Breaking News
Home / Breaking News / ಗಣೇಶ ಹಬ್ಬಕ್ಕೆ ಬೆಳಗಾವಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ

ಗಣೇಶ ಹಬ್ಬಕ್ಕೆ ಬೆಳಗಾವಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ

ಗಣೇಶ ಉತ್ಸವ,ಬಕ್ರೀದ್ ಹಬ್ಬದ ಬಂದೋಬಸ್ತಿಗೆ 7500 ಜನ ಪೋಲೀಸರು

ಬೆಳಗಾವಿ- ಗಣೇಶ ಹಬ್ಬ ಮತ್ತು ಬಕ್ರೀದ ಹಬ್ಬದ ಸಂಧರ್ಭದಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯೆವಸ್ಥೆ ಕಾಪಾಡಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎರಡೂ ಹಬ್ಬಗಳ ಬಂದೋಬಸ್ತಿಗೆ ಒಟ್ಟು 7500 ಜನ ಪೋಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ತಿಳಿಸಿದ್ದಾರೆ
ಬೆಳಗಾವಿಯಲ್ಲಿ ಪೊಲೀಸ್ ಕಮೀಷನರ್ ಕೃಷ್ಣಭಟ್ ಸುದ್ದಿಗೋಷ್ಠಿ ನಡೆಸಿದರು ಡಿಸಿಪಿಗಳಾದ ಸೀಮಾ ಲಾಟಕರ, ಅಮರನಾಥ ರೆಡ್ಡಿ ಸಾಥ್ ನೀಡಿದರು

ಬೆಳಗಾವಿಯಲ್ಲಿ ನಡೆಯುವ ಅದ್ಧೂರಿ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದುಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ 7500 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ 10 ಕೆ.ಎಸ.ಆರ.ಪಿ, 2 ನಗರ ಶಸ್ತ್ರದಳ, 1 ಕ್ಯೂಆರಟಿ ಪ್ರಹಾರ ದಳ ನಿಯೋಜನೆ.ಮಾಡಲಾಗಿದೆ ಎಂದು ಪೋಲೀಸ್ ಆಯುಕ್ತರು ಮಾಹಿತಿ ನೀಡಿದರು ನಗರದಲ್ಲಿ ಇದೇ 25 ರಿಂದ ಸೆಪ್ಟೆಂಬರ್ 5 ರ ವರೆಗೂ ಬೀಗಿ ಭದ್ರತೆ.ಜೈಗೊಳ್ಳಲಾಗಿದೆ 200 ಸಿಸಿಟಿವಿ ಕ್ಯಾಮೆರಾ, 90 ಟ್ರಾಫಿಕ್ ಮ್ಯಾನೇಜ್ಮೆಂಟ್ ಕ್ಯಾಮೆರಾ ಅವಳವಡಿಕೆ ಮಾಡಲಾಗಿದ್ದು ಕಿಡಗೇಡಿಗಳ ಮೇಲೆ ಸಮಾಜಘಾತುಕ ಶಕ್ತಿಗಳ ಮೇಲೆ ಕಟ್ಟು ನಿಟ್ಟಿನ ಪಹರೆ ಒದಗಿದಲಾಗಿದೆ
380ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾನ.ಮಾಡಲಾಗುತ್ತಿದ್ದು ಗಣೇಶ ಮಹಾಮಂಡಳದ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲ ಎಲ್ಲ ರೀತಿಯ ಸಹಕಾರ ನೀಡುವಂತೆ ಕೋರಲಾಗಿದೆ ಎಂದು ಪೋಲೀಸ್ ಆಯುಕ್ತರು ತಿಳಿಸಿದರು

Check Also

ಬೆಳಗಾವಿ ಏರ್ ಪೋರ್ಟಿನಲ್ಲಿ ಸಿದ್ರಾಮಯ್ಯ ವಿಮಾನ ಲ್ಯಾಂಡಿಂಗ್ ನಿರಾಕರಣೆ.

ಬೆಳಗಾವಿ-ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನಕ್ಕೆ ಬೆಳಗಾವಿ ವಿಮಾನ ನಿಲ್ದಾಣ ಎಂಟ್ರಿಗೆ ನಿರಾಕರಿಸಲಾಗಿದೆ ಸಿಎಂ ಆಗಮನ ಸಂದರ್ಭದಲ್ಲಿ ಪ್ರಧಾನಿ ಮೋದಿ ನಿರ್ಗಮನ …

Leave a Reply

Your email address will not be published. Required fields are marked *