ಬೆಳಗಾವಿ, : ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಮಳಿಗೆಗಳ ಬಹಿರಂಗ ಹರಾಜಿನಿಂದ ಸುಮಾರು ಎರಡು ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.
ಶನಿವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 226 ಮಳಿಗೆಗಳ ಹರಾಜಿನ ಮೂಲಕ ಈಗಾಗಲೇ 1,74,22,000 ರೂಪಾಯಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
39 ಮಳಿಗೆಗಳಿಗೆ ಸರಕಾರಿ ಸವಾಲಿಗಿಂತ ಕಡಿಮೆ ಮೊತ್ತಕ್ಕೆ ಕೇಳಲಾಗಿರುತ್ತದೆ. ಇದಲ್ಲದೇ ಬೇಡಿಕೆ ಇಲ್ಲದ 24 ಮಳಿಗೆಗಳನ್ನು ಹರಾಜು ಮಾಡಬೇಕಿರುತ್ತದೆ.
ಇವುಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡರೆ ಒಟ್ಟಾತೆ ಆದಾಯವು ಎರಡು ಕೋಟಿ ರೂಪಾಯಿಗಿಂತ ಅಧಿಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
****
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ