Breaking News
Home / Uncategorized / ಸಚಿವ ರಮೇಶ್ ಜಾರಕಿಹೊಳಿ ಸಂಧಾನ ಸಕ್ಸೆಸ್,ರಾಮದುರ್ಗ ಸಂತ್ರಸ್ತರ ಪ್ರತಿಭಟನೆ ವಾಪಸ್….!

ಸಚಿವ ರಮೇಶ್ ಜಾರಕಿಹೊಳಿ ಸಂಧಾನ ಸಕ್ಸೆಸ್,ರಾಮದುರ್ಗ ಸಂತ್ರಸ್ತರ ಪ್ರತಿಭಟನೆ ವಾಪಸ್….!

ಬೆಳಗಾವಿ- ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ನೆರೆ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.ಇಂದು ಸಚಿವ ರಮೇಶ್ ಜಾರಕಿಹೊಳಿ ಮನವೊಲಿಕೆ ಹಿನ್ನಲೆಯಲ್ಲಿ ರೈತರು ಪ್ರತಿಭಟನೆ ವಾಪಸ್ ಪಡೆದುಕೊಂಡಿದ್ದು ಜಾರಕಿಹೊಳಿ ಸಂಧಾನ ಸಕ್ಸೇಸ್ ಆಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಹಶಿಲ್ದಾರ ಕಚೇರಿ ಮುಂದೆ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ,ಸಿಎಂ ಸೂಚನೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುತ್ತಿದ್ದೇನೆ.ಸಿಎಂ ಭೇಟಿಯಾಗಿ ಪರಿಹಾರಕ್ಕೆ ಮನವಿ ಮಾಡಿ ನೆರೆ ಪರಿಹಾರ ಕೊಡಿಸುತ್ತೇನೆ, ಹದಿನೈದು ದಿನಗಳಲ್ಲಿ ಎಲ್ಲವೂ ಸರಿ ಮಾಡುವುದಾಗಿ ಭರವಸೆ ಹಿನ್ನೆಲೆಯಲ್ಲಿ ನೆರೆ‌ ಸಂತ್ರಸ್ತರು ಮತ್ತು ರೈತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.
15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ರೆ ಸಚಿವ ರಮೇಶ್ ಜಾರಕಿಹೊಳಿ‌ ನಿವಾಸದೆದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಕೊಟ್ಟಿದ್ದಾರೆ.ರಾಮದುರ್ಗ ತಾಲೂಕಿನ ಹಿರೇಹಂಪಿಹೋಳಿ, ಕಿಲಬನೂರ, ಅವರಾದಿ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮದ ನೆರೆ ಸಂತ್ರಸ್ತರು ಭಾಗಿಯಾಗಿದ್ದರು.

ನೆರೆ ಸಂತ್ರಸ್ತರನ್ನುದ್ದೇಶಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭಾಷಣ ಮಾಡಿದರು.
ನಾನು ರಾಜಕಾರಣ ಭಾಷಣ ಮಾಡಲ್ಲಾ, ಸರ್ಕಾರದ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ, ಜಾರಕಿಹೊಳಿ ಮನೆತನದವರು ವಿಶ್ವಾಸ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಕಳೆದ ಒಂದು ವರ್ಷದಿಂದ ಹೋರಾಟ ಮಾಡಿದ್ದೀರಿ ನಮಗೆ ದುಃಖ ಆಗಿದೆ, ಯಡಿಯೂರಪ್ಪ ಸಾಹೇಬರು ನಿಮ್ಮ ಕುರಿತು ಮಾತನಾಡಿದ್ದಾರೆ. ಕಾನೂನು ತೋಡಕುಗಳು ಇದ್ದಿದ್ದಕ್ಕೆ ಪರಿಹಾರ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಮನೆ ಬಿದ್ದವರಿಗೆ ಪರಿಹಾರದ ತೊಂದರೆಯಾಗಿದೆ,
ಸತತ ಏಳು ತಿಂಗಳಿಂದ ಕೊರೊನಾ ಇದ್ದಿದ್ದಕ್ಕೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿ ಯಾವುದಾದರೂ ಹಾದಿ ಹಿಡಿದು ಪರಿಹಾರ ತಂದು ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ಧರಣಿ‌ ಮುಂದುವರಿಸಿದ್ದೇ ಆದ್ರೇ ನಮ್ಮ ಶಕ್ತಿ ಕಡಿಮೆಯಾಗುತ್ತೆ, ನೀವು ಧರಣಿ ಹಿಂಪಡೆದರೆ ಹೆಚ್ಚಿನ ಶಕ್ತಿ ಬರುತ್ತೆ, ಸೋಮವಾರ ಬೆಳಗ್ಗೆ ಸಿಎಂ ಭೇಟಿಯಾಗಿ ಮೊದಲು ನಿಮ್ಮ ವಿಷಯ ಚರ್ಚೆ ಮಾಡುತ್ತೇನೆ. ಸಿಎಂ ಯಡಿಯೂರಪ್ಪ ನನ್ನ ಮಾತು ಮೀರಲ್ಲಾ ನನ್ನ ಮೇಲೆ ವಿಶ್ವಾಸವಿಡಿ‌,ಎಂದು ಧರಣಿನಿರತ ನೆರೆಸಂತ್ರಸ್ತರ ಬಳಿ ಸಚಿವ ರಮೇಶ್ ಜಾರಕಿಹೊಳಿ‌ ಮನವಿ ಮಾಡಿಕೊಂಡ ಬಳಿಕ,ಪ್ರತಭಟನಾಕಾರರು ಪ್ರತಿಭಟನೆ ವಾಪಸ್ ಪಡೆದ್ರು

ಡಿಕೆಶಿಗೆ ದೇವರು ಒಳ್ಳೆಯದನ್ನು ಮಾಡಲಿ,

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕೊರೊನಾ ಸೋಂಕು ದೃಢ ವಿಚಾರವಾಗಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ,ದೇವರು ಡಿಕೆಶಿ ಅವರಿಗೆ ಒಳ್ಳೆಯದನ್ನ ಮಾಡಲಿ ಅವರ ಆರೋಗ್ಯ ಸರಿಯಾಗಲಿ, ಎಷ್ಟೆ ಆದ್ರೂ ಡಿಕೆಶಿ ನನ್ನ ಹಳೆಯ ಮಿತ್ರ. ದೇವರು ಒಳ್ಳೆಯದು ಮಾಡಿ ಬೇಗ ಗುಣಮುಖರಾಗಲಿ ಅಂತಾ ಹಾರೈಸುತ್ತೇನೆ ಎಂದರು.

ಪ್ರತಿಭಟನೆ ಹಿಂಪಡೆಯಲು ಮನವಿ.

ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾಪನೆಗೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಕುರಿತು ಮಾತನಾಡಿದ ಸಚಿವ ಜಾರಕಿಹೊಳಿ,ನಾಳೆ ಕರೆ ನೀಡಿರುವ ಪ್ರತಿಭಟನೆ ಹಿಂಪಡೆಯುವಂತೆ ಸಂಘಟನೆಗಳಿಗೆ ಮನವಿ ಮಾಡುವೆ, ಇಂದು ಸಂಜೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸುವೆ,ನಾಳೆ ಬೆಳಗ್ಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜೊತೆ ಚರ್ಚಿಸುವೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ರಮೇಶ್ ಜಾರಕಿಹೊಳಿ‌ ಭರವಸೆ ನೀಡಿದ್ದಾರೆ. ಕಾನೂನು ಪ್ರಕಾರವಾಗಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕುರಿತು ಚರ್ಚೆ ಮಾಡುವೆ. ಆಗಸ್ಟ್ 29ರಂದು ಪೀರನವಾಡಿಗೆ ಕೆ.ಎಸ್.ಈಶ್ವರಪ್ಪ ಭೇಟಿ ವಿಷಯವನ್ನು ಮಾದ್ಯಮ ಮಿತ್ರರು ಪ್ರಸ್ತಾಪಿಸಿದಾಗ,ಈಶ್ವರಪ್ಪ ಬಂದು ಭೇಟಿಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ನನ್ನ ಕೆಲಸ ಮಾಡುವೆ ಎಂದರು.

Check Also

ರದ್ದಾದ ಯೋಜನೆಗೆ ಮತ್ತೇ ಲೀಫ್ಟ್….ಶಾಸಕ ಅಭಯ ಪಾಟೀಲರಿಂದ ಬೆಳಗಾವಿಗೆ ಸ್ಪೇಷಲ್ ಗೀಫ್ಟ್….!

ಬೆಳಗಾವಿ-ಬೆಳಗಾವಿ ಮಹಾನಗರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಅವರು ಸದ್ದಿಲ್ಲದೇ ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು …

Leave a Reply

Your email address will not be published. Required fields are marked *