Breaking News
Home / Breaking News / ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ

ಎಂಈಎಸ್ ನಾಯಕರು ಭಯೋತ್ಪಾದಕರು -ಟಿ ಎ ನಾರಾಯಣಗೌಡ

ಬೆಳಗಾವಿ – ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಕ್ಷ ಟಿ ಎ ನಾರಾಯಣಗೌಡರು
ಬೆಳಗಾವಿಯಲ್ಲಿ ಎಂಈಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಎಂಈಎಸ್ ನಾಯಕರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿ ಶಿವಸೇನಾ ಅಧಿಕಾರಕ್ಕೆ ಬಂದಿರುವ ವಿಚಾರ. ಶಿವಸೇನಾ ಅಧಿಕಾರಕ್ಕೆ ಬರುವುದೇ ಇಂತಹ ಗಡಿ ವಿಚಾರ ಮುಂದೆ ಇಟ್ಟುಕೊಂಡು ಶಿವಸೇನಾ ಸಾಮಾಜಿಕ ಕೆಲಸವನ್ನು ಮಾಡಿಕೊಂಡು , ಜನರ ಮುಂದೆ ಕಾರ್ಯವೈಖರಿ ಮುಂದೆ ಇಟ್ಟುಕೊಂಡು ಅಧಿಕಾರಕ್ಕೆ ಬಂದಿಲ್ಲ ಎಂದರು.

ಅಧಿಕಾರಕ್ಕೆ ಬರುವ ಮುಂಚೆ ಗಡಿ ವಿಚಾರ ಮುಂದೆ ಇಟ್ಟುಕೊಂಡು ಅಧಿಕಾರಕ್ಕೆ ಬರುತ್ತದೆ.
ಹೀಗೆ ಬೆಳಗಾವಿ ಗಡಿ ವಿಚಾರ ಮುಂದೆ ಇಟ್ಟುಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದಿದೆ.
ಮರಾಠಿಗರನ್ನು ಪ್ರಚೋದಿಸುವುದು, ಮರಾಠಿಗರನ್ನು ಎತ್ತಿಕಟ್ಟೊದು ಉದ್ದೇಶವೇ ಶಿವಸೇನಾ ಉದ್ದೇಶ ವಾಗಿದೆ ಎಂದು ನಾರಾಯಣಗೌಡರು ಆರೋಪಿಸಿದರು

ಬೆಳಗಾವಿಯ ಗಡಿ ವಿಚಾರ ಮಹಾಜನ್ ಆಯೋಗದ ವರದಿಯಲ್ಲಿ ಮುಗಿದುಹೋದ ಅಧ್ಯಾಯ. ಮಹಾರಾಷ್ಟ್ರ ಸಿಎಂ ಉದ್ದವ್ ಠಾಕರೆ ಗೆ ಸಂವಿಧಾನದ ಅರಿವಿಲ್ಲ. ಗೌರವ ಇಲ್ಲಾ ಸಿಎಂ ಉದ್ದವ್ ಠಾಕರೆ ಬೆಳಗಾವಿಯನ್ನ ಮಹಾರಾಷ್ಟ್ರ ಕ್ಕೆ ಸೇರಿಸಿಕೊಳ್ಳುತ್ತೇವೆ ಎಂಬ ಹೇಳಿಕೆ ವಿಚಾರ. ಇದು ಉದ್ದಟತನದ ಮಾತು.
ಬೆಳಗಾವಿಯ ಒಂದೀಂಚೂ ಜಾಗ ಮಹಾರಾಷ್ಟ್ರ ಕ್ಕೆ ಹೋಗಲು ಬಿಡಲ್ಲ. ಸಾದ್ಯವಿಲ್ಲ.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು

ಎಂಈಎಸ್ ನವರು ಪದೆ ಪದೆ ಗಡಿ ವಿಚಾರ ಪ್ರಸ್ತಾಪ ಮಾಡ್ತಾರೆ.  ನನಗೆ ಅನಿಸುತ್ತದೆ. ಪಾಕಿಸ್ತಾನದ ಗಡಿಯಲ್ಲಿ ಹೇಗೆ ಭಯೋತ್ಪಾದಕ ಕೆಲಸ ಮಾಡ್ತಾರೆ , ಹಾಗೆ ಇವರೂ ಕೂಡಾ ಬೆಳಗಾವಿಯ ಗಡಿಯಲ್ಲಿ ಕೆಲಸ ಮಾಡ್ತಾರೆ ಎಂದು ನಾರಾಯಣಗೌಡರು
ಎಂಇಎಸ್ ಶಿವಸೇನಾ ರನ್ನು ಪಾಕಿಸ್ತಾನದ ಭಯೋತ್ಪಾದಕರಿಗೆ ಹೋಲಿಸಿದರು

ಎಂಇಎಸ್ ಕಾನೂನು ಚೌಕಟಿನಲ್ಲಿ ಹೋರಾಡಲಿ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಆದ್ರೆ ಎಂಇಎಸ್ ಸತ್ತು ಮಲಗಿದೆ. ಮತ್ತೆ ಜೀವ ಕೊಡುವ ಕೆಲಸಕ್ಕೆ ಇವರು ಹೊರಟ್ಟಿದ್ದಾರೆ. ಎಂಇಎಸ್ ಮುಗಿದು ಹೋದ ಅಧ್ಯಾಯ. ಕನ್ನಡಿಗರನ್ನು ಕೆಣಕಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ. ನಾವು ಸುಮ್ಮನಿರಲ್ಲ ಎಂದು ನಾರಾಣಗೌಡರು ಎಚ್ಚರಿಕೆ ನೀಡಿದ್ರು

ಗಡಿ ವಿಚಾರವಾಗಿ ಮೊಟ್ಟಮೊದಲ್ಲಿ ಹೋರಾಟ ಮಾಡುತ್ತೇವೆ ಅಧಿವೇಶನ ಬೆಳಗಾವಿಯಲ್ಲಿ ‌ನಡೆಯುವಹಾಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲಿಯ ಪ್ರತಿ ನಿಧಿಗಳು ಇರದ ಬಗ್ಗೆ ಹೋರಾಡಬೇಕು ಗಡಿ ವಿಚಾರದಲ್ಲಿ ಸರ್ಕಾರ ಗಡಿ ಉಸ್ತುವಾರಿ, ಗಡಿ ಅಭಿವೃದ್ಧಿ ಪ್ರಾಧಿಕಾರ
ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಕನ್ನಡಕ್ಕಾಗಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುತ್ತದೆ.
ಬೆಳಗಾವಿಯಲ್ಲಿ ಎಂಇಎಸ್ ಸಮಾವೇಶದಲ್ಲಿ ಶರದ್ ಪವಾರ್ ಕರೆತರುವ‌ ವಿಚಾರ.
ಶರದ್ ಪವಾರ್ ಇಲ್ಲಿ ಬಂದು ಕರ್ನಾಟಕದ ವಿರೋಧ ನೀತಿ ಅನುಸರಿಸಿದ್ರೆ ಅದಕ್ಕೆ ತಕ್ಕ ಪಾಠ ಕರವೇ ಕಲಿಸುತ್ತದೆ. ಶರದ್ ಪವಾರ್ ಬೆಳಗಾವಿಯ ಗಡಿ ವಿಚಾರ ಕೆದಕುವುದು ಆದ್ರೆ ಅದೇ ಸಭೆಯಲ್ಲಿ ಪವಾರ್ ಗೆ ಹೇಗೆ ಉತ್ತರ ಕೊಡಬೇಕು ನಮಗೆ ಗೊತ್ತಿದೆ.ಎಂದರು

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *