Breaking News
Home / Breaking News / GST ಅಂದ್ರೆ ಒಬ್ಬನೇ ಗಂಡ ಒಬ್ಬಳೇ…ಹೆಂಡ್ತಿ ಇದ್ಹಂಗೆ- ಪ್ರಭಾಕರ ಕೋರೆ

GST ಅಂದ್ರೆ ಒಬ್ಬನೇ ಗಂಡ ಒಬ್ಬಳೇ…ಹೆಂಡ್ತಿ ಇದ್ಹಂಗೆ- ಪ್ರಭಾಕರ ಕೋರೆ

ಬೆಳಗಾವಿ- ಜಿ ಎಸ್ ಟಿ ಟ್ಯಾಕ್ಸ ಅಂದ್ರೆ ಹಲವಾರು ಜನ ಹಲವಾರು ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಆದ್ರೆ ಈ ವಿಷಯದಲ್ಲಿ ಕನ್ಫ್ಯುಸ್ ಬೇಡ ಜಿ ಎಸ್ ಟಿ ಅಂದ್ರೆ ಒಬ್ಬನೇ ಗಂಡ ಒಬ್ಬಳೇ ಹೆಂಡ್ತಿ ಇದ್ಹಂಗೆ ಎಂದು ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು

ನಗರದಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆ ಆಯೋಜಿಸಿದ ಜಿ ಎಸ್ ಟಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಏಕರೂಪ ತೆರಿಗೆಯಿಂದ ದೇಶದ ಆರ್ಥಿಕ ಪರಿಸ್ಥಿತಿ ಪ್ರಗತಿ ಹೊಂದಿದೆ ದೇಶದ ಲಕ್ಷಾಂತರ ಕೋಟಿ ರೂ ಸಾಲ ಚುಕ್ತಾ ಮಾಡಲು ಸಾಧ್ಯವಾಗಿದೆ ಜಿ ಎಸ್ ಟಿ ಯಿಂದ ದೇಶಕ್ಕೆ ಲಾಭವಾಗಿದೆ ಎಂದು ಪ್ರಭಾಕರ ಕೋರೆ ಜಿ ಎಸ್ ಟಿ ಕುರಿತು ಮೆಚ್ಚುಗೆ ವ್ಯೆಕ್ತಪಡಿಸಿದರು

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ ಜಿ ಎಸ್ ಟಿ ದೇಶದಲ್ಲಿ ಜಾರಿಯಾದಾಗಿನಿಂದ ದೇಶದ ಖಜಾನೆ ತುಂಬುತ್ತಿದೆ ಆರ್ಥಿಕ ದಿವಾಳಿಯಿಂದ ದೇಶ ಬಚಾವ್ ಆಗಿದ್ದು ವ್ಯಾಪಾರ ವೃದ್ಧಿಯಾಗಿದೆ ಏಕರೂಪ ತೆರಿಗೆಯಿಂದ ವ್ಯಾಪಾರಿಗಳಿಗೆ ಲಾಭವಾಗುವದರ ಜೊತೆಗೆ ದೇಶದ ಆದಾಯ ಹೆಚ್ಚಿದೆ ,ಆದಾಯ ಹೆಚ್ಚಿದರೆ ದೇಶದ ಜನ ಸಾಮಾನ್ಯರಿಗೆ ಹೆಚ್ವಿನ ಅನಕೂಲತೆಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಜಿ ಎಸ್ ಟಿ ಜಾರಿಯಿಂದ ದೇಶದ ಜನ ಸಾಮಾನ್ಯರಿಗೆ ಲಾಭ ವಾಗಿದೆ ಎಂದರು

ಬೆಳಗಾವಿ ವಿಭಾಗದ
ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಆಯುಕ್ತ ಬೀಜಯಕುಮಾರ್ ಕರ್ ಮಾತನಾಡಿ ಬೆಳಗಾವಿ ಬಿಭಾಗದಲ್ಲಿ ಎಷ್ಟು ಜಿ ಎಸ್ ಟಿ ಕಲೆಕ್ಟ ಆಗಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿ ಜಿ ಎಸ್ ಟಿ ವಸೂಲಾತಿಯಲ್ಲಿ ಸಾಧನೆಗೈದ ಅಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿದರು

Check Also

ಶಾಸಕ ರಾಜು ಕಾಗೆ ಅವರಿಗೆ ನೋಟೀಸ್ ಜಾರಿ..

ವಿವಾದಾತ್ಮಕ ಹೇಳಿಕೆ ಶಾಸಕರಾದ ರಾಜು ಕಾಗೆ ಅವರಿಗೆ ನೋಟಿಸ್ ಜಾರಿ ಚಿಕ್ಕೋಡಿ (ಮೇ.1) ಕಾಗವಾಡ ಶಾಸಕರಾದ ರಾಜು ಕಾಗೆ ಅವರು …

Leave a Reply

Your email address will not be published. Required fields are marked *