ಹಿರೇಬಾಗೇವಾಡಿ : ಬಾಯಿ ಚಪಲಕ್ಕೆ ಮಾತನಾಡುವ ಸುರೇಶ ಅಂಗಡಿಗೆ ದೇವೆಗೌಡರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಮತ್ತು ಯೋಗ್ಯತೆ ಇಲ್ಲವೆಂದು ಜಿಲ್ಲಾ ಜೆಡಿಎಸ್ ವಕ್ತಾರ ಶ್ರೀಶೈಲ ಫಡಗಲ್ ಪ್ರತಿಕ್ರಿಯೆ ನೀಡಿದ್ದಾರೆ . ತಮ್ಮ ಕಾರ್ಯವೇನು ಎಂಬುದನ್ನು ಅಂಗಡಿ ಮೊದಲು ಅರಿತುಕೊಳ್ಳಬೇಕು , ನಂತರ ದೇವೆಗೌಡರ ಬಗ್ಗೆ ಮಾತನಾಡಲಿ. ಕಳಸಾ ಬಂಡೂರಿ ಹೋರಾಟ ಉಗ್ರಗೊಂಡಾಗ ಸುರೇಶ ಅಂಗಡಿ ಯಾವ ಬಿಲದಲ್ಲಿ ಅಡಗಿದ್ದರು ಎಂಬುದನ್ನು ಮೊದಲು ಬಹಿರಂಗಪಡಿಸಲಿ ನಂತರ ಮಾತನಾಡಲಿ ಎಂದು ಶ್ರೀಶೈಲ ಫಡಗಲ್ ತಿಳಿಸಿದ್ದಾರೆ . ಹಿರೇಬಾಗೇವಾಡಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಾಗ ಈ ಅಂಗಡಿ ಎಲ್ಲಿದ್ದರು ? ಚುನಾವಣೆಯಲ್ಲಿ ಸೋತರೂ ಸಹ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ ತಮ್ಮ ಸ್ವಂತ ಖರ್ಚಿನಲ್ಲಿ ಹಿರೇಬಾಗೇವಾಡಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ ಒದಗಿಸಿದಾಗ ಈ ಸುರೇಶ ಅಂಗಡಿ ಅದೆಲ್ಲಿ ಹೋಗಿದ್ದರು, ಓರ್ವ ಮಹಿಳಾ ನಾಯಕಿ ಮುಂದೆ ತಲೆ ಎತ್ತಿ ಮಾತನಾಡುವ ಯೋಗ್ಯತೆಯಿಲ್ಲದ ಸುರೇಶ ಅಂಗಡಿ ಬಹಿರಂಗವಾಗಿ ದೇವೆಗೌಡರ ಕ್ಷಮೆಯಾಚಿಸಬೇಕು ಎಂದವರು ಆಗ್ರಹಿಸಿದ್ದಾರೆ.
