ಕ್ರಾಂತಿಯ ನೆಲದಲ್ಲಿ ಮತಬೇಟೆಗೆ ಚಾಣಕ್ಯನ ತಂತ್ರ….!!! ವೀರರಾಣಿ, ಕ್ರಾಂತಿವೀರನಿಗೆ ಗೌರವ ಸಮರ್ಪಣೆ

*ರಾಣಿ ಚನ್ನಮ್ಮ , ಸಂಗೊಳ್ಳಿ ರಾಯಣ್ಣನ ಮೇಲಿನ ಗೌರವ ಫಲ ನೀಡುವುದೇ?*

ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ನಿನ್ನೆಯಿಂದ ಉತ್ತರ ಕಾರ್ನಾಟಕ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಧಾರವಾಡ ಮತ್ತು ಗದಗ ಜಿಲ್ಲೆ ಮುಗಿಸಿಕೊಂಡು ಇಂದು ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪ್ರಚಾರ ಕಾರ್ಯಕೈಗೊಂಡಿದ್ದಾgಷ್ಟಿಂದು ಮುಂಜಾನೆ ಕಿತ್ತೂರಿನಲ್ಲಿ ಪ್ರಥಮ ಸ್ವಾತಂತ್ರ್ಯ ಹೋರಾಟಗಾರತಿ ವೀರರಾಣಿ ಚನ್ನಮ್ಮನ ಸ್ಮಾರಕಕ್ಕೆ ಭೆಟ್ಟಿ ನೀಡಿ ಪುಷ್ಟ ಅರ್ಪಿಸಿ ಗೌರವಾರ್ಪಣೆ ಸಲ್ಲಿಸುವುದರ ಮೂಲಕ ಬೆಳಗಾವಿ ಜಿಲ್ಲೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರ ವನಿತೆ ಕಿತ್ತೂರ ರಾಣಿ ಚನ್ನಮ್ಮಾಜಿಯ ಪ್ರತಿಮೆಗೆ ಕ್ರಾಂತಿ ನೆಲ ಕಿತ್ತೂರಿನಲ್ಲಿ ಅಮೀತ ಷಾ ಪುಷ್ಪ ಗೌರವ ಸಲ್ಲಿಸಿದರು

ಇದಾದ ಬಳಿಕ ನಂದಗಡ ಗ್ರಾಮಕ್ಕೆ ತೆರಳಿದ ಅಮೀತ ಷಾ ರಾಣಿ ಚನ್ನಮ್ಮನ ಬಲಗೈ ಬಂಟ ಹಾಗೂ ಬ್ರಿಟಿಷರಿಗೆ ಸಿಂಹಸಪ್ನವಾಗಿ ಕಾಡಿದ ವೀರ ಸಂಗೊಳ್ಳಿಯ ರಾಯಣ್ಣನ ಸ್ಮಾರಕವಿರುವ ಖಾನಾಪೂರ ತಾಲೂಕಿನ ನಂದಗಡಕ್ಕೆ ಭೆಟ್ಟಿ ನೀಡಿ, ರಾಯಣ್ಣನ ಸ್ಮಾರಕಕ್ಕೆ ಗೌರವ ಅರ್ಪಣೆ ಸಲ್ಲಿಸಿದರು.

ಅಮಿತ್ ಶಾ ಅವರು ಜನಾಸಾಮಾನ್ಯರ ಸಂಪರ್ಕ ಸಾಧಿಸಿದ್ದು ತೀರ ಅಪರೂಪ. ಅವರು ಆಯಾ ಸಮುದಾಯಗಳ ಮಠಮಾನ್ಯಗಳಿಗೆ ಭೆಟ್ಟಿ ನೀಡಿ ಪೂಜೆ ಪುನಸ್ಕಾರಗಳ ಮೂಲಕ ಆ ಸಮುದಾಯಗಳನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತ ಬಂದಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯದ ಸಂಕೇವಾಗಿರುವ ವೀರ ರಾಣಿ ಚನ್ನಮ್ಮನ ಸ್ಮಾರಕ  ಹಾಗೂ ಕುರುಬ ಸಮುದಾಯದ ನಾಯಕತ್ವದ ಸಂಕೇತವಾದ ವೀರ ಸಂಗೋಳ್ಳಿ ರಾಯಣ್ಣನ ಸ್ಮಾರಕ್ಕೆ ಭೆಟ್ಟಿ ನೀಡುವುದರ ಮೂಲಕ ಆ ಸಮುದಾಯಗಳ ಒಲುವು ಗಳಿಸಲು ಅಮಿತ್ ಶಾ ಅವರು ಮಾಡಿದ ರಾಜಕೀಯ ತಂತ್ರಗಾರಿಕೆ ಎಂಬುದು ಬಹಿರಂಗ ಸತ್ಯವಾಗಿದೆ

ಮಧೋಳ ಕಾರ್ಯಕ್ರಮ ಮುಕ್ತಾಯದ ನಂತರ ಮತ್ತೇ ಬೆಳಗಾವಿ  ಜಿಲ್ಲೆಗೆ ಪ್ರವೇಶ ಪಡೆಯುವ ಅವರು  ಗೋಕಾಕದಲ್ಲಿ ಸಂಗೋಳ್ಳಿ ರಾಯಣ್ಣನ ವೃತ್ತದಿಂದ ಶೂನ್ಯ ಸಂಪಾದನ ಮಠದವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಗೋಕಾಕ ಜಾರಕಿಹೊಳ್ಳಿ ಸಹೋದರ ಪ್ರಭಾವಕ್ಕೆ ಒಳಗಾದ ಪ್ರದೇಶ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚುನಾಯಿತರಾದ ಕ್ಷೇತ್ರ. ಈ ಕ್ಷೇತ್ರದ ಮತಬೇಟೆಗೆ ಅಮಿತ್ ಶಾ ಅವರು ರೋಡ್ ಶೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಬೇಕೆಂಬ ಉದ್ದೇಶ ಹೊಂದಿರುವ ಅಮಿತ್ ಶಾ ಅವರು ಜಿಲ್ಲೆಯ ಗಡಿ ಪ್ರದೇಶ ನಿಪ್ಪಾಣಿಯಲ್ಲಿ ಬೃಹತ್ ಮಹಿಳಾ ಸಮಾವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಬೆಳಗಾವಿ ನಗರಕ್ಕೆ ಆಗಮಿಸುವ ಅವರು ನೆಹರು ಮೆಡಿಕಲ್ ಸಭಾಂಗಣದಲ್ಲಿ ನಗರದ ಕೆ.ಎಲ್.ಇ. ವೈದ್ಯ ಕಾಲೇಜ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.