Breaking News
Home / LOCAL NEWS / ಮರದ ಟೊಂಗೆ ಮುರಿದು ಬಿದ್ದು ಮಹಿಳೆಯ ಸಾವು

ಮರದ ಟೊಂಗೆ ಮುರಿದು ಬಿದ್ದು ಮಹಿಳೆಯ ಸಾವು

ಬೆಳಗಾವಿ- ಮರದ ಟೊಂಗೆಯೊಂದು ಬೈಕ್ ಮೇಲೆ ಮುರಿದು ಬಿದ್ದು ಮಹಿಳೆಯೊಬ್ಬಳು ಮೃತ ಪಟ್ಟ ಘಟನೆ ಬಸವೇಶ್ವರ ವೃತ್ತದ ಬಳಿ ಇರುವ ಅಗ್ನಿಶಾಮಕ ದಳದ ಕಚೇರಿ ಬಳಿ ಇಂದು ಸಂಜೆ ನಡೆದಿದೆ

ಬೆಳಗಾವಿಯ ಶಹಾಪೂರ ಕೋರೆ ಗಲ್ಲಿಯ ನಿವಾಸಿ ಮೇಘಾ ಮಾರುತಿ ಪಾಟೀಲ 24 ಮೃತ ದುರ್ದೈವಿಯಾಗಿದ್ದಾಳೆ

ಮೇಘಾ ಪಾಟೀಲ ತಮ್ಮ ಗಂಡ ಮಾರುತಿ ಮತ್ತು ಎರಡುವರೆ ವರ್ಷದ ಹೆಣ್ಣು ಮಗುವಿನ ಜೊತೆ ಬೈಕ್ ಮೇಲೆ ಕೋರೆ ಗಲ್ಲಿಯಿಂದ ಮರಾಠಾ ಮಂದಿರದ ಬಳಿ ಇರುವ ಮಾರುತಿ ಮಂದಿರಕ್ಕೆ ಹೋಗುವ ಸಂಧರ್ಭದಲ್ಲಿ ಅಗ್ನಿಶಾಮಕ ದಳದ ಕಚೇರಿ ಬಳಿ ನಡೆದಿದೆ

ಮರದ ಟೊಂಗೆ ಮುರಿದು ಬಿದ್ದು ಮೇಘಾ ಬೈಕ್ ಮೇಲಿಂದ ಜಾರಿ ಬಿದ್ದರೂ ಬೈಕ್ ಚಲಾಯಿಸುತ್ತಿದ್ದ ಗಂಡ ಮಾರುತಿಗೆ ಗೊತ್ತಾಗಿರಲಲ್ಲ ಸ್ವಲ್ಪ ಮುಂದೆ ಕ್ರಮಿಸಿದ ನಂತರ ಬೈಕ್ ಮೇಲೆ ಮೇಘಾ ಇಲ್ಲ ಎಂದು ಗೊತ್ತಾಗಿದೆ

ಮರದ ಟೊಂಗೆ ಮುರಿದು ನೇರವಾಗಿ ಮೇಘಾಳ ತೆಲೆ ಮೇಲೆ ಮುರಿದು ಬಿದ್ದು ತೆಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಮೇಘಾ ಪ್ರಾಣ ಬಿಟ್ಟಿದ್ದಾಳೆ

ಗಂಡ ಮಾರುತಿ ಪಾಟೀಲ ಮತ್ತು ಮಗು ಸುರಕ್ಷಿತವಾಗಿದ್ದಾರೆ

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *