Home / Breaking News / ಬೆಳಗಾವಿಯಲ್ಲಿ ಗ್ಯಾಸ್ ಲಿಕೇಜ್ ಮನೆಗೆ ಬೆಂಕಿ ನಾಲ್ಕು ಜನರಿಗೆ ಗಾಯ..

ಬೆಳಗಾವಿಯಲ್ಲಿ ಗ್ಯಾಸ್ ಲಿಕೇಜ್ ಮನೆಗೆ ಬೆಂಕಿ ನಾಲ್ಕು ಜನರಿಗೆ ಗಾಯ..

ಬೆಳಗಾವಿ- ಬೆಳಗಾವಿಯ ಬಸವನಗಲ್ಲಿಯ ಮನೆಯೊಂದರಲ್ಲಿ ಸಿಲೆಂಡರ್ ಗ್ಯಾಸ್ ಸೋರಿಕೆ ಯಾಗಿ ಮನೆಗೆ ಬೆಂಕಿ ತಗಲಿ ನಾಲ್ಕು ಜನ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಬೆಳಗಾವಿ ನಗರದ ಬಸವನಗಲ್ಲಿಯ ಮೋಹನ್ ಗೋಪಾಲಕೃಷ್ಣ ಭಟ್ ಎಂಬುವರ ಮನೆಯಲ್ಲಿ ಇಂದು ಸಂಜೆ ಸಿಲೆಂಡರ್ ಗ್ಯಾಸ್ ಸೋರಿಕೆಯಾಗಿ ಗ್ಯಾಸ್ ಮನೆಯ ತುಂಬೆಲ್ಲಾ ಹರಡಿ ಮನೆಗೆ ಬೆಂಕಿ ತಗಲಿದೆ. ಈ ಘಟನೆಯಲ್ಲಿ ಮನೆಯಲ್ಲಿದ್ದ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿದ್ದು ಓರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನಾ ಸ್ಥಳಕ್ಕೆ ಖಡೇಬಝಾರ್ ಠಾಣೆಯ ಪೋಲೀಸರು ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಗ್ಯಾಸ್ ಲಿಕೇಜ್ ನಿಂದಾಗಿ ಈ ಘಟನೆ ಸಂಭವಿಸಿದ್ದು ಗ್ಯಾಸ್ ಸ್ಪೋಟ ಆಗಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *