Breaking News
Home / Breaking News / ಬೆಳಗಾವಿಯ ಮರಾಠಿ ಸಂಘ,ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ ಡೋನೇಶನ್…!!!

ಬೆಳಗಾವಿಯ ಮರಾಠಿ ಸಂಘ,ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ ಡೋನೇಶನ್…!!!

ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ 20 ಕೋಟಿ……

ಬೆಳಗಾವಿ- ಗಡಿಭಾಗದ ಬೆಳಗಾವಿ,ನಿಪ್ಪಾಣಿ,ಖಾನಾಪೂರ ಸೇರಿದಂತೆ ಕರ್ನಾಟಕದಲ್ಲಿರುವ ಸರ್ಕಾರಿ ಮರಾಠಿ,ಶಾಲೆಗಳಿಗೆ,ಮರಾಠಿ ಸಂಘ ಸಂಸ್ಥೆಗಳಿಗೆ, ಮರಾಠಿ ಗ್ರಂಥಾಲಯ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಸಂಘಟನೆಗಳಿಗೆ ಧನ ಸಹಾಯ ಮಾಡಲು ಮಹಾರಾಷ್ಟ್ರ ಸರ್ಕಾರ ಅರ್ಜಿಗಳನ್ನು ಅಹ್ವಾನಿಸಿದೆ.

ಸರ್ಕಾರಿ ಮರಾಠಿ ಶಾಲೆಗಳ ಎಸ್ ಡಿ ಎಂ ಸಿ ಗಳು ಮಹಾರಾಷ್ಟ್ರ ಸರ್ಕಾರದ ಸಹಾಯ ಕೋರಿ ಮಹಾರಾಷ್ಟ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ.ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕ ವಾಗಿದ್ದು ಕರ್ನಾಟಕದ ಮರಾಠಿ ಸಂಘ ಸಂಸ್ಥೆಗಳು ಧನ ಸಹಾಯಕ್ಕಾಗಿ ಮಹಾರಾಷ್ಟ್ರ ಸರಗಕಾರದ ಮುಂದೆ ಕೈಚಾಚಿದ್ದು,ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಬರೊಬ್ಬರಿ 20 ಕೋಟಿ ಖರ್ಚು ಮಾಡಲು ನಿರ್ಧರಿಸಿ ಅದಕ್ಕಾಗಿಯೇ ಒಂದು ಸಮೀತಿಯನ್ನು ರಚಿಸಿದೆ.

ಕರ್ನಾಟಕ ಸರ್ಕಾರ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ನಾಟಕ ಮಾಡಿಕೊಂಡು ಮಹಾರಾಷ್ಟ್ರ ಏಕೀಕರಣ ಸಮೀತಿ ಮಹಾರಾಷ್ಟ್ರ ಸರ್ಕಾರದಿಂದ ಗಡಿ ಭಾಗದ ಮರಾಠಿ ಸಂಸ್ಥೆಗಳಿಗೆ ಧನ ಸಹಾಯಾಡಿ ಕರ್ನಾಟಕ ಸರ್ಕಾರದ ಮಾನ ಕಳೆಯಲು ಈ ನಾಡವಿರೋಧಿ ಎಂಈ ಎಸ್ ನಾಯಕರು ಕುತಂತ್ರ ನಡೆಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಇಲ್ಲಿಯ ಸರ್ಕಾರಗಳು ಕನ್ನಡ ಸಂಘಟನೆಗಳಿಗೆಯಾವತ್ತೂ ಆರ್ಥಿಕ ಸಹಾಯ ಮಾಡಿದ ಉದಾಹರಣೆ ಇಲ್ಲವೇ ಇಲ್ಲ ಆದ್ರೆ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷಿಕರನ್ನು ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿಕಟ್ಟಲು ಮುಗ್ದ ಮರಾಠಿ ಭಾಷಿಕರನ್ನು ಪ್ರಚೋದಿಸಲು 20 ಕೋಟಿ ಖರ್ಚು ಮಾಡುತ್ತಿದೆ

ಧನಸಹಾಯ ಕೋರಿ ಬೆಳಗಾವಿಯ ಮರಾಠಿ ಸಂಘ ಸಂಸ್ಥೆಗಳು ಮಹಾರಾಷ್ಟ್ರ ಸರ್ಕಾರಕ್ಕೆ ಎಂ ಈ ಎಸ್ ಮುಖಾಂತರ ಅರ್ಜಿ ಸಲ್ಲಿಸುತ್ತಿವೆ

About BGAdmin

Check Also

ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ

ರಾಜ್ಯ ಆಹಾರ ಆಯೋಗದ ಸಭೆ; ಉತ್ತಮ ಕೆಲಸಕ್ಕೆ ಪ್ರಶಂಸೆ ————————————————————– ವಸತಿನಿಲಯ, ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಡಾ.ಕೃಷ್ಣಮೂರ್ತಿ ಸೂಚನೆ ಬೆಳಗಾವಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ