Breaking News
Home / Breaking News / ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದ ಅಧುನೀಕರಣಕ್ಕೆ ಗ್ರಿನ್ ಸಿಗ್ನಲ್….!!!

ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದ ಅಧುನೀಕರಣಕ್ಕೆ ಗ್ರಿನ್ ಸಿಗ್ನಲ್….!!!

ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರಕ್ಕೆ ನವೀಕರಣದ ಭಾಗ್ಯ

ಬೆಳಗಾವಿ- ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರಕ್ಕೆ ನವೀಕರಣದ ಭಾಗ್ಯ ಒದಗಿ ಬಂದಿದೆ

ಅತ್ಯಂತ ಶಿಥೀಲಾವಸ್ಥೆಗೆ ತಲುಪಿದ್ದ ಬೆಳಗಾವಿಯ ಬೃಹತ್ತ್ ಕುಮಾರ ಗಂಧರ್ವ ರಂಗ ಮಂದಿರಕ್ಕೆ ಪ್ರಾದೇಶಿಕ ಆಯುಕ್ತ ಬಿಸ್ವಾಸ್, ಅವರು ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು,ಪಾಲಿಕೆ ಆಯುಕ್ತರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದರು.

ಕುಮಾರ ಗಂಧರ್ವ ರಂಗ ಮಂದಿರದ ಪರಿಸ್ಥಿತಿಯನ್ನು ಅವಲೋಕಿಸಿದ ಪ್ರದೇಶಿಕ ಆಯುಕ್ತರು ರಂಗ ಮಂದಿರದ ನವೀಕರಣಕ್ಕೆ ಯೋಜನೆ ರೂಪಿಸುವಂತೆ ಸೂಚನೆ ನೀಡಿದರು.

ರಂಗ ಮಂದಿರದ ಸ್ಟೇಜ್ ಸುಧಾರಣೆ,ಹೊಸ ಸೀಲೀಂಗ್ ಅತ್ಯಾಧುನಿಕ ಆಸನದ ವ್ಯೆವಸ್ಥೆ ,ಡಿಜಿಟಲ್ ಸ್ಕ್ರೀನ್ ಅಳವಡಿಕೆ ಸೇರಿದಂತೆ ರಂಗ ಮಂದಿರಕ್ಕೆ ಹೈಟೇಕ್ ಟಚ್ ನೀಡುವ ಯೋಜನೆ ರೂಪಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಿದರು.

ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ 70 ಲಕ್ಷ ರೂ ಅನುದಾನವಿದ್ದು ಈ ಅನುದಾನವನ್ನು ರಂಗ ಮಂದೀರದ ಅಧುನೀಕರಣಕ್ಕೆ ಬಳಿಸಿಕೊಳ್ಳಲು ನಿರ್ಧರಿಸಲಾಗಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *