Home / Breaking News / ಬೆಳಗಾವಿಯಲ್ಲಿ ನೈತಿಕ ಪೋಲೀಸಗಿರಿ ಮೂವರು ಪೋಲೀಸರ ವಶಕ್ಕೆ

ಬೆಳಗಾವಿಯಲ್ಲಿ ನೈತಿಕ ಪೋಲೀಸಗಿರಿ ಮೂವರು ಪೋಲೀಸರ ವಶಕ್ಕೆ

ಬೆಳಗಾವಿ- ನಿನ್ನೆ ಶುಕ್ರವಾರ ಸಂಜೆ ಬೆಳಗಾವಿಯ ಖಡೇಬಝಾರ್ ನಲ್ಲಿ ಶಿವಾನಂದ ಚೌಕಿ ಹತ್ತಿರ ಅನ್ಯಕೋಮಿನ ಯುವತಿಯ ಜೊತೆಗಿದ್ದ ಯುವಕನ ಮೇಲೆ ಒಂದು ಗುಂಪು ಹಲ್ಲೆ ಮಾಡಿದ ಘಟನೆ ನಡೆದಿದ್ದು ಈ ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಲೇರಿದೆ.

ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಬೇರೆ,ಬೇರೆ ಕೋಮಿನ ಯುವಕ ಮತ್ತು ಯುವತಿ ಸುತ್ತಾಡುತ್ತಿರುವದನ್ನು ಗಮನಿಸಿದ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡುವ ಮೂಲಕ ನೈತಿಕ ಪೋಲೀಸ್ ಗಿರಿ ಮಾಡಿದೆ.ಘಟನಾ ಸ್ಥಳಕ್ಕೆ ಧಾವಿಸಿದ ಮಾರ್ಕೆಟ್ ಪೋಲೀಸರು ಹಲ್ಲೆ ಮಾಡಿದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಘಟನೆಯ ನಂತರ ಯುವತಿಯ ಕುಟುಂಬಸ್ಥರು ಪೋಲೀಸ್ ಠಾಣೆಗೆ ಬಂದು ಸಮಜಾಯಿಷಿ ನೀಡಿದ್ದು ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *