Breaking News

ಶೆಟ್ಟರ್ BJP ಗೆ ಮರಳಿದ ಬಳಿಕ, ಸವದಿ ಸಾಹುಕಾರ್ ಹೇಳಿದ್ದೇನು ಗೊತ್ತಾ…???

ಬೆಳಗಾವಿ-ಜಗದೀಶ್ ಶೆಟ್ಟರ್ ಅವರು ಅನಿರೀಕ್ಷಿತವಾಗಿ ಬಿಜೆಪಿಗೆ ಹೋಗಿದ್ದಾರೆ ಇದರಿಂದ ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬಿರೋದಿಲ್ಲ.ನನಗೂ ಹಿರಿಯ ಬಿಜೆಪಿ ನಾಯಕರು ಸಂಪರ್ಕ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ನನಗೂ ಬಿಜೆಪಿಗೆ ಬರುವಂತೆ ದೊಡ್ಡ ನಾಯಕರು ಒತ್ತಡ ಹೇರುತ್ತಿದ್ದಾರೆ.ಹಿರಿಯ ನಾಯಕರು ಸಂಪರ್ಕದಲ್ಲಿದ್ದಾರೆ.ಹಲವಾರು ವರ್ಷಗಳ ಕಾಲ ನಾನು ಬಿಜೆಪಿಯಲ್ಲಿದ್ದೆ ಅಲ್ಲಿಯೂ ನನ್ನ ಸ್ನೇಹಿತರಿದ್ದಾರೆ.ಸಹಜವಾಗಿ ಸಂಪರ್ಕ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಾರ್ವಜನಿಕವಾಗಿ ನಾನು ಏನೂ ಹೇಳುವದಿಲ್ಲ, ಬಿಜೆಪಿ ನನ್ನನ್ನು ಸೇರಿಸಿಕೊಳ್ಳಲು ತುಂಬಾ ಆಸಕ್ತಿ ಹೊಂದಿದೆ ಆದ್ರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡೋದಿಲ್ಲ.ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರು ಮೂಲೆ ಗುಂಪಾಗಿದ್ದಾರೆ ಎಂದು ಆರ್ ಅಶೋಕ್ ಹೇಳಿಕೆಯ ಪ್ರಶ್ನೆಗೆ ಉತ್ತರಿಸಿದ ಅವರು ಅದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಲಕ್ಷ್ಮಣ ಸವದಿ ಹೇಳುವ ಮೂಲಕ ತಮಗೆ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಸಿಗುವ ಸುಳಿವು ನೀಡಿದ್ದಾರೆ.

Check Also

ಕರ್ನಾಟಕದ ಜೊತೆ ಮಹಾರಾಷ್ಟ್ರದ ಮಹಾ ಪುಂಡಾಟಿಕೆ

ಬೆಳಗಾವಿ -ಆರೋಗ್ಯದ ವಿಚಾರದಲ್ಲಿ ಮಹಾರಾಷ್ಟ್ರ ಬೌಂಡರಿ ಕ್ರಾಸ್ ಮಾಡಿ ಬೆಳಗಾವಿ ಗಡಿಗೆ ನುಗ್ಗಿ ಆಯ್ತು, ಈಗ ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *