Breaking News
Home / Breaking News / ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ-ಶಿವಶಂಕರ

ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ-ಶಿವಶಂಕರ

ಬೆಳಗಾವಿ

ವಿಶಾಲ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ಮಾಡೋಣ. ಉತ್ತರ ಕರ್ನಾಟಕ ಅಭಿವೃದ್ಧಿಯಿಂದ ವಂಚಿತಗೊಂಡಿದೆ, ಬಜೆಟ್ ನಲ್ಲಿ ಆದ್ಯತೆ ನೀಡಿಲ್ಲ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಹಾಕುವುದು ಸರಿಯಲ್ಲ ಎಂದು ಕೃಷಿ ಸಚಿವ ಶಿವ ಶಂಕರ ರಡ್ಡಿ ಹೇಳಿದರು.
ಶನಿವಾರ ಬೆಳಗಾವಿ ರಡ್ಡಿ ಸಮುದಾಯ ಭವನ‌‌ ನಿರ್ಮಾಣ ಹಂತದಲ್ಲಿರುವ ಕಾಮಗಾರಿ ವೀಕ್ಷಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ ಎಲ್ಲರೂ ಸೇರಿಕೊಂಡು ಚಿಂತನೆ ನಡೆಸಿ ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಿ ಇನಷ್ಟು ಅಭಿವೃದ್ಧಿ ಪಡಿಸಲಾಗುವುದು.

ಉತ್ತರ ಕರ್ನಾಟಕವನ್ನು ಯಾವದೇ ಸಂದರ್ಭದಲ್ಲಿಯೂ ವಿಭಜನೆ ಮಾಡಲು ಬಿಡುವುದಿಲ್ಲ. ಯಾರೋ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುತ್ತಿರುವುದು ಸೂಕ್ತವಲ್ಲ.

ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಅನುದಾನವಿದೆ. ಸಚಿವ ಎಚ್.ಕೆ.ಪಾಟೀಲ ಯಾವ ಆಧಾರದ ಮೇಲೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ ಗೋತ್ತಿಲ್ಲ ಅವರು ದೊಡ್ಡವರು ಅವರ ಹೇಳಿಕೆಗೆ ನಾನು ಮಾತನಾಡುವಷ್ಟು ದೊಡ್ಡವನಲ್ಲ. ಕೆಲವು ಕಡೆಗಳಲ್ಲಿ ಬಜೆಟ್ ಬಲ್ಲಿ ಲೋಪವಾಗಿದ್ದರೆ ಬರುವ ಬಜೆಟ್ ನಲ್ಲಿ ಸರಿಪಡಿಸಲಾಗುವುದು.

ಬಿಜೆಪಿಯವರು ಜಾತಿ, ಧರ್ಮದ ವಿಚಾರವನ್ನು ಕೆನಕುವ ರೀತಿಯಿಂದ ಜನರು ಸಮಾಧಾನವಾಗಿಲ್ಲ.

ಹೋರಾಟಗಳ ಮೂಲಕ ಜನತೆಗೆ ಸ್ಪಷ್ಟ ಆಡಳಿತ ನೀಡಲು ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದೇವೆ. ಸುಭದ್ರವಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಲಾಗುವುದು.

ರಾಜ್ಯದಲ್ಲಿ ವಾಡಿಕೆಗಿಂದ ಹೆಚ್ಚು ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಕೆಲ ತಾಲೂಕಿನಲ್ಲಿ ನಿರೀಕ್ಷೆಯಷ್ಟು ಆಗಲಿಲ್ಲ. 70ರಷ್ಟು ಭಾಗ ಕೃಷಿ ಬಿತ್ತನೆಯಾಗಿದೆ.

About BGAdmin

Check Also

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ …

Leave a Reply

Your email address will not be published. Required fields are marked *