Breaking News
Home / Breaking News / ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಡಿಜಿಟಲ್ ಲೈಬ್ರರಿ

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಡಿಜಿಟಲ್ ಲೈಬ್ರರಿ

ಬೆಳಗಾವಿ- ಬೆಳಗಾವಿ ನಗರ ಸುಂದರ ನಗರ,ಸ್ಮಾರ್ಟ್ ಸಿಟಿ,ರಾಜ್ಯದ ಎರಡನೇಯ ರಾಜಧಾನಿಯಾಗಿರುವ ನಮ್ಮ ಬೆಳಗಾವಿ ಹೈಟೆಕೆ ಸಿಟಿಯಾಗುತ್ತಿದೆ.ಜೊತೆಗೆ ಮೆಟ್ರೋಪಾಲಿಟಿನ್ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿದೆ.

ಬೆಳಗಾವಿ ನಗರದಲ್ಲಿ ಎಲ್ಲಿ ನೋಡಿದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆ ಆಗುತ್ತಿವೆ.ಅಶೋಕ ನಗರ,ಹನುಮಾನ ನಗರ ಸೇರಿದಂತೆ ನಗರದ ಇತರ ಭಾಗಗಳಲ್ಲಿ ಹೈಟೆಕ್ ಸ್ವೀಮೀಂಗ್ ಫೂಲ್ ಗಳು,ಒಳಾಂಗಣ ಕ್ರೀಡಾಂಗಣಗಳು ನಿರ್ಮಾಣವಾಗಿದ್ದು,ಮೈದಾನಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈಗ ಬೆಳಗಾವಿ ನಗರದಲ್ಲಿ ಮೂರು ಕೋಟಿ ರೂ ವೆಚ್ಚದಲ್ಲಿ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿರುವ ಭತ್ರಪತಿ ಶಿವಾಜಿ ಮಹಾರಾಜ ಉದ್ಯಾನವನದ ಪಕ್ಕದಲ್ಲಿರುವ ಮಹಾನಗರ ಪಾಲಿಕೆಯ ಹಳೆಯ ಕಟ್ಟಡವನ್ನು ನೆಲಸಮ ಮಾಡಿ ಅಲ್ಲಿಯೇ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುತ್ತಿದೆ.

ಕಟ್ಟಡ ನಿರ್ಮಾಣಕ್ಕೆ 1 ಕೋಟಿ 40 ಲಕ್ಷ, ರೂ ನಂತರ ಡಿಜಿಟಲ್ ಲೈಬ್ರರಿ ಸೆಟ್ ಮಾಡಲು 1ಕೋಟಿ 60 ಲಕ್ಷ ರೂ ಖರ್ಚು ಮಾಡುವ ಯೋಜನೆ ರೂಪಿಸಿ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಸ್ಮಾರ್ಟ್ ಸಿಟಿ ಎಂ ಡಿ ಶಶಿಧರ ಕುರೇರ ತಿಳಿಸಿದ್ದಾರೆ.

ಡಿಜಿಟಲ್ ಲೈಬ್ರರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯಗಳು,IAS,KAS,ಸೇರಿದಂತೆ ಇತರ ಸ್ಪರ್ದಾತ್ಮಕ ಪರೀಕ್ಷೆಗಳ ವಿಷಯಗಳು ,E book ಸೇರಿದಂತೆ ಇನ್ನಿತರ ವಿಷಯಗಳು ಬೆಳಗಾವಿಯ ಡಿಜಿಟಲ್ ಲೈಬ್ರಿಯಲ್ಲಿ ಲಭ್ಯವಾಗಲಿವೆ.

About BGAdmin

Check Also

ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ

ರಾಜ್ಯ ಆಹಾರ ಆಯೋಗದ ಸಭೆ; ಉತ್ತಮ ಕೆಲಸಕ್ಕೆ ಪ್ರಶಂಸೆ ————————————————————– ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ ಬೆಳಗಾವಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ