Breaking News

Tag Archives: Belagavi smart city

ಡಿಸಿಸಿ ಬ್ಯಾಂಕ ಚುನಾವಣೆ ,ಬಾಲಚಂದ್ರ ನಿರ್ಣಯವೇ ಅಂತಿಮ- ರಮೇಶ್ ಜಾರಕಿಹೊಳಿ

ಬೆಳಗಾವಿ: ಮಹೇಶ ಕುಮಟಳ್ಳಿ ಬಾಯಲ್ಲಿ ರಮೇಶ ಜಾರಕಿಹೊಳಿ‌‌‌ ನನಗೆ ಅನ್ಯಾಯ ಮಾಡಿದ್ದಾರೆ ಎಂಬ ಶಬ್ದ ಹೊರಬಂದದ್ದೇ ಆದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ‌ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಹೇಶ ಕುಮಟಳ್ಳಿಗೆ ಮಂತ್ರಿ ಸ್ಥಾನ ನೀಡಬೇಕೆಂದು ನಾನು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇನೆ. ಅವರ ಹೆಸರಿನಲ್ಲಿ ನಾನು ಅನ್ಯಾಯ ಮಾಡಿಲ್ಲ. ಮಹೇಶ ಕುಮಟಳ್ಳಿ ನಾನು‌ ಅನ್ಯಾಯ ಮಾಡಿದ್ದೇನೆ ಎಂದು ಹೇಳಿದರೆ ಮಂತ್ರಿ ಸ್ಥಾನಕ್ಕೆ …

Read More »

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಯತ್ನಾಳ ಒತ್ತಾಯ

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಯತ್ನಾಳ ಒತ್ತಾಯ ಬೆಳಗಾವಿ- ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಸುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ. ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಯತ್ನಾಳ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಒಂದು ತಿಂಗಳ ಕಾಲ ಅಧಿವೇಶನ ನಡೆಯಬೇಕು,ಕೃಷ್ಣಾ ನೀರಾವರಿ ಯೋಜನೆಗಳ ಸದುಪಯೋಗ ಆಗಬೇಕು ಬಜೆಟ್ ನಲ್ಲಿ ತಾರತಮ್ಯ ನಿವಾರಿಸಬೇಕು ಎಂದು ಯತ್ನಾಳ ಮುಖ್ತಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡರು ಈ …

Read More »

ಎಲ್ಲರಿಗೂ ಸೂರು ಪ್ರಧಾನಿ ಆಶಯ-ಸುರೇಶ ಅಂಗಡಿ

ದಿಶಾ ಸಮಿತಿಯ ತ್ರೈಮಾಸಿಕ ಸಭೆ; ಎಲ್ಲರಿಗೂ ಸೂರು ಪ್ರಧಾನಿ ಆಶಯ —————————————————————— ವಸತಿ ಯೋಜನೆ ಚುರುಕುಗೊಳಿಸಲು ಕೇಂದ್ರ ಸಚಿವ ಸುರೇಶ್ ಅಂಗಡಿ ಸೂಚನೆ ‌ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ದೇಶದ ಪ್ರತಿ ಕುಟುಂಬಕ್ಕೂ ೨೦೨೨ ರ ವೇಳೆಗೆ ಮನೆ ಒದಗಿಸಬೇಕು ಎಂಬುದು ಪ್ರಧಾನಮಂತ್ರಿಗಳ ಕನಸಾಗಿದೆ. ಆದ್ದರಿಂದ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು. …

Read More »

ಜಿಲ್ಲಾಧಿಕಾರಿಗಳ ಕಚೇರಿ ಎದುರು ನೇರೆ ಸಂತ್ರಸ್ತರ ಧರಣಿ

ಬೆಳಗಾವಿ-ಸಮರ್ಪಕ ನೆರೆ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು *ನೆರೆ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಧರಣಿ ನಡೆಸಲಾಯಿತು ಧರಣಿಯಲ್ಲಿ ನೂರಾರು ಜನ ಸಂತ್ರಸ್ತರು ಪಾಲ್ಗೊಂಡಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಎಲ್ಲ ಸಂತ್ರಸ್ತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗ್ತೀನಿ ,ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡೋಣ ಇಲ್ಲ ಅಂದ್ರೆ ಇಲ್ಲೇ ಟೆಂಟ್‌ …

Read More »

ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ

ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ನಗರದ ಮಿಲನ್ ಹೋಟೆಲ್ ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶನಿವಾರ(ಫೆ.೧೫) ಚಾಲನೆ ನೀಡಿದರು. ೧೫.೦೪ ಕೋಟಿ ರೂಪಾಯಿ ವೆಚ್ಚದ ಸ್ಮಾರ್ಟ್ ರಸ್ತೆ ಜತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು …

Read More »

ಮೀಸಲಾತಿ ರದ್ದು ಮಾಡಲು ಕೇಂದ್ರ ಸರ್ಕಾರದ ಹುನ್ನಾರ,ಬೆಳಗಾವಿ ಕಾಂಗ್ರೆಸ್ ಆರೋಪ

ಬೆಳಗಾವಿ- ಮಾನ್ಯ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಅಭಿಪ್ರಾಯ ವ್ಯೆಕ್ತ ಪಡಿಸಿದ್ದು ಇದನ್ನು ಮರು ಪರಶೀಲನೆ ಮಾಡುವಂತೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಗ್ರಾಮೀಣ,ಮತ್ತು ನಗರ ಜಿಲ್ಲಾ ಘಟಕದ ಕಾರ್ಯಕರ್ತರು ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು ಗ್ರಾಮೀಣ ಜಿಲ್ಲಾ ಘಟಕದ ಅದ್ಯಕ್ಷ ವಿನಯ ನಾವಲಗಟ್ಟಿ ಮತ್ತು ನಗರ ಜಿಲ್ಲಾ ಘಟಕದ …

Read More »

ಬೆಳಗಾವಿಯ ಮರಾಠಿ ಸಂಘ,ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ ಡೋನೇಶನ್…!!!

ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ…… ಬೆಳಗಾವಿ- ಗಡಿಭಾಗದ ಬೆಳಗಾವಿ,ನಿಪ್ಪಾಣಿ,ಖಾನಾಪೂರ ಸೇರಿದಂತೆ ಕರ್ನಾಟಕದಲ್ಲಿರುವ ಸರ್ಕಾರಿ ಮರಾಠಿ,ಶಾಲೆಗಳಿಗೆ,ಮರಾಠಿ ಸಂಘ ಸಂಸ್ಥೆಗಳಿಗೆ, ಮರಾಠಿ ಗ್ರಂಥಾಲಯ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಸಂಘಟನೆಗಳಿಗೆ ಧನ ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿದೆ. ಸರ್ಕಾರಿ ಮರಾಠಿ ಶಾಲೆಗಳ ಎಸ್ ಡಿ ಎಂ ಸಿ ಗಳು ಮಹಾರಾಷ್ಟ್ರ ಸರ್ಕಾರದ ಸಹಾಯ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕ …

Read More »

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯ ಕತ್ತು ಹಿಸುಕಿದ ಪಾಪಿ ಪತಿ

ಪ್ರೇಮಿಗಳ ದಿನದಂದೇ ಎಂಟು ವರ್ಷದ ಪ್ರೀತಿಯನ್ನು ಕೊಲೆ ಮಾಡಿದ ಪಾಪಿ ಪತಿ ಬೆಳಗಾವಿ: ಹೆಣ್ಣು ಹಡೆದರೆ ಪಾಪ,ಹಡೆದವಳಿಗೆ ಅದರ ಶಾಪ ಎನ್ನುವಂತೆ ಹೆಣ್ಣು ಹಡೆದ ಹೆಣ್ಣು ಅದೆಷ್ಟೋ ಕಷ್ಟ ಅನುಭವಿಸುತ್ತಾಳೆ,ಕೊನೆಗೆ ಈ ಪಾಪಿ ಸಮಾಜದಲ್ಲಿ ಯಾವ ರೀತಿ ತನ್ನ ಜೀವ ಕೊಡುತ್ತಾಳೆ ಅನ್ನೋದಕ್ಕೆ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿಯಾಗಿದೆ.ಪ್ರೇಮಿಗಳ ದಿನದಂದೇ ಪಾಪಿ ಪತಿಯೊಬ್ಬ ತನ್ನ ಮಡದಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಕತ್ತು ಹಿಸುಕಿ ಪತಿಯಿಂದಲೇ ಪತ್ನಿಯ ಹತ್ಯೆಗೈದಿರುವ …

Read More »

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಡಿಜಿಟಲ್ ಲೈಬ್ರರಿ

ಬೆಳಗಾವಿ- ಬೆಳಗಾವಿ ನಗರ ಸುಂದರ ನಗರ,ಸ್ಮಾರ್ಟ್ ಸಿಟಿ,ರಾಜ್ಯದ ಎರಡನೇಯ ರಾಜಧಾನಿಯಾಗಿರುವ ನಮ್ಮ ಬೆಳಗಾವಿ ಹೈಟೆಕೆ ಸಿಟಿಯಾಗುತ್ತಿದೆ.ಜೊತೆಗೆ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಆಗುತ್ತಿವೆ.ಅಶೋಕ ನಗರ,ಹನುಮಾನ ನಗರ ಸೇರಿದಂತೆ ನಗರದ ಇತರ ಭಾಗಗಳಲ್ಲಿ ಹೈಟೆಕ್ ಸ್ವೀಮೀಂಗ್ ಫೂಲ್ ಗಳು,ಒಳಾಂಗಣ ಕ್ರೀಡಾಂಗಣಗಳು ನಿರ್ಮಾಣವಾಗಿದ್ದು,ಮೈದಾನಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗ …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ…!!

ಬೆಳಗಾವಿ- ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸರ್ಕಾರ ಬದಲಾಯಿಸಿದೆ.ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಬದಲಾಯಿಸಿ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇಂದು ಮದ್ಯಾಹ್ನದ ಹೊತ್ತಿಗೆ ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಅಧಿಕೃತ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.

Read More »