Home / Breaking News / ಆಸ್ಟ್ರೇಲಿಯಾದಿಂದ ಮರಳಿ ಬಂದಿದ್ದ ಮಹಿಳೆಯ ಶವ ಪತ್ತೆ.

ಆಸ್ಟ್ರೇಲಿಯಾದಿಂದ ಮರಳಿ ಬಂದಿದ್ದ ಮಹಿಳೆಯ ಶವ ಪತ್ತೆ.

ಬೆಳಗಾವಿ: ನವೀಲತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಈ ಮಹಿಳೆ ಧಾರವಾಡ ಮೂಲದ ಮಹಿಳೆ ಎಂದು ಗೊತ್ತಾಗಿದೆ.

ಎರಡು ದಿನದ ಹಿಂದೆಯಷ್ಟೇ ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಸವದತ್ತಿ ತಾಲೂಕಿನ ನವಿಲು ತೀರ್ಥ ಜಲಾಶಯದ ಹಿನ್ನೀರಿನಲ್ಲಿ ರವಿವಾರ ಶವ
.
ಧಾರವಾಡ ನಗರದ ಸಪ್ತಾರಬಾವಿ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ ಪಾಟೀಲ(40) ಮೃತ ಮಹಿಳೆ. ಸವದತ್ತಿ ತಾಲೂಕಿನ ಗೊರವನಕೊಳ್ಳದ ಹಿನ್ನೀರಿನಲ್ಲಿ ಶವ ಪತ್ತೆಯಾಗಿದೆ.

ಪ್ರೀಯದರ್ಶಿನಿ ಪತಿ ಲಿಂಗರಾಜ ಆಸ್ಟ್ರೇಲಿಯಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಆಗಸ್ಟ್‌ 18ರಂದು ಪ್ರಿಯದರ್ಶಿನಿ ರಾಜ್ಯಕ್ಕೆ ಮರಳಿದ್ದರು. ಪ್ರಿಯದರ್ಶಿನಿ ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *