ಬೆಳಗಾವಿ- 2008 ರಲ್ಲಿದ್ದ ಬಿ.ಎಸ್ ಯಡಿಯೂರಪ್ಪ ಈಗಿಲ್ಲ ಯಾಕಂದ್ರೆ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ,ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮೀತರಾಗಿದ್ದಾರೆ.ಎಲ್ಲ ಅಭಿವೃದ್ಧಿ ಕೆಲಸಗಳನ್ನು ಶಿವಮೊಗ್ಗ ಜಿಲ್ಲೆಗೆ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಸಿಎಂ ವಿರುದ್ಧ ಅಪಸ್ವರ ಎತ್ತಿ ಬಂಡಾಯದ ಬಾವುಟ ಹಾರಿಸಿದ್ದಾರೆ.
ಉಮೇಶ ಕತ್ತಿ ನಿನ್ನೆ ರಾತ್ರಿ ಕೆಲವು ದಿನಪತ್ರಿಕೆಗಳಿಗೆ ಹೇಳಿಕೆ ನೀಡಿದ್ದು,ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದೆ,ಕಳೆದ ಒಂದು ವರ್ಷದಿಂದ,ಮೌನ ವಾಗಿದ್ದೆ,ಬಿಜೆಪಿ ನಾಯಕರು ಏನು ಬೇಕಾದ್ರೂ ತಿಳಿದುಕೊಳ್ಳಲಿ,ನನಗೆ ಮಂತ್ರಿಯಾಗೋದು ಮುಖ್ಯವಲ್ಲ,ಉತ್ತರ ಕರ್ನಾಟಕದ ಅಭಿವೃದ್ಧಿಯೇ ಮುಖ್ಯ ಎಂದು ಮಾಜಿ ಮಂತ್ರಿ,ಉಮೇಶ್ ಕತ್ತಿ ಈಗ ಬಿಜೆಪಿ ಸರ್ಕಾರದ ವಿರುದ್ಧವೇ ಉಲ್ಟಾ ಹೊಡೆದಿದ್ದಾರೆ.
ಉಮೇಶ್ ಕತ್ತಿ ಅವರ ಹೇಳಿಕೆ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದು,ಸಚಿವ ಸಂಪುಟದ ವಿಸ್ತರಣೆಯಲ್ಲೂ ಅವರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎನ್ನುವ ಲೆಕ್ಕಾಚಾರ ಇತ್ತು ಆದ್ರೆ,ನಿನ್ನೆ ಉಮೇಶ್ ಕತ್ತಿ ಅವರ ಹೇಳಿಕೆ ಗಮನಿಸಿದರೆ,ಅವರಿಗೆ ಅಸಮಾಧಾನ ವಾಗಿದೆ ಎನ್ನುವದು ಸ್ಪಷ್ಟವಾಗುತ್ತದೆ.
ಸಚಿವ ಸಂಪುಟದ ವಿಸ್ತರಣೆಯಲ್ಲಿ ಉಮೇಶ್ ಕತ್ತಿ ಅವರಿಗೆ ಮಂತ್ರಿ ಸ್ಥಾನ ಸಿಗದಿದ್ದರೆ,ಅವರು ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸುವ ಸಾದ್ಯತೆ ಇದೆ.