ತಾಲೂಕಗಳ ಪುನರ್ರಚನೆ ಮರುಪರಶೀಲನೆ-ಕಾಗೋಡು ತಿಮಪ್ಪ
ಬೆಳಗಾವಿ-ರಾಜ್ಯದಲ್ಲಿ 43 ತಾಲೂಕುಗಳನ್ನು ಪುನರ್ರಚನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಆದರೆ ಆರ್ಥಿಕ ತೊಂದರೆಯಿಂದಾಗಿ ತಾಲೂಕುಗಳನ್ನು ಪನರ್ರಚನೆ ಮಾಡಲು ಸಾಧ್ಯವಾಗಿಲ್ಲ ಆರ್ಥಿಕ ಇತಿಮಿತಿಗಳನ್ನು ಗಮನಿಸಿ ಈ ವಿಷಯವನ್ನು ಮರು ಪರಶೀಲನೆ ಮಾಡಲಾಗುದು ಎಂದು ಕಂದಾಯ ಸಚಿವ ಕಾಗೋಡು ತಿಮಪ್ಪ ಭರವಸೆ ನೀಡಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿರುವ ಸಿಬ್ಬಂಧಿ ಕೊರತೆಯನ್ನು ನೀಗಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ,ರಾಜ್ಯದಲ್ಲಿ ತಹಶೀಲದಾರರ ಕೊರತೆ ಇದ್ದು ಕೂಡಲೇ ನೇಮಕ ಮಾಡಿಕೊಳ್ಳುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು
ಬೇರೆ ಬೇರೆ ಕಾರಣಗಳಿಂದ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವದನ್ನು ಕೈಬಿಡಲಾಗಿತ್ತು ಹೀಗಾಗಿ ಜಿಲ್ಲೆಯನ್ನು ವಿಭಜಿಸುವ ವಿಷಯವನ್ನು ಪ್ರಸ್ತಾಪ ಮಾಡುವದಿಲ್ಲ ಎಂದು ಸಚಿವರು ಕಡ್ಡಿ ಮುರದಂತೆ ಹೇಳಿದರು.
