Breaking News

ಬೆಳಗಾವಿಯಲ್ಲಿ ಸೊಳ್ಳೆಗಳ ಜಾಗಿಂಗ್…ಅಭಯ ಪಾಟೀಲರಿಂದ ಖಾಸಗಿ ಫಾಗಿಂಗ್…!

ಬೆಳಗಾವಿ-ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮೀತ ಷಾ ಮತ್ತು ರಾಜ್ಯದ ಎಲ್ಲ ಬಿಜೆಪಿ ನಾಯಕರು ರಾಜಕೀಯ ತಾಲೀಮು ನಡೆಸಿದರೆ ಇತ್ತ ಬೆಳಗಾವಿಯಲ್ಲಿ ಮಾಜಿ ಶಾಸಕ ಅಭಯ ಪಾಟೀಲ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಫಾಗಿಂಗ್ ಮಾಡಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ

ಬೆಳಗಾವಿ ನಗರದಲ್ಲಿ ಸೊಳ್ಳೆಗಳ ಕಾಟ ಜಾಸ್ತೀಯಾಗಿ ಅನೇಕ ಜನ ಡೆಂಗ್ಯು ಜ್ವರಕ್ಕೆ ತುತ್ತಾಗಿರುವದನ್ನು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಗಂಭೀರವಾಗಿ ಪರಗಣಿಸದೇ ಇದ್ದರೂ ಮಾಜಿ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಬಡಾವಣೆಗಳಲ್ಲಿ ಹದಿನೈದು ಇಲೆಕ್ಟ್ರಿಕಲ್ ಫಾಗಿಂಗ್ ಮಶೀನ್ ಗಳ ಮೂಲಕ ಫಾಗಿಂಗ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ

ಹಲವಾರು ವರ್ಷಗಳಿಂದ ಪ್ರತಿ ಭಾನುವಾರ ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸುತ್ತ ಬಂದಿರುವ ಅಭಯ ಪಾಟೀಲ ವಡಗಾಂವ,ಖಾಸಬಾಗ ಪ್ರದೇಶದ ಮೂವತ್ತಕ್ಕೂ ಹೆಚ್ಚು ಬಡಾವಣೆಗಳಲ್ಲಿ ಹದಿನೈದು ಫಾಗಿಂಗ್ ಮಶೀನ್ ಗಳ ಮೂಲಕ ಫಾಗಿಂಗ್ ಮಾಡಿಸಿ ಎಲ್ಲರ ಗಮನ ಸೆಳೆದಿದ್ದಾರೆ
ಈ ಕುರಿತು ಬೆಳಗಾವಿ ಸುದ್ಧಿಯ ಜೊತೆ ಮಾತನಾಡಿದ ಮಾಜಿ ಶಾಸಕ ಅಭಯ ಪಾಟೀಲ ಪ್ರತಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಸುವ ಸಂಧರ್ಭದಲ್ಲಿ ಸಾರ್ವಜನಿಕರು ಸೊಳ್ಳೆಗಳ ಕಾಟ ಹೆಚ್ಚಾಗಿದೆ ಡೆಂಗ್ಯು ಜ್ವರದ ಭೀತಿ ನಮ್ಮನ್ನು ಕಾಡುತ್ತಿದೆ ನಮ್ಮ ಏರಿಯಾದಲ್ಲಿ ಫಾಗಿಂಗ್ ಮಾಡಿಸಿ ಎನ್ನುವ ಬೇಡಿಕೆ ಇಟ್ಟಿದ್ದರಿಂದ ಸಮಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗದೇ ಇರುವದರಿಂದ ಹದಿನೈದು ಫಾಗಿಂಗ್ ಮಶೀನ್ ಗಳನ್ನು ಖರೀಧಿಸಿ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಬಡಾವಣೆಗಳಲ್ಲಿ ಫಾಗಿಂಗ್ ಮಾಡಿಸಲಾಗುತ್ತಿದೆ ಎಂದು ಅಭಯ ಪಾಟೀಲ ಹೇಳಿದರು
ಪ್ರತಿ ಭಾನುವಾರ ತಪ್ಪದೇ ನಾನು ಮತ್ತು ನಮ್ಮ ಹುಡುಗರು ಸ್ವಚ್ಛತಾ ಅಭಿಯಾನ ನಡೆಸಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವ ಕಾರ್ಯದಲ್ಲಿ ತೊಡಗಿದ್ದು ಈಗ ಹದಿನೈದು ಇಲೆಕ್ಟ್ರಿಕಲ್ ಫಾಗಿಂಗ್ ಮಶೀನ್ ಗಳು ನಮ್ಮ ಬಳಿ ಇದ್ದು ಈ ಮಶೀನ್ ಗಳ ಮೂಲಕ ಔಷಧಿ ಸಿಂಪಡಿಸಿ ಬೆಳಗಾವಿ ದಕ್ಷಿಣ ಮತ ಕ್ಷೇತ್ರವನ್ನು ಸೊಳ್ಳೆ ಮುಕ್ತ ಪ್ರದೇಶವನ್ನಾಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಅಭಯ ಪಾಟೀಲ ತಿಳಿಸಿದರು
ಭಾನುವಾರ ಬೆಳಿಗ್ಗೆ ಏಕಾ ಏಕಿ ಅಭಯ ಪಾಟೀಲರ ಫಾಗಿಂಗ್ ಮಶೀನ್ ಗಳ ಮೂಲಕ ವಡಗಾವಿಯ ಲಕ್ಷ್ಮೀ ಗಲ್ಲಿಯಿಂದ ಫಾಗಿಂಗ್ ಶುರುವಾದಾಗ ಈ ಭಾಗದ ಜನ ಅಭಯ ಪಾಟೀಲರ ಜನಪರ ಕಾಳಜಿಯನ್ನು ಕೊಂಡಾಡಿದರು

Check Also

ಆಸ್ಪತ್ರೆ ಉದ್ಘಾಟನೆ ಮಾಡಿ,ಡೆಸ್ಕ್ ಖರೀಧಿ ಮಾಡಿ,ಡೆಂಗ್ಯು ಕಂಟ್ರೋಲ್ ಮಾಡಿ….!!

  ಚಿಕ್ಕೋಡಿ‌ ತಾಯಿ ಮಕ್ಕಳ ಆಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಕ್ರಮ‌ ಜರುಗಿಸಿ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಜು.12: ಚಿಕ್ಕೋಡಿಯಲ್ಲಿ …

Leave a Reply

Your email address will not be published. Required fields are marked *