Breaking News
Home / Breaking News / ಬೆಳಗಾವಿ ಜಿಲ್ಲಾ ಪೋಲೀಸರ ದೀಪಾವಳಿ ಧಮಾಕಾ..ಆರು ಜನ ಕಳ್ಳರು ಬಲೆಗೆ,ನಲ್ವತ್ತು ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳ ವಶ

ಬೆಳಗಾವಿ ಜಿಲ್ಲಾ ಪೋಲೀಸರ ದೀಪಾವಳಿ ಧಮಾಕಾ..ಆರು ಜನ ಕಳ್ಳರು ಬಲೆಗೆ,ನಲ್ವತ್ತು ಲಕ್ಷಕ್ಕೂ ಅಧಿಕ ಮೊತ್ತದ ವಸ್ತುಗಳ ವಶ

*ಪ್ರತ್ಯೇಕ ಕಳ್ಳತನ ಪ್ರಕರಣ: ಆರು ಜನ ಅಂತರಾಜ ಡಕಾಯಿತರ ಬಂಧನ, ಕಳ್ಳತನದ ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕ ವಶಕ್ಕೆ*

ಹಗಲುಹೊತ್ತು ಮನೆ ಕಳ್ಳತನ, ಅಪಹರಣ, ಸುಲಿಗೆ, ಡಕಾಯಿತೆ ದಂಧೆಯಲ್ಲಿ ತೊಡಗಿದ ಆರು ಜನ ಅಂತರಾಜ್ ಡಕಾಯಿತರನ್ನು  ಹಾಗೂ ಕಳ್ಳತನದಲ್ಲಿ ತೊಡಗಿ ಕಾನೂನ ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಬೆಳಗಾವಿ ಜಿಲ್ಲೆ ಖಾನಾಪುರ, ನಂದಗಡ, ನಿಪ್ಪಾಣಿ ಗ್ರಾಮೀಣ ಹಾಗೋ ಗೋಕಾಕ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣಗಳ ಬೇಧಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಅವರು, ಖಾನಾಪೂರ ಪೊಲೀಸರು ಮೂವರು ಅಂತರಾಜ ಡಕಾಯಿತರನ್ನು ಬಂಧಿಸಿದ್ದು, ಇವರು ಖಾನಾಪೂರ, ನಂದಗಡ, ಕಿತ್ತೂರು, ಬೈಲಹೊಂಗಲ, ರಾಮನಗರ, ಯಲ್ಲಾಪೂರ, ಕಲಘಟಗಿ, ಮುಂಡಗೋಡ, ಗದಗ ಮತ್ತು ಹುಬ್ಬಳ್ಳಿ ಉಪನಗರಗಳಲ್ಲಿ ಇವರ ಮೇಲೆ ಹತ್ತು ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಓರ್ವ ಗೋವಾದವನಾಗಿದ್ದು ಇನ್ನಿಬ್ಬರು ಹಳೆಹುಬ್ಬಳ್ಳಿ ಮತ್ತು ಮುಂಡಗೋಡದವರಾಗಿದ್ದಾರೆ. ಇವರ ವಿರುದ್ದ ಮಹಾರಾಷ್ಟ್ರದಲ್ಲಿಯೂ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಇವರಿಂದ  ಲಕ್ಷ ರೂಪಾಯಿ ಲಕ್ಷಾ ನಗದು, ಚಿನ್ನ, ಕಾರು, ಮೋಟಾರ್ ಸೈಕಲ್ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ ಅವರು, ಈ ಕಾರ್ಯಾಚರಣೆ ಮಾಡಿದ ಪೊಲೀಸರಿಗೆ 20 ಸಾವಿರ ರೂಪಾಯಿಗಳ ವಿಶೇಷ ಬಹುಮಾನ ನೀಡಲಾಗುವುದು

ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಗಡಿಭಾಗಗಳಲ್ಲಿ ರೈಸ್ ಪುಲಿಂಗ್ ದಂಧೆ, ಸುಲಿಗೆ, ಅಪಹರಣದಲ್ಲಿ ತೊಡಗಿದ ಮೂವರು ಡಕಾಯಿತರನ್ನು ಬಂಧಿಸಿದ್ದಾರೆ. ಇವರು ಗೋವಾದ ಓರ್ವ ವ್ಯಕ್ತಿಯನ್ನು ಅಪಹರಿಸಿದ್ದು, ಅವರನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗಿದೆ. ಬಂಧಿತರಿಂದ ಆರುವರೆ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಗೋಕಾಕ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮನೆಕಳ್ಳುತನ ಮಾಡಿ ಕಾನೂನು ಸಂಘರ್ಷಕ್ಕೆ ಒಳಗಾದ 17 ವರ್ಷದ ಓರ್ವ ಬಾಲಕನನ್ನು ಗೋಕಾಕ ಪೊಲೀಸರು ಪತ್ತೆಹಚ್ಚಿದ್ದಾರೆ. ಈತನಿಂದ ಚಿನ್ನದ ಆಭರಣ, ಮೊಬೈಲ್ ದ್ವಿಚಕ್ರವಾಹನ ಸೇರಿದಂತೆ ಹತ್ತುವರೆ ಲಕ್ಷಮೌಲ್ಯದ ವಸ್ತುಗಳನ್ನು ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
####

*ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ವಿಶ್ರಾಂತಿ ತಂಗುದಾನ, ವಿಡಿಯೋ ಕ್ಯಾಮರಾ ಅಳವಡಿಕೆ*

ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆಯ ಮಧ್ಯ ನಂಬಿಕೆ ಉಳಿಸಿಕೊಳ್ಳುವ ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪ್ರಾಂಗಣದಲ್ಲಿ ಸಾರ್ವಜನಿಕರು ಠಾಣೆಗೆ ಸಂಪರ್ಕಿಸಲು, ದೂರು ದಾಖಲಿಸಲು ಬಂದಾಗ ಕುಳಿತುಕೊಳ್ಳಲು ನೂತನ ವಿಶ್ರಾಂತಿ ತಂಗುದಾನಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ತಂಗುದಾನದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸಾನ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದೂರು ದಾಖಲಿಸಲು ಮತ್ತು ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಿಸಿಕೊಡಲು ಅಗತ್ಯ ಮಾಹಿತಿಗಳನ್ನು ನೀಡಿ ಅನುಕೂಲ ಮಾಡಿಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪೊಲಿಸ್ ಠಾಣೆಗೆ ಬಂದಾಗ ಪೊಲೀಸರು ಸರಿಯಾಗಿ ದೂರು ದಾಖಲಿಸಿಕೊಳ್ಳುವುದಿಲ್ಲ. ಕಾಳಜಿ ವಹಿಸುವುದಿಲ್ಲ. ಅನಾಗರಿಕವಾಗಿ ವರ್ತಿಸಲಾಗುತ್ತದೆ ಎಂಬ ಆಪಾದನೆಗಳು ಸಾರ್ವಜನಿಕ ವಲಯದಿಂದ ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಇದನ್ನು ತಪ್ಪಿಸಲು ಜಿಲ್ಲೆಯ ಎಲ್ಲ 28 ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಸಾಧಿಸಲಾದ ವಿಡಿಯೋ ಕ್ಯಾಮರಾಗಳನು ಅಳವಡಿಸಲಾಗುತ್ತಿದೆ. ಈಗಾಗಲೇ ಕಿತ್ತೂರು ಮತ್ತು ನಿಪ್ಪಾಣಿ ಗ್ರಾಮೀಣ ಠಾಣೆಗಳಲ್ಲಿ ಮಾದರಿಯಾಗಿ ಅಳವಡಿಸಿ ಪ್ರಾಯೋಗಿಕಗೊಳಿಸಿ ಯಶಸ್ವಿಗೊಳಿಸಲಾಗಿದ್ದು, ಸದ್ಯದಲ್ಲಿಯೇ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿ, ಆ ಬಗ್ಗೆ ನಿಗಾವಹಿಸಲಾಗುವುದು. ಇದು ರಾಜ್ಯದಲ್ಲಿ ಪ್ರಥಮ ಪ್ರಯತ್ನ  ಎಂದು ಅವರು ಹೇಳಿದರು.
###

*ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಸರಿದಾರಿಗೆ ತರಲು ಸೂಕ್ತ ತಿಳುವಳಿಕೆ ಶಿಬಿರ :

 

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡರ ನೂತನ ಯೋಜನೆ*

ಕೌಟಂಬಿಕ ವಾತಾವರಣ, ಸಾಮಾಜಿಕ ಸನ್ನಿವೇಶ ವಿವಿಧ ಕಾರಣಗಳಿಂದಾಗಿ ಕಳ್ಳತನ ಹಾಗೂ ಇತರೆ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದ ಕಾನೂನು ಸಂಘರ್ಷಕ್ಕೆ ಒಳಗಾದ ಹದಿನೆಂಟು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಆರೋಗ್ಯಕರವಾಗಿ ಬದುಕಿ ಬಾಳುವಂತೆ ಪ್ರೇರೆಪಿಸುವ ಮಾರ್ಗದರ್ಶನ ಕಾರ್ಯಾಗಾರವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹದಿನೆಂಟು ವರ್ಷ ವಯಸ್ಸಿನೊಳಗಿನ ಮಕ್ಕಳುನ್ನು ಇಂದು ಬಾಲಾಪರಾಧಿ ಎಂದು ಕರೆದೆ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳೆಂದು ಗುರುತಿಸಲಾಗುತ್ತಿದೆ. ಇಂಥ ಮಕ್ಕಳು ಕುಟುಂಬದ ಆರ್ಥಿಕ ಪರಿಸ್ಥಿತಿ, ಕೌಟಂಬಿಕ ಕಲುಷುತ ವಾತಾವರಣ, ಸಮಾಜಿಕ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಇವರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಮುಂದೆ ಇವರು ಅಪಾರಾಧಿ ಸ್ಥಾನ ಆಕ್ರಮಿಸಿಕೊಂಡು ಬಿಡುವ ಹಂತಕ್ಕೆ ತಲುಪುತ್ತಾರೆ. ಇದನ್ನು ತಪ್ಪಿಸಲು ಇವರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ ಎಂದು ಮನಗಂಡ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಾಗದರ್ಶನ ಶಿಬಿರ ಹಮ್ಮಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಣಕಾಸಿ ನೆರವಿನ ಯೋಜನೆಯಲ್ಲಿ ಹಣಕಾಸಿ ಕೊರತೆ ಇರುವ ಆ ಮಕ್ಕಳ ಕುಟುಂಬಗಳಲ್ಲಿ ಕನಿಷ್ಠಮಟ್ಟದ ನೆರವು ನೀಡಿ ಮಕ್ಕಳನ್ನು ಸರಿದಾರಿಗೆ ತಂದು ಎಲ್ಲರಂತೆ ಬದುಕುವಂತೆ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಸದ್ಯದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

 

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *