Breaking News

ಆಶಾ ಕಾರ್ಯಕರ್ತೆಯರಿಗೆ ಮಹೇಶ ತಮ್ಮಣ್ಣವರ ನೆರವು…..

ರಾಯಬಾಗ:
ಮಹಾಮಾರಿ ಕರೋನಾ ವೈರಸ್ ದೇಶಾದ್ಯಂತ ಹರಡುತ್ತಿರುವ ಹಿನ್ನೆಲೆ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತರನ್ನು ಮೆಚ್ಚಲೆ ಬೇಕು.‌ಅವರಿಗೆ ಧೈರ್ಯ ತುಂಬುವ ಕೆಲಸ‌ ಎಂದು ಯುವ ಧುರೀಣ ಮಹೇಶ ತಮ್ಮಣ್ಣವರ ಹೇಳಿದರು.
ಕಲ್ಲೋಳಿಕರ ಪ್ರತಿಷ್ಠಾನದ ವತಿಯಿಂದ ತಾಲೂಕಿನ‌ ನಸಲಾಪುರ, ನಂದಿ‌ಕುರಳಿ ಗ್ರಾಮದ ಆಶಾ ಕಾರ್ಯಕರ್ತರಿಗೆ ಹಾಗೂ ಬಡ ಕುಟುಂಬಗಳಿಗೆ ಸುಮಾರು ೨೦೦೦ ಕ್ಕಿಂತ ಅಧಿಕ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.೪೦ ರಷ್ಟು ಜನ ಇವತ್ತು ದುಡಿದು ಇವತ್ತೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಅಂತರ ಕಾಯ್ದುಕೊಂಡು ದುಡಿದು ತಿನ್ನಿ. ನಾವು ಮಾಡುವ ಸಹಾಯ ಅಲ್ಪವಾಗಿರುವುದು. ಆದರೆ ನಿಮ್ಮ‌ ಜೊತೆ ನಾವಿದ್ದೇವೆ. ದೈರ್ಯಗೆಡಬಾರದು. ರೋಗ ಅಷ್ಟೋಂದು ಸಲೀಸಾಗಿ ಹೋಗುವ ಹಾಗೇ ಕಾನುವುದಿಲ್ಲ. ನಮ್ಮ‌ ಜಾಗೃತೆಯಲ್ಲಿ ನಾವಿರೋಣ ಎಂದು ಸಲಹೆ ನೀಡಿದರು.
ಸರಕಾರದ ವೈದ್ಯಕೀಯ, ಪೊಲೀಸ್ ಹಾಗೂ ಆಶಾ ಕಾರ್ಯಕರ್ತರು ಮಾತ್ರ ಹೊರಗಡೆ ಬಂದಿದ್ದಾರೆ. ಸರಕಾರದ ಸಚಿವರೇ ಹೊರಗೆ ಬಂದಿಲ್ಲ. ಈ ಮೂರು ಇಲಾಖೆ ಸಿಬ್ಬಂಧಿಗಳನ್ನು ಮೆಚ್ಚಲೆ ಬೇಕು. ನಾವು ಕಿಟ್ ಗಳನ್ನು ವಿತರಿಸುತ್ತಿರುವುದು ದೊಡ್ಡ ವಿಷಯ ಅಲ್ಲ. ಈ ಮೂರು ಇಲಾಖೆ ಸಿಬ್ಬಂಧಿಗಳಿಗೆ ಧೈರ್ಯ ತುಂಬಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬಟ್ಟೆ ಮಾಸ್ಕಗಳನ್ನು ಹಾಕಿಕೊಳ್ಳಿ, ಹೊರಗಡೆ ಹೋಗಿ ಬಂದ‌ನಂತ್ರ ಕೈಕಾಲು ಮುಖ ತೊಳೆದುಕೊಳ್ಳಿ, ಸ್ಯಾನಿಟೈಸರ್ ನಿಂದ ಕೈ ತೊಳೆದುಕೊಳ್ಳಿ ಎಂದು ಜನರಿಗೆ ಸಲಹೆ ನೀಡಿದರು..
ಈ ಸಂದರ್ಭದಲ್ಲಿ ೨೦೦೦ ಕ್ಕಿಂತ ಹೆಚ್ಚು ಆಶಾ ಕಾರ್ಯಕರ್ತರಿಗೆ ದಿನಸಿ ಅಂಗಡಿಗಳಿಗೆ ಕಿಟ್ ವಿತರಿಸಲಾಯಿತು.
ಮಹಾವೀರ ಮೊಹಿತೆ, ದಿಲೀಪ್ ಜಮಾದರ, ಅರ್ಜುನ್ ಬಂಡಗರ, ರಾಜು ಸಿರಗಾಂವಿ, ರಾಜು ತಳವಾರ, ಅಣ್ಣಾಸಾಬ ಸಮಾಜೆ, ಅಜೀತ ಪಾಟೀಲ, ಅಬ್ದುಲ್ ತಾಂಬುಟಿ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು. ಬಾಬು ಬಂಡಗರ ನಿರೂಪಿಸಿ ವಂಧಿಸಿದರು..

Check Also

ಖಡಕ್ ಪೋಲೀಸ್ ಅಧಿಕಾರಿ ಭರಮಣಿಗೆ ಅವಮಾನ, ಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಳಗಾವಿ-ಸಿಎಂ ಖುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿರುವ ಸಿದ್ರಾಮಯ್ಯ ಸಹನೆ ಕಳೆದುಕೊಂಡಿದ್ದು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳ ಜೊತೆ ಅಸಭ್ಯವಾಗಿ ವರ್ತಿಸತ್ತಿದ್ದಾರೆ,ಮುಖ್ಯಮಂತ್ರಿಗಳ ಅಸಭ್ಯ ವರ್ತನೆಯಿಂದ …

Leave a Reply

Your email address will not be published. Required fields are marked *