Breaking News
Home / Breaking News / ಬೆಳಗಾವಿ ಚಿಕ್ಕೋಡಿ ಸೇರಿ 22 ಶಿಕ್ಷಕರಿಗೆ ಕೋವೀಡ್ ಸೊಂಕು..

ಬೆಳಗಾವಿ ಚಿಕ್ಕೋಡಿ ಸೇರಿ 22 ಶಿಕ್ಷಕರಿಗೆ ಕೋವೀಡ್ ಸೊಂಕು..

ಬೆಳಗಾವಿ- ಸರ್ಕಾರ ಶಾಲಾ ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಬೆನ್ನಲ್ಲಿಯೇ ಬೆಳಗಾವಿ,ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 22 ಶಿಕ್ಷರಿಗೆ ಕೋವೀಡ್ ಸೊಂಕು ತಗಲಿದೆ.

ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗದ 10,ಬೆಳಗಾವಿ ನಗರ ವಲಯದ 4 ,ರಾಮದುರ್ಗ3,ಕಿತ್ತೂರು 1 ಶಿಕ್ಷಕರಿಗೆ ಅಂದ್ರೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಶಿಕ್ಷಕರಿಗೆ ಕೋವೀಡ್ ಸೊಂಕು ತಗಲಿದ್ದು ದೃಡವಾಗಿದೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಶಿಕ್ಷಕರಿಗೆ ಕೋವೀಡ್ ಸೊಂಕು ತಗಲಿದೆ.ರಾಯಬಾಗದ 2 ಹುಕ್ಕೇರಿಯ 2 ಶಿಕ್ಷಕರಿಗೆ ಸೊಂಕು ತಗಲಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 22 ಶಿಕ್ಷಕರಿಗೆ ಸೊಂಕು ತಗಲಿದ್ದು ದೃಡವಾಗಿದೆ.

ಶಾಲೆ ಆರಂಭವಾಗುವ ಮುನ್ನವೇ ಈ 22 ಜನ ಶಿಕ್ಷಕರಿಗೆ ಸೊಂಕು ದೃಡವಾಗಿದ್ದು,ಇವರು ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದಿಲ್ಲ,ಇವರೆಲ್ಲರೂ ಕ್ವಾರಂಟೈನ್ ನಲ್ಲಿ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.ಹೀಗಾಗಿ ಪಾಲಕರು ಆತಂಕ ಪಡೆಯುವ ಅಗತ್ಯವಿಲ್ಲ ಎಂದು ಚಿಕ್ಕೋಡಿ,ಬೆಳಗಾವಿ ಡಿಡಿಪಿಐ ಗಳು ತಿಳಿಸಿದ್ದಾರೆ.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *