Breaking News
Home / Breaking News / ಗೋಕಾಕ್ ಕ್ಷೇತ್ರದ ಹಳ್ಳಿ,ಹಳ್ಳಿ… ಗಲ್ಲಿ ಗಲ್ಲಿ…ಗಳಲ್ಲಿ ಇಂದಿನಿಂದ “ಅಮರನಾಥ” ಯಾತ್ರೆ…..!

ಗೋಕಾಕ್ ಕ್ಷೇತ್ರದ ಹಳ್ಳಿ,ಹಳ್ಳಿ… ಗಲ್ಲಿ ಗಲ್ಲಿ…ಗಳಲ್ಲಿ ಇಂದಿನಿಂದ “ಅಮರನಾಥ” ಯಾತ್ರೆ…..!

ವಿ

ಬೆಳಗಾವಿ- ಗೋಕಾಕ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಹಳ್ಳಿಯಲ್ಲಿ ಅಮರನಾಥ ಯಾತ್ರೆ ಈ ಯಾತ್ರೆ,ಕ್ಷೇತ್ರದ ಜನರಿಗೆ ಸಹಾಯ ಮಾಡುವ ಯಾತ್ರೆ,ಕ್ಷೇತ್ರದ ಮನೆ,ಮನೆಗೂ ತಲುಪುವ ಯಾತ್ರೆ,ಕ್ಷೇತ್ರದ ಜನರಿಗೆ ಧೈರ್ಯ ತುಂಬುವ ಯಾತ್ರೆ,ಈ ಅರ್ಥಪೂರ್ಣ,ಅಂತಃಕರಣದ ಯಾತ್ರೆ ಗೋಕಾಕ ಪಟ್ಟಣದಿಂದ ಶುಭ ಶುಕ್ರವಾರ ಆರಂಭವಾಗಲಿದೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಪುತ್ರ ಅಮರನಾಥ ಅವರು,ಗೋಕಾಕ್ ಕ್ಷೇತ್ರದ ಜನರಿಗೆ ಕಿಟ್ ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡು,ಐವತ್ತು ಸಾವಿರಕ್ಕೂ ಹೆಚ್ಚು ಕಿಟ್ ರೆಡಿ ಮಾಡಿಕೊಂಡು ಇಂದು ಶುಕ್ರವಾರ ಕ್ಷೇತ್ರದ ಜನರಿಗೆ ಕಿಟ್ ಹಂಚಿಕೆ ಮಾಡುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ‌.

ಆಹಾರ ಸಾಮುಗ್ರಿಗಳ ಕಿಟ್ ಗಳು ಗೋಕಾಕ್ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ, ಪ್ರತಿಯೊಂದು ಹಳ್ಳಿಯ ಮನೆನೆಗೂ ಮುಟ್ಟಿಸಲು ಅಮರನಾಥ ಜಾರಕಿಹೊಳಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು,ಈ ಪುಣ್ಯದ ಕೆಲಸದಲ್ಲಿ ಅಮರನಾಥ ಅವರ ಮಾವ,ಅಂಬಿರಾವ್ ಸಾಥ್ ನೀಡಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಕ್ಷೇತ್ರದ ಜನರಿಗೆ ಕಿಟ್ ತಲುಪಿಸುವ ಅರ್ಥಪೂರ್ಣ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅಮರನಾಥ, ಗೋಕಾಕ್ ಕ್ಷೇತ್ರದ ಜನ ಮೆಚ್ಚುವ ರೀತಿಯಲ್ಲಿ ತಂದೆಯ ಆಜ್ಞೆಯನ್ನು ಅತ್ಯಂತ ಪ್ರಾಮಾಣಿಕ ವಾಗಿ ಪಾಲಿಸುತ್ತಿದ್ದಾರೆ.

ಇವಾಗ ಐವತ್ತು ಸಾವಿರಕ್ಕೂ ಹೆಚ್ಚು ಕಿಟ್ ಗಳು ರೆಡಿಯಾಗಿವೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ,ಪ್ರತಿಯೊಂದ ಮನೆಗೂ ಕಿಟ್ ಮುಟ್ಟಿಸುವ ಸಂಕಲ್ಪ ರಮೇಶ್ ಜಾರಕಿಹೊಳಿ ಅವರದ್ದಾಗಿದೆ,ಕಿಟ್ ತಯಾರಿಸಲು ಅಗತ್ಯವಿರುವ ಸಾಮುಗ್ರಿಗಳನ್ನು ದಾಸ್ತಾನು ಮಾಡಲಾಗಿದೆ.

ಗೋಕಾಕ ತಾಲ್ಲೂಕಿನ ಜನ ಕಷ್ಟದಲ್ಲಿದ್ದಾಗ ಜಾರಕಿಹೊಳಿ ಮನೆತನ ಯಾವಾಗಲೂ ತಾಲ್ಲೂಕಿನ ಜನರ ಸಹಾಯಕ್ಕೆ ನಿಂತಿದ್ದಾರೆ.ಜನರ ಕಷ್ಟ ಸುಖಕ್ಕೆ ಈ ಮನೆತನ ಸ್ಪಂದಿಸುತ್ತಲೇ ಬಂದಿದೆ.ಅರಬಾವಿ ಕ್ಷೇತ್ರದ ಶಾಸಕ ಮಾಜಿ ಸಚಿವ ಹಾಲಿ ಕೆ ಎಂ ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅರಬಾವಿ ಕ್ಷೇತ್ರದಲ್ಲಿ ಸದ್ದಿಲ್ಲದೇ ಪ್ರಚಾರದ ಅಬ್ಬರವಿಲ್ಲದೇ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಈಗ ಅದೇ ಮಾದರಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರು ಕ್ಷೇತ್ರದ ಜನರ ಸಹಾಯಕ್ಕೆ ಧಾವಿಸಿದ್ದಾರೆ ಜಾರಕಿಹೊಳಿ ಮನೆತನ ಜನರಿಗಾಗಿ ಎಲ್ಲ ರೀತಿಯ ಸಹಾಯ ಸವಲತ್ತುಗಳನ್ನು ಒದಗಿಸಿದೆ

ಜಾರಕಿಹೊಳಿ ನಿಂತರೆ ಜಾತ್ರೆ….. ಜಾರಕಿಹೊಳಿ ನಡೆದರೆ ಮೆರವಣಿಗೆ….!! ಎನ್ನುವ ಮಾತಿದೆ ಅವರು ಮಾಡುವ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿ

About BGAdmin

Check Also

ಸೀಲ್ ಡೌನ್ ಬ್ಯಾರಿಕೇಡ್ ಮೇಲೆ ಗೆಟ್ ವೆಲ್ ಸೂನ್…..!

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಈಗ ಸರ್ವವ್ಯಾಪಿಯಾಗಿದೆ.ಒಂದು ಏರಿಯಾ ಸೀಲ್ ಡೌನ್ ಮಾಡಿದ್ದನ್ನು ನೋಡಿ ಬೇಸರ ಪಡುವವರ ಸಂಖ್ಯೆ ಜಾಸ್ತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ