Breaking News
Home / Breaking News / ಬೆಳಗಾವಿಯಲ್ಲಿ ಮೊಳಗಿತು ಜೈ..ಭವಾನಿ..ಜೈ.ಶಿವಾಜಿ…!!

ಬೆಳಗಾವಿಯಲ್ಲಿ ಮೊಳಗಿತು ಜೈ..ಭವಾನಿ..ಜೈ.ಶಿವಾಜಿ…!!

ಶಿವಾಜಿ ಮಹಾರಾಜ್ ಕೀ  ಜೈ..

ಬೆಳಗಾವಿ-ಛತ್ರಪತಿ ಶಿವಾಜಿ ಮಹಾರಾಜರ ಹೋರಾಟದ ಇತಿಹಾಸ ಅವರ ಸಾಹಸಿ ಜೀವನದ ಗತವೈಭವ ಬಿಂಬಿಸುವ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು
ಗಣ್ಯಾತಿ ಗಣ್ಯರು ಜನ ಪ್ರತಿನಿಧಿಗಳು ಮತ್ತು ಸಾವಿರಾರು ಜನ ಶಿವಾಜಿ ಅಭಿಮಾನಿಗಳು ಬೆಳಗಾವಿಯ ನರಗುಂದಕರ ಭಾವೆ ವೃತ್ತದಲ್ಲಿ ಶಿವಾಜಿ ಮಹಾರಾಜರ ಪಾಲ್ಕೀ ಗೆ ಪೂಜೆ ನೆರವೇರಿಸುವದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು

 ದೇಖಾವಾ ಪ್ರದರ್ಶನ ಕ್ಕಾಗಿ ಸಜ್ಜಾಗುತ್ತಿರುವ ಕಲಾವಿದ

ಶಾಸಕ ಸಂಬಾಜಿ ಪಾಟೀಲ  ಮೇಯರ್ ಸಂಜೋತಾ ಬಾಂಧೇಕರ ನಾಗೇಶ ಮಂಡೋಳ್ಕರ್ ದೀಪಕ ದಳವಿ ವಿಕಾಸ ಕಲಘಟಗಿ ಅನೀಲ ಬೆನಕೆ ಕಿರಣ ಜಾಧವ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಡಿಸಿಪಿ ರಾಧಿಕಾ ಅಮರನಾಥ ರೆಡ್ಡಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ನಗರ ಸೇವಕರು ಸೇರಿದಂತೆ ಹಲವಾರು ಜನ ಗಣ್ಯರು ಪಾಲ್ಗೊಂಡಿದ್ದರು

ಎಲ್ಲಿ ನೋಡಿದಲ್ಲಿ ಭಗವಾ ಧ್ವಜ ಹಿಡಿದ ಶಿವಾಜಿ ಮಹಾರಾಜರ ಅಭಿಮಾನಿಗಳು ಜೈ ಭವಾನಿ ಜೈ ಶಿವಾಜಿ ಎನ್ನುವ ಘೋಷಣೆ ಕೂಗುವದರ ಮೂಲಕ ಇಡೀ ಬೆಳಗಾವಿ ನಗರವನ್ನು ಶಿವಮಯ ಗೊಳಿಸಿದ್ದರು
ಮೆರಣಿಗೆಯಲ್ಲಿ ಶಿವಾಜಿ ಮಹಾರಾಜರ ಬಾಲ್ಯ ಯೌವನ ಅವರ ಹೋರಾಟದ ಇತಿಹಾಸ ಬಿಂಬಿಸುವ 70 ಕ್ಕೂ ಹೆಚ್ಚು ರೂಪಕಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ
ಸಂಪ್ರದಾಯಿಕ ವಾದ್ಯಗಳು ಝಾಂಜ್ ಪದಕಗಳು ಲೇಝಿಂ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ
ದೂರ ದೂರದ ಊರುಗಳಿಂದ ಶಿವಾಜಿ ಅಭಿಮಾನಿಗಳು ಬೆಳಗಾವಿಗೆ ಆಗಮಿಸಿ ಮೆರವಣಿಗೆಯ ಶೋಭೆಯನ್ನು ಇಮ್ಮಡಿ ಗೊಳಿಸಿದ್ದಾರೆ
ಶಿವಾಜಿ ಮಹಾರಾಜರ ಇಡೀ ಜೀವನವನ್ನೇ ಜನರ ಕಣ್ಮುಂದೆ ಇಡುವ ದೇಖಾವಾ(ರೂಪಕ) ಗಳು ಎಲ್ಲರ ಗಮನ ಸೆಳೆಯಲಿವೆ
ಇದೇ ಮೊದಲ ಬಾರಿಗೆ ಚವ್ಹಾಟ್ ಗಲ್ಲಿಯ ಶಿವಾಜಿ ಭಕ್ತರು ಮೆರವಣಿಗೆಯಲ್ಲಿ ಬಾಗವಹಿಸುವ ಶಿವ ಅಭಿಮಾನಿಗಳಿಗೆ ಶಿವ ಮಹಾಪ್ರಸಾದದ ವೆವಸ್ಥೆ ಮಾಡಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ
ಬೆಳಗಾವಿ ಮಹಾನಗರ ಪಾಲಿಕೆ ಮೆರವಣಿಗೆಯ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯೆವಸ್ಥೆ ಮತ್ತು ಪ್ರೇಕ್ಷಕರ ಗ್ಯಾಲರಿಗಳನ್ನು ನಿರ್ಮಿಸಿದೆ
ಭಾನುವಾರ ಸಂಜೆ ಆರಂಭವಾದ ಮೆರವಣಿಗೆ ಸೋಮವಾರ ಬೆಳಗಿನ ಜಾವಕ್ಕೆ ಮುಕ್ತಾಯ ವಾಗುತ್ತದೆ
ಬೆಳಗಾವಿಯ ಕೆಲವು ಸುದ್ಧಿ ವಾಹಿನಿಗಳು ಮೆರವಣಿಗೆಯ ನೇರ ಪ್ರಸಾರ ಮಾಡುತ್ತಿದ್ದು ಮೆರವಣಿಗೆಯ ಗತವೈಭವವನ್ನು ಮನೆಯಲ್ಲಿ ಕುಳಿತುಕೊಂಡೇ ನೋಡ ಬಹುದಾಗಿದೆ

Check Also

ಜಗದೀಶ್ ಶೆಟ್ಟರ್ ಕುವೆಂಪು ನಗರಕ್ಕೆ ಹೋಗಿದ್ದು ಯಾಕೆ ಗೊತ್ತಾ.??

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೆಳಗಿನ ಜಾವ ಕೋಳಿ ಕೂಗುವ ಮುನ್ನ ನಗರದಲ್ಲಿ ಜಗದೀಶ್ ಶೆಟ್ಟರ್ ಅವರ ಅವಾಜ್ ಕೇಳುತ್ತಿದೆ.ತಪ್ಪದೇ ದಿನನಿತ್ಯ ಚಹಾ …

Leave a Reply

Your email address will not be published. Required fields are marked *