ಬೆಳಗಾವಿ- ಬಿಜೆಪಿ ಮುಖಂಡ ಉಮೇಶ್ ಕತ್ತಿ ಅವರಿಗೆ ಗೂಟದ ಕಾರು ಗ್ಯಾರಂಟಿ, ಮುಂದಿನ ಸಚಿವ ಸಂಪುಟದ ವಿಸ್ತರಣೆಯಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಅವರು ನನ್ನನ್ನು ಬಿಡ್ತಾರಾ..? ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಪ್ರಶ್ನಿಸಿದ್ದಾರೆ ಉಮೇಶ್ ಕತ್ತಿ ಸಚಿವರಾಗುವದು ಗ್ಯಾರಂಟಿ ಎಂದು ಸಿಎಂ ಸುಳಿವು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಅಥಣಿ,ಕಾಗವಾಡ,ಗೋಕಾಕಿನಲ್ಲಿ ಒಳ್ಳೆಯ ವಾತಾವರಣ ಇದೆ,ರಾಜ್ಯದಲ್ಲಿ ಹದಿನೈದು ಸ್ಥಾನ ಗೆಲ್ಲುತ್ತೇವೆ.ಮುಂದಿನ ದಿಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ವಿಶೇಷ ಗಮನ ಕೊಡ್ತೇವಿ,ನೀರಾವರಿ ಯೋಜನೆಗಳಿಗೆ ಆದ್ಯತೆ ಕೊಡ್ತೇವಿ,ಪರಶಿಷ್ಟಜಾತಿ,ಪರಶಿಷ್ಟ ಪಂಗಡ,ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣಕ್ಕಾಗಿ ಮುಂದಿನ ಬಜೆಟ್ ನಲ್ಲಿ ಯೋಜನೆಗಳನ್ನು ರೂಪಿಸುತ್ತೇವೆ ಎಂದು ಸಿ ಎಂ ಹೇಳಿದರು.
ಸಿಎಂ ಹೇಳಿಕೆಯ ವಿಡಿಯೋ ನೋಡಲು ಈ ಲಿಂಕ್ ಒತ್ತಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ