ಬೆಳಗಾವಿ – ಹೋಳಿ ಹಬ್ಬಕ್ಕೆ ಹೋಲಿ ಮಿಲನ್,ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಉತ್ಸವ,ನವರಾತ್ರಿ ಹಬ್ಬಕ್ಕೆ ದಾಂಡಿ ಉತ್ಸವ, ಕೃಷ್ಣ ಜನ್ಮಾಷ್ಠಮಿಗೆ ಕೆಸರಿನ ಗೆದ್ದೆ ಓಟ, ಹೀಗೆ ಪ್ರತಿಯೊಂದು ಹಬ್ಬದ ಸಂಧರ್ಭದಲ್ಲಿ ಬೆಳಗಾವಿ ನಿವಾಸಿಗರ ಮನರಂಜನೆಗಾಗಿ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸುವದು ಮಾಜಿ ಶಾಸಕ ಅಭಯ ಪಾಟೀಲರ ಸ್ಪೇಶ್ಯಾಲಿಟಿ
ನಾಳೆ ಭಾನುವಾರ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಅಭಯ ಪಾಟೀಲರು ಬೆಳಗಾವಿ ನಗರದ ಹಳೇ ಪಿಬಿ ರಸ್ತೆಯಲ್ಲಿರುವ ರೂಪಾಲಿ ಚಿತ್ರ ಮಂದಿರದ ಹಿಂದೆ ತಮಗೆ ಸೇರಿದ ಗದ್ದೆಯಲ್ಲಿ ಬೆಳಿಗ್ಗೆ 10-ಘಂಟೆಗೆ ಕೆಸರಿನ ಗೆದ್ದೆ ಓಟ,ಕೆಸರಿನ ಗದ್ದೆಯಲ್ಲಿಯೇ ಪುಟ್ ಬಾಲ್,ಹಗ್ಗ ಜಗ್ಗಾಟ,ದಹಿ ಹಂಡಿ ಒಡೆಯುವ ಸ್ಪರ್ದೆ ಸೇದಂತೆ ಹಲವಾರು ರೀತಿಯ ಸ್ಪ ರ್ದೆಗಳು ನಡೆಯಲಿವೆ
ಹಾಗಾದ್ರೆ ಸಂಡೇ ರಜೆಯ ದಿನ ಮನೆಯಲ್ಲಿ ಕುಳಿತುಕೊಂಡು ಹರಟೆಯ ಹೊಡೆಯುವ ಬದಲು ಕೆಸರಿನ ಗದ್ದೆಯ ಆನಂದ ಸವಿಯಿರಿ ನೀವೂ ಬನ್ನಿ ಬರುವಾಗ ನಿಮ್ಮ ಸ್ನೇಹಿತರನ್ನು ಹಾಗು ನಿಮ್ಮ ಮಕ್ಕಳನ್ನು ಕರೆ ತನ್ನಿ ಎಂದು ಮಾಜಿ ಶಾಸಕ ಅಭಯ ಪಾಟೀಲ ಆಮಂತ್ರಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ