Home / Breaking News / ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು

ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ಕೊಡೋ ವಿಚಾರದಲ್ಲಿ ಪಕ್ಷಕ್ಕೆ ಮುಜಗುರ ಮಾಡೋಕ್ಕೆ ಹೋಗೋಲ್ಲ- ಶ್ರೀರಾಮಲು

ಬೆಳಗಾವಿ- ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಿಸುವ ವಿಚಾರವಾಗಿ ನಾನು ಈ ಬಗ್ಗೆ ಉಲ್ಲೇಖ ಮಾಡೋಕೆ ಹೋಗಲ್ಲ, ಯಾರಿಗೂ ಮುಜುಗರ ಮಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಕಾದು ನೋಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಬೆಳಗಾವಿಯಲ್ಲಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾದ್ಯಮ ಮಿತ್ರರ ಜೊತೆ ಮಾತನಾಡಿ
ನಾನು ಮೊದಲಿನಿಂದಲೂ ಆ್ಯಕ್ಟೀವ್ ಇದೀನಿ, ಮುಂದೆಯೂ ಆ್ಯಕ್ಟೀವ್ ಇರ್ತೀನಿ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಹುದ್ದೆ‌ ನೀಡೋದಾಗಿ ಬಿಂಬಿಸಿದ ವಿಚಾರ ವಾಗಿ ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ಅದೆಲ್ಲವೂ ಇತ್ತು, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೆ ನೋಡಬೇಕಾಗುತ್ತೆ ನಾನು ಯಾವುದೇ ವಿಚಾರದಲ್ಲಿ ಮಾತನಾಡೋಕೆ ಹೋಗಲ್ಲ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೆ ನೋಡೋಣ
ಈಗಾಗಲೇ ಸಿಎಂ ದೆಹಲಿಗೆ ಹೋಗಿ ವರಿಷ್ಠರ ಜೊತೆ ಚರ್ಚಿಸಿ ಬಂದಿದ್ದಾರೆ ಫೆಬ್ರವರಿ 6ರಂದು ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಹೇಳಿದ್ದಾರೆ
ಇವತ್ತು ಅಥವಾ ನಾಳೆ ಯಾರು ಮಂತ್ರಿಯಾಗಲಿದ್ದಾರೆಂದು ಬಿಎಸ್‌ವೈ ತಿಳಿಸುತ್ತಾರೆ ಎಂದು ಶ್ರೀರಾಮಲು ಹೇಳಿದರು

ಕೊರೋನಾ ವೈರಸ್ ಬಗ್ಗೆ ಇಡೀ ದೇಶದಲ್ಲಿ ಬಹಳಷ್ಟು ಆತಂಕ ಉಂಟುಮಾಡಿದೆ ಚೀನಾದಲ್ಲಿ ಸುಮಾರು 170 ಜನರನ್ನು ಬಲಿ ತಗೆದುಕೊಂಡಿದೆ. ಕೇರಳದಲ್ಲಿ ವಿದ್ಯಾರ್ಥಿನಿಗೆ ಕೊರೋನಾ ವೈರಸ್ ಶಂಕೆ ಹಿನ್ನೆಲೆ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ
ನಮ್ಮ ಕರ್ನಾಟಕದ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀರಾಮಲು ಹೇಳಿದರು

ಎಲ್ಲಾ ಆಸ್ಪತ್ರೆಗಳಲ್ಲಿ ವಿಶೇಷವಾಗಿ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ರಾಜೀವ್ ಗಾಂಧಿ ಆಸ್ಪತ್ರೆ, ಬೆಂಗಳೂರು, ಮಂಗಳೂರು ಸೇರಿ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಚೀನಾದಿಂದ ರಾಜ್ಯಕ್ಕೆ ಬಂದ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತಿದೆ
ಏರ್‌ಪೋರ್ಟ್ ಸೇರಿದಂತೆ ವಿವಿಧೆಡೆ ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಿದ್ದೇವೆ.
ಮುಂಜಾಗ್ರತಾ ಕ್ರಮಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು

ರಾಜ್ಯದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಗೆದುಕೊಂಡಿದ್ದೇವೆ ಯಾವುದೇ ರೀತಿಯ ಮಾಸ್ಕ್‌ಗಳ ತೊಂದರೆ ಇಲ್ಲ ,ಮಾಸ್ಕಗಳ ಕೊರತೆಯೂ ಇಲ್ಲ, ಕೇಂದ್ರದ ಆರೋಗ್ಯ ಸಚಿವರು ಚೀನಾ ಸರ್ಕಾರ ಜೊತೆ ಮಾತುಕತೆ ನಡೆಸಿದ್ದಾರೆ ಈಗಾಗಲೇ 13 ಜನರಿಗೆ ತಪಾಸಣೆ ನಡೆಸಿದ್ದು ನೆಗೆಟಿವ್ ಬಂದಿದೆ ಎಂದು ಬೆಳಗಾವಿಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.

Check Also

ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅರೆಸ್ಟ್…..

ಬೆಳಗಾವಿ- ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ ಎ ಒನ್ ಆರೋಪಿಯಾಗಿಯಾಗಿರುವ ಜೆಡಿಎಸ್ ಶಾಸಕ ಹೆಚ್ ಡಿ.ರೇವಣ್ಣ ಅವರನ್ನು ಎಸ್ ಐ …

Leave a Reply

Your email address will not be published. Required fields are marked *