ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ ಮನೆಗಳ್ಳತನ, ಸಾಮಾನ್ಯ ಕಳುವು, ಧರೋಡೆ, ಕಳ್ಳಸಾಗಾಣಿಕೆ, ಲಾಭಕ್ಕಾಗಿ ಕೊಲೆ ಸೇರಿದಂತೆ ವಿವಿಧ ಮುಖ್ಯ ೫೬ ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು ೧.೨೬ ಕೋಟಿ ರು. ಮೌಲ್ಯವನ್ನು ಜಿಲ್ಲಾ ಪೊಲೀಸ್ ಇಲಾಖೆ ಮೌಲ್ಯದ ಮಾಲೀಕರಿಗೆ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಿತರಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ರವಿಕಾಂತೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ ೫೬ ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಿ ೧೫೨ ಆರೋಪಿಗಳನ್ನು ಬಂಧಿಸಿ ೧.೨೬ ಕೋಟಿ ರು. ಮೌಲ್ಯವನ್ನು ಅದರ ಮಾಲೀಕರಿಗೆ ಒಪ್ಪಿಸಲಾಗಿದೆ. ೨.೦೨ ಲಕ್ಷ ರು.ಬಂಗಾರದ ಆಭರಣ, ೭೭೮೦೬ ರು. ಬೆಳ್ಳಿ ಆಭರಣ, ೬.೯೨ ಲಕ್ಷ ರು. ನಾಲ್ಕು ಚಕ್ರದ ವಾಹನ, ೧.೧ ಲಕ್ಷ ರು.ಎಲೆಕ್ಟ್ರಾಟಿಕ್ ವಸ್ತುಗಳು, ೨೪೮೦೦ ರು. ಮೊಬೈಲ್ಗಳು, ೨.೧೩ ಲಕ್ಷ ರು. ಹಣ, ಕಂಪ್ಯೂಟರ/ಲ್ಯಾಪಟಾಪ್ ೪೦ ಸಾವಿರ ರು., ಗಾಂಜಾ ೧.೧ ಲಕ್ಷ ರು., ಇತರೆ ೫.೯ ಲಕ್ಷ ರು. ಹೀಗೆ ಒಟ್ಟು ೧.೨೬ ಕೋಟಿ ರು.ಗಳನ್ನು ಜಿಲ್ಲೆಯ ನಿಪ್ಪಾಣಿ, ಸವದತ್ತಿ, ರಾಮದುರ್ಗ, ರಾಯಬಾಗ, ಕುಡಚಿ ಹಾರೂಗೇರಿ, ಕಾಗವಾಡ, ಅಥಣಿ ಪೊಲೀಸ್ ಠಾಣೆಗಳ ಪೊಲೀಸರು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಇಷ್ಟು ಮೌಲ್ಯದ ವಸ್ತುಗಳನ್ನು ಹಿಡಿಯಲು ನಾವು ಮಾಡಿದ ಬೀಟ್ ಪೊಲೀಸರ ನೇಮಕದಿಂದಾಗಿ. ಸಾರ್ವಜನಿಕರೊಂದಿಗೆ ಬೆರೆತು ಅಲ್ಲಿಂದಲೇ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಪ್ರತಿಯೊಂದು ಹಳ್ಳಿಗೆ ಒಬ್ಬರಂತೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಪೊಲೀಸರ ನೇಮಕದಿಂದ ಜನಸಾಮಾನ್ಯರಿಗೆ ತೊಂದರೆಯಾಗದೇ ಅಕ್ರಮ ಚಟುವಟಿಕೆ ಮಾಡುವುದನ್ನು ತಡೆಗಟ್ಟಲು ಹಾಗೂ ಪ್ರಕಣವನ್ನು ಬೇಧಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಳುವಾದ ಮೌಲ್ಯಗಳನ್ನು ಐಜಿಪಿ ಡಾ.ಕೆ.ರಾಮಚಂದ್ರ ರಾವ್ ಮಾಲೀಕರಿಗೆ ವಿತರಿಸಿ ಮಾತನಾಡಿ, ಜಿಲ್ಲೆಯ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿರಬೇಕು. ಪೊಲೀಸರು ಮತ್ತು ಸಾರ್ವಜನಿಕರು ಕೂಡಿದರೇ ಅಕ್ರಮ ಚಟುವಟಿಕೆಗಳನ್ನು ಬಂದ್ ಮಾಡಲು ಸಹಾಯವಾಗುತ್ತದೆ. ಜನರು ಕಳೆದುಕೊಂಡ ಸ್ವತ್ತನ್ನು ಮರಳಿ ನೀಡುತ್ತಿರುವಂತಹ ಕಾರ್ಯ ಮತ್ತೊಂದಿಲ್ಲ. ಕಾರಣ ಸಾರ್ವಜನಿಕರು ಪೊಲೀಸರಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
Check Also
ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು
ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …