Breaking News
Home / Breaking News / ಸೂತಕದ ಮನೆಯಲ್ಲಿ ಬಿಜೆಪಿ ಸಂಬ್ರಮ ಹೆಬ್ಬಾಳಕರ ಆರೋಪ

ಸೂತಕದ ಮನೆಯಲ್ಲಿ ಬಿಜೆಪಿ ಸಂಬ್ರಮ ಹೆಬ್ಬಾಳಕರ ಆರೋಪ

ಬೆಳಗಾವಿ- ಸಾವಿರ ಹಾಗು ಐನೂರು ಮುಖ ಬೆಲೆಯ ನೋಟುಗಳನ್ನು ಏಕಾ ಏಕಿ ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿಪಕ್ಷಗಳು ನೀಡಿದ್ದ ಭಾರತ ಬಂದ್ ಕರೆ ಬೆಳಗಾವಿಯಲ್ಲಿ ಸಂಪೂರ್ಣವಾಗಿ ವಿಫಲವಾಯಿತು

ಬೆಳಗಾವಿ ಗ್ರಾಮೀಣ ಹಾಗು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ರ್ಯಾಲಿ ಹೊರಡಿಸಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು ನಗರದ ಕ್ಲಬ್ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಕೇಂದ್ರ ಸರ್ಕಾರ ಹಾಗು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು

ಮಾಜಿ ಸಚಿವೆ ಮೋಟಮ್ಮ ಅವರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು ಈ ಸಂಧರ್ಭದಲ್ಲಿ ಮಾತನಾಡಿದ ಮೋಟಮ್ಮ ಕೇಂದ್ರ ಸರ್ಕಾರ ರಾತ್ರೋ ರಾತ್ರಿ ನೋಟುಗಳನ್ನು ಬ್ಯಾನ್ ಮಾಡಿ ಜನ ಸಾಮಾನ್ಯರಿಗೆ ತೊಂದರೆ ನೀಡಿದೆ ಮುರಾರ್ಜಿ ಅವರು ದೇಶದ ಪ್ರಧಾನಿಯಾಗಿದ್ದಾಗ ನೋಟುಗಳನ್ನು ರದ್ದು ಮಾಡಿದ್ದರು ಆವಾಗ ಜನರಿಗೆ ಇಷ್ಡೊಂದು ತೊಂದರೆ ಆಗಿರಲಿಲ್ಲ ಆದರೆ ನರೇಂದ್ರ ಮೋದಿ ಪೂರ್ವ ಸಿದ್ಧತೆ ಇಲ್ಲದೆ ನೋಟುಗಳನ್ನು ರದ್ದು ಮಾಡಿ ಬಡವರನ್ನು ಸಂಕಷ್ಟದ ಹೊಂಡಿಗೆ ನೂಕಿದ್ದಾರೆ ಎಂದು ಆರೋಪಿಸಿದರು

ಸೂತಕದ ಮನೆಯಲ್ಲಿ ಸಂಬ್ರಮಿಸುತ್ತಿರುವ ಬಿಜೆಪಿ

ನೋಟು ರದ್ದು ಮಾಡಿರುವ ಬಗ್ಗೆ ನಮ್ಮ ವಿರೋಧ ಇಲ್ಲ ಆದರೆ ನೋಟುಗಳ ರದ್ದತಿಯಿಂ ಜನ ಸಾಮಾನ್ಯರಿಗೆ ಹಾಗು ಮದ್ಯಮ ವರ್ಗದ ಜನರಿಗೆ ಆಗುತ್ತಿರುವ ತೊಂದರೆಗೆ ನಮ್ಮ ವಿರೋಧವಿದೆ ಕೇಂದ್ರದ ಹಣಕಾಸು ಸಚಿವ ಜೇಟ್ಲಿ ಹಾಗು ರಿಸರ್ವ ಬ್ಯಾಂಕ ಅಧಿಕಾರಿಗಳು ದಿನಕ್ಕೊಂದು ಹೇಳಿಕೆ ನೀಡಿ ದೇಶದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಕೇಂದ್ರದ ಅಸ್ಪಷ್ಠ ನೀತಿಯಿಂದ ದೇಶದ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೆಬ್ಬಾಳಕರ ಆರೋಪಿಸಿದರು

ನೋಟುಗಳ ಬದಲಾವಣೆ ಮಾಡಿಸಿಕೊಳ್ಳಲು ಬ್ಯಾಂಕುಗಳ ಎದುರು ಸರದಿಯಲ್ಲಿ ನಿಂತ ಎಪ್ಪತ್ತಕ್ಕೂ ಹೆಚ್ಚು ಜನ ಸಾವನ್ನೊಪ್ಪಿದ್ದಾರೆ ಜನರ ಕಷ್ಟ ನಿವಾರಣೆಗೆ ಆಗ್ರಹಿಸಿ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸೂತಕದ ಮನೆಯಲ್ಲಿ ಸಂಬ್ರಮ ಆಚರಿಸುತ್ತಿರುವದು ದುರ್ದೈವ ಎಂದು ಹೆಬ್ಬಾಳಕರ ಬಿಜೆಪಿ ವಿರುದ್ದ ಕಿಡಿ ಕಾರಿದರು

ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ ಮಾತನಾಡಿ ಕೇಂದ್ರ ಸರ್ಕಾರದ ನೋಟುಗಳ ರದ್ದತಿ ಕ್ರಮದಿಂದ ಗ್ರಾಮೀಣ ಪ್ರದೇಶದ ಜೀವನಾಡಿ ಆಗಿರುವ ಸಹಕಾರಿ ಕ್ಷೇತ್ರ ಸ್ಥಭ್ಧವಾಗಿದೆ ಬಡವರ ಬದುಕಿಗೂ ಇತಿಮಿತಿಗಳನ್ನು ಹಾಕಲಾಗಿದೆ ಜನರ ದುಡ್ಡು ಬ್ಯಾಂಕಿನಲ್ಲಿದ್ದರೂ ಅದನ್ನು ಖರ್ಚು ಮಾಡಲು ಸಾದ್ಯವಾಗುತ್ತಿಲ್ಲ ಕೇಂದ್ರ ಸರ್ಕಾರ ಬಡವರ ಬದುಕನ್ನು ಜನ ಸಾಮಾನ್ಯರ ಬದುಕನ್ನು ಪ್ರಧಾನಿ ನರೇಂದ್ರ ಮೋದಿ ಬ್ಯಾಂಕುಗಳಲ್ಲಿ ಲಾಕ್ ಮಾಡಿದ್ದಾರೆ ಎಂದು ಆರೋಪಿಸಿದರು

ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಬೆಳಗಾವಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಫೈಜಾನ್ ಸೇಠ ಸಿಸಿ ಪಾಟೀಲ ಚನ್ನರಾಜ ಹಟ್ಟಿಹೊಳಿ ಜಯಶ್ರೀ ಮಾಳಗಿ ವಿಜಯಾ ಹಿರೇಮಠ ಮೀನಾಕ್ಷಿ ನೆಲಂಗಳೆ ಇಸ್ರಾರ ಮುಲ್ಲಾ ರಾಜಾ ಸಲೀಂ ಖಾಶಿಮನವರ ಅಶ್ಪಾಕ ತಹಶಿಲ್ದಾರ ಜಿಪಂ ಸದಸ್ಯ ಶಂಕರಗೌಡ ಪಾಟೀಲ ಸಿಸಿ ಪಾಟೀಲ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

 

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *