Home / Breaking News / ಬೆಳಗಾವಿಯಲ್ಲಿ ಶುರುವಾಯ್ತು ತ್ರೀಡಿ ಲೇಸರ್ ತಂತ್ರಜ್ಞಾನ

ಬೆಳಗಾವಿಯಲ್ಲಿ ಶುರುವಾಯ್ತು ತ್ರೀಡಿ ಲೇಸರ್ ತಂತ್ರಜ್ಞಾನ

ಬೆಳಗಾವಿ-ನಗರದ ಪ್ರತಿಷ್ಠಿತ
ಜಿಐಟಿ ಕಾಲೇಜಿನಲ್ಲಿ ತ್ರೀಡಿ ಲೇಸರ್ ತಂತ್ರಜ್ಞಾನ ಆರಂಭಿಸಲಾಗಿದೆ ಎಂದು ಪ್ರಾಚಾರ್ಯ ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ

ಪತ್ರಿಕಾಗೋಷ್ಠಿ.ನಡೆಸಿದ ಅವರು ಜಿಐಟಿ ಕಾಲೇಜಿನಲ್ಲಿ ತ್ರಿಡಿ ಲೇಸರ್ ತಂತ್ರಜ್ಞಾನದ ಕೇಂದ್ರ ಆರಂಭಿಸಲಾಗಿದೆ.
ಇಂಡಸ್ಟ್ರಿ-4 ತಂತ್ರಜ್ಞಾನ ಮಾದರಿಯ ಈ ವ್ಯವಸ್ಥೆಗೆ ಭಾರತ ಸೇರಿದಂತೆ ಜಾಗತಿಕವಾಗಿ ಬೇಡಿಕೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ

ಈ ಕೇಂದ್ರಕ್ಕಾಗಿ 75 ಲಕ್ಷ ರೂ ಖರ್ಚಾಗಿದ್ದು, ರಾಜ್ಯ ಸರಕಾರ ಶೇ 50 ರಷ್ಟು ಅನುದಾನ ನೀಡಿದೆ ಉತ್ತರ ಕರ್ನಾಟಕದ ಕನಿಷ್ಠ 100 ಕೈಗಾರಿಕೆಗಳಾದರೂ ಈ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎನ್ನುವ ಆಶಯದೊಂದಿಗೆ ರಾಜ್ಯ ಸರಕಾರ ಈ ತಂತ್ರಜ್ಞಾನ ಪ್ರೋತ್ಸಾಹಿಸುತ್ತಿದೆ ಎಂದರು.

ತ್ರಿಡಿ ಪ್ರಿಟಿಂಗ್ ತಂತ್ರಜ್ಞಾನದಿಂದ ರಿವರ್ಸ್ ಎಂಜಿನಿಯರಿಂಗ್ ಗೆ ಹೆಚ್ಚು ಅನುಕೂಲ ಆಗಲಿದೆ. ಯಾವುದೇ ಉತ್ಪನ್ನವನ್ನು ತ್ರಿಡಿ ಸ್ಕ್ಯಾನ್ ಮೂಲಕ ಅದರ ಮಾದರಿ ಪತ್ತೆ ಮಾಡಿ ಬಳಸಿಕೊಳ್ಳಬಹುದು ಎಂದರು.

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *