ……!!

ಬೆಳಗಾವಿ- ರಾಜ್ಯರಾಜಕಾರಣದಲ್ಲಿ ಏನು ನಡೆಯುತ್ತಿದೆ ? ಯಾರಿಗೂ ಅರ್ಥವಾಗದ ಗೊಂದಲದ ಘಳಿಗೆಯಲ್ಲಿ ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ನಡೆದ ಕನ್ನಡದ ಜಾತ್ರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಣ್ಯ ವ್ಯಕ್ತಿಯೊಬ್ಬರು ಮಹತ್ವದ ಸುಳಿವು ಕೊಟ್ಟಿದ್ದಾರೆ.

ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವದು ಎಷ್ಟು ಸತ್ಯವೋ ಮಾಸ್ಟರ್ ಮೈಂಡ್, ಸತೀಶ್ ಜಾರಕಿಹೊಳಿ ಅವರು ಮುಂದಿನ ಸಿಎಂ ಆಗುವದು ಅಷ್ಟೇ ಸತ್ಯ. ಎಂದು ಹೇಳಿದವರು ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ,ಸತೀಶ್ ಜಾರಕಿಹೊಳಿ ಪರಮಾಪ್ತ ವಿಶ್ವಾಸ್ ವೈದ್ಯ ಅವರು ಹೇಳಿದ ಮಾತು ಇದಾಗಿದೆ.

ಸತೀಶ್ ಜಾರಕಿಹೊಳಿ ಅವರು ಒಂದು ದಿನ ಸಿಎಂ ಆಗ್ತಾರೆ ಎನ್ನುವ ಪೋಸ್ಟರ್ ಗಳು ಹಲವಾರು ವರ್ಷಗಳಿಂದ ಸತೀಶ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದ್ರೆ ಶಾಸಕರೊಬ್ಬರು ಸತೀಶ್ ಜಾರಕಿಹೊಳಿ ಅವರೇ ಮುಂದಿನ ಸಿಎಂ ಎಂದು ಬಹಿರಂಗವಾಗಿ ಸಾರ್ವಜನಿಕ ಸಭೆಯೊಂದರಲ್ಲಿ ಹೇಳುವ ಮೂಲಕ ರಾಜ್ಯರಾಜಕರಾರಣದ ಮಹತ್ವದ ಬೆಳವಣಿಗೆ ಮತ್ತು ಅದರ ಫಲಿತಾಂಶವನ್ನು ಪ್ರಕಟಿಸಿದ್ದಾರೆ.

ರಾಜಕಾರಣದ ಬೆಳವಣಿಗೆಗಳ ಬಗ್ಗೆ ನಾವು,ನೀವು ಊಹೆ ಮಾಡಬಹುದು.ವಿಮರ್ಶೆ ಮಾಡಿ ಹೀಗೆ ಆಗುತ್ತೆ ಹಾಗೆ ಆಗುತ್ತೆ ಅಂತಾ ಹೇಳಬಹುದು ನಮಗೆ ಬೇಕಾದ ಹಾಗೆ ಕಲ್ಪನೆ ಮಾಡಬಹುದು ಆದ್ರೆ ಶಾಸಕರಿಗೆ ರಾಜಕಾರಣ ಎಲ್ಲಿ ಹೇಗೆ ನಡೆಯುತ್ತಿದೆ ಅನ್ನೋದು ಗೊತ್ತಿರುತ್ತದೆ.ಯಾಕಂದ್ರೆ ಅವರು ಎಲ್ಲ ಬೆಳವಣಿಗೆಗಳ ಪ್ರತ್ಯಕ್ಷದರ್ಶಿಯೂ ಆಗಿರುತ್ತಾರೆ.ಹೀಗಾಗಿ ಅವರು ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದು ನಾವು ನಂಬಲೇಬೇಕು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ ಉತ್ತರ ಕರ್ನಾಟಕದವರು ಸಿಎಂ ಆಗುವ ಕಾಲ ಕೂಡಿ ಬಂದಿದೆ ಮುಂದಿಮ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದು ಸತ್ಯ. ಯಾಕಪ್ಪಾ ಅಂದ್ರೆ ಈ ಮಾತನ್ನು ಹೇಳಿದ್ದು ಶಾಸಕ ವಿಶ್ವಾಸ್ ವೈದ್ಯ ಇವರ ಮಾತಿನ ಮೇಲೆ ವಿಶ್ವಾಸ ಇಡಲೇಬೇಕು

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *