ಪೋಲೀಸರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಕೊಡಿ

ಮಹಿಳಾ ದೌರ್ಜನ್ಯದ ವಿವಿಧ ರೂಪವನ್ನು ಕಂಡಿದ್ದೇನೆ. ಬೆಳಗಾವಿ ಸುತ್ತಲಿನ ೭ ಜಿಲ್ಲೆಗಳನ್ನು ಸೇರಿಸಿ ಮಹಿಳೆ ಸಬಲೆ ಎಂದು ಸಾಬೀತು ಪಡಿಸಲು ಈ ಕಾರ್ಯಾಗಾರ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಪ್ರಾಸ್ತಾವಿಕದಲ್ಲಿ ಹೇಳಿದರು

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು‌ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲು ಬೆಳಗಾವಿ ಇದರ ಸಹಯೋಗದಲ್ಲಿ ಇಂದಿನ ಮಹಿಳೆ ಎದುರಿಸುತ್ತಿರುವ ಸವಾಲುಗಳು ಹಾಗೂ ಮಹಿಳಾ ಸಬಲೀಕರಣ ವಿಭಾಗಮಟ್ಟದ ಮಹಿಳಾ ಕಾರ್ಯಾಗಾರವನ್ನು ಮಂಗಳವಾರ ಇಲ್ಲಿನ ವಿಟಿಯು ಜ್ಞಾನಸಂಗಮ ಆವರಣದ ಸಭಾಭವನದಲ್ಲಿ ಉದ್ಘಾಟಿಸಲಾಯಿ

ಮಹಿಳೆಯರ ಮೇಲಿನ ದೌರ್ಜನ್ಯ ಆತಂಕಕಾರಿ. ಪೊಲೀಸ್ ಮೂಲಕವೇ ನ್ಯಾಯ ಕಂಡುಕೊಳ್ಳಬೇಕಾಗಿದೆ. ಆಯೋಗಕ್ಕೆ ಹಕ್ಕಿಲ್ಲ. ಪೊಲೀಸರಿಗೆ ಜಾಗೃತಿ ಮೂಡಿಸುವ ತರಬೇತಿ‌ಕಾರ್ಯಾಗಾರ ಅಗತ್ಯ ಎಂದವರು ಅಭಿಪ್ರಾಯಪಟ್ಟರು.

ನಿರಾಳವಾಗಿರುವ ಕಾಲ ಇಂದಿಲ್ಲ. ನೇರವಾಗಿ ಬಂಧಿಸುವ ಅಧಿಕಾರವಿಲ್ಲ. ಪೊಲೀಸರ ಅಮಾನತಿಗೆ ಅವಕಾಶ ಅಥವಾ ಅಧಿಕಾರ ಆಯೋಗಕ್ಕೆ ಕೊಡಬೇಕು ಎಂದು ಸಿ.ಎಂಗೆ ಮನವಿ ಮಾಡಿದ ಅವರು ಮಹಿಳೆಯರ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸುವ ಪೊಲೀಸರ ಮೇಲೆ ಕಠಿಣಕ್ರಕ್ಕೆ ಒತ್ತಾಯ ಮಾಡಿದರು

ಹಾವೇರಿಯಲ್ಲಿ ಲಂಬಾಣಿ ೧೨೦೦ ಹೆಣ್ಣುಮಕ್ಕಳ ಗರ್ಭಕೋಶ ತೆಗೆದು ಮಾರಾಟ ಮಾಡಲಾಗಿದೆ. ಈ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಮನವಿ ಮಾಡಿಕೊಂಡರು ೨೧ನೇ ಶತಮಾನದ ಮಹಿಳೆಯರು ಕೂಡಾ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಿದೆ.ಮಹಿಳೆಯನ್ನು ಸದೃಢಪಡಿಸುವ ಕೆಲಸ ಆಗಬೇಕು ಎಂದರು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಸೇರಿದಂತೆ ಹಲವಾರು ಜನ ಗಣ್ಯರು ಉಪಸ್ಥಿತರಿದ್ದರು

 

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *