Home / Breaking News / ಕನ್ನಡ ಕಡ್ಡಾಯಕ್ಕೆ ಸರ್ಕಾರಗಳ ಹಿಂದೇಟು ,ನಿಸ್ಸಾರ್ ಅಹ್ಮದ ಕಳವಳ..

ಕನ್ನಡ ಕಡ್ಡಾಯಕ್ಕೆ ಸರ್ಕಾರಗಳ ಹಿಂದೇಟು ,ನಿಸ್ಸಾರ್ ಅಹ್ಮದ ಕಳವಳ..

ಬೆಳಗಾವಿ- ಪಕ್ಕದ ರಾಜ್ಯಗಳಲ್ಲಿ ಅಲ್ಲಿಯ ಸರ್ಕಾರಗಳು ತಮ್ಮ ಭಾಷೆಗೆ ಆದ್ಯತೆ ಕೊಟ್ಟು ತಮ್ಮ ತಮ್ಮ ಭಾಷೆಗಳನ್ನು ತಮ್ಮ ರಾಜ್ಯಗಳಲ್ಲಿ ಕಡ್ಡಾಯಗೊಳಿಸಿವೆ ಆದರೆ ನಮ್ಮ ಸರ್ಕಾರಗಳು ಕನ್ನಡ ಕಡ್ಡಾಯಗೊಳಿಸುವ ಮನಸ್ಸು ಮಾಡುತ್ತಿಲ್ಲ ಎಂದು ನಿತ್ಯೋತ್ಸವ ಕವಿ ನಿಸ್ಸಾರ ಅಹ್ಮದ ಕಳವಳ ವ್ಯೆಕ್ತಪಡಿಸಿದರು

ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಒಂದನೇಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಕನ್ನಡ ಕಲಿಕೆ ಕಡ್ಡಾಯ ಆಗಬೇಕು ಅದಕ್ಕಾಗಿ ನಾಡಿನ ಜನಪ್ರತಿನಿಧಿಗಳು ಮನಸ್ಸು ಮಾಡಬೇಕು ಕನ್ನಡ ಭಾಷೆ ಹಿಂದಿ ಹಾಗು ಇಂಗ್ಲೀಷ್ ಭಾಷೆಗಳಿಗಿಂತಲೂ ಪ್ರಾಚೀನ ಭಾಷೆಯಾಗಿದೆ ನಾವು ಅನ್ಯ ಭಾಷೆಗಳ ಕಲಿಕೆಗೆ ವಿರೋಧಿಸುವ ದಿಲ್ಲ ಇಂಗ್ಲೀಷ್ ಕಲಿಕೆ ಕೂಡಾ ಅನಿವಾರ್ಯವಾಗಿದೆ ಆದರೆ ನಮ್ಮ ಮೊದಲ ಆದ್ಯತೆ ಕನ್ನಡಕ್ಕೆ ಇರಬೇಕು ಎಂದು ನಿಸ್ಸಾರ ಅಹ್ಮದ ಹೇಳಿದರು
ಕೇಂದ್ರ ಸರ್ಕಾರವೂ ಕೂಡ ಹಿಂದಿ ಭಾಷೆಯನ್ನು ಒತ್ತಾಯ ಪೂರ್ವಕವಾಗಿ ಹೇರುವ ಕೆಲಸ ಮಾಡುತ್ತಿದೆ ಮೊದಲು ಕನ್ನಡ ಕಲಿತು ಅದರ ಜೊತೆಗೆ ಬೇರೆ ಭಾಷೆಗಳನ್ನು ಕಲಿಯುವದು ತಪ್ಪಲ್ಲ ಆದರೆ ಕರ್ನಾಟಕದಲ್ಲಿ ಮೊದಲು ಕನ್ನಡ ಕಡ್ಡಾಯ ಆಗಲೇಬೇಕು ಎಂದ ಅವರು ಬೆಂಗಳೂರ ನಗರ ಬೇಕಾಬಿಟ್ಟಿಯಾಗಿ ಬೆಳೆಯುತ್ತಿದೆ ಮನೆಯಿಂದ ಹೊರಗೆ ಬೀಳುವ ಪರಿಸ್ಥಿತಿ ಇಲ್ಲ ಬೆಳಗಾವಿಯ ವಾತಾವರಣ ಚನ್ನಾಗಿದೆ ಇಲ್ಲಿ ಬಂದಾಗ ಇನ್ನೂ ನಾಲ್ಕು ದಿನ ಇರಬೇಕು ಅಂತಾ ಅನಿಸುತ್ತದೆ ಇಲ್ಲಿಯ ಮಠಗಳು ಶಿಕ್ಷಣ ಸಂಸ್ಥೆಗಳು ಕನ್ನಡದ ಬೆಳವಣಿಗೆಗೆ ಶ್ರಮಿಸಿವೆ ಗಡಿನಾಡಿನಲ್ಲಿ ಕನ್ನಡದ ವಾತಾವರಣವನ್ನು ಬೆಳೆಸಿವೆ ಎಂದು ನಿತ್ಯೋತ್ಸವ ಕವಿ ನಿಸ್ಸಾರ ಅಹ್ಮದ ಸಂತಸ ವ್ಯೆಕ್ತಪಡಿಸಿದರು
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ನಾಗನೂರ ಮಠದ ಸಿದ್ಧರಾಮ ಮಹಾಸ್ವಾಮಿಗಳು, ರೆಡ್ಡಿ ಸೇರಿದಂತೆ ಪ್ರಶಸ್ತಿ ಪುರಸ್ಕೃತರನ್ನು ಸತ್ಕರಿಸಲಾಯಿತು

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *