Breaking News
Home / Breaking News / ಮೀಸೆ ತಿರುವಿದ ಸಿದ್ರಾಮಯ್ಯ ಬೇರೆ ಕ್ಷೇತ್ರ ಹುಡುಕುತ್ತಿರುವದೇಕೆ- ಅಮೀತ ಷಾ ಪ್ರಶ್ನೆ

ಮೀಸೆ ತಿರುವಿದ ಸಿದ್ರಾಮಯ್ಯ ಬೇರೆ ಕ್ಷೇತ್ರ ಹುಡುಕುತ್ತಿರುವದೇಕೆ- ಅಮೀತ ಷಾ ಪ್ರಶ್ನೆ

ಬೆಳಗಾವಿ

ಮೀಸೆ ಮೇಲೆ ಕೈಹಾಕಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ದಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜನರ ಆಕ್ರೋಶಕ್ಕೆ
ಹೆದರಿ ಮೈಸೂರಿನ ಚಾಮುಂಡಿ ಕ್ಷೇತ್ರವನ್ನು ಬದಲಾಯಿಸಿ ಬೇರೆ ಕ್ಷೇತ್ರವನ್ನು ಹುಡುಕಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.
ಶುಕ್ರವಾರ ಕಿತ್ತೂರಿನ ಚನ್ನಮ್ಮಳ ಮೂರ್ತಿಗೆ ಮಾಲಾರ್ಪಣೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು.
ಮೀಸೆ ತಿರುವಿ ಚಾಮುಂಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಜಂಬದಿಂದ ಹೇಳುತ್ತಿದ್ದ ಸಿದ್ದರಾಮಯ್ಯಗೆ ಆ ಕ್ಷೇತ್ರದ ಜನರ ಆಕ್ರೋಶಕ್ಕೆ ಹೆದರಿ ಕ್ಷೇತ್ರ ಹುಡುಕಾಡುತ್ತಿದ್ದಾರೆ‌ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನ ಸರಕಾರದ ಮೇಲೆ ರಾಜ್ಯದ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಾನು ಪ್ರವಾಸ ಮಾಡಿದ ಕಡೆಗಳಲ್ಲಿ ಸಿದ್ದರಾಮಯ್ಯನವರ ಬಗ್ಗೆ ಆಕ್ರೋಶವ್ಯಕ್ತಪಡಿಸುವ ಜನತೆ ಯಡಿಯೂರಪ್ಪನವರ ಮೇಲೆ ಪ್ರೀತಿ ತೋರುತ್ತಿದ್ದಾರೆ.
ಚುನಾವಣೆಯ ಮುನ್ನವೇ ರಾಜ್ಯದ ಜನತೆ ಬಿಜೆಪಿಗೆ ಗೆಲುವಿಗೆ ಸಂದೇಶ ನೀಡುತ್ತಿದ್ದಾರೆ. ಈ ಸಲ ಪ್ರಚಂಡ ಬಹುಮತದಿಂದ ಕನಾ೯ಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸಮ್ಮುಖದಲ್ಲಿ ಕನಾ೯ಟಕವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯಲಾಗುವುದು ಎಂದರು
ಜೀವನದಲ್ಲಿ ಇದೇ ಮೊದಲ ಬಾರಿಗೆ ಕಿತ್ತೂರಿನ ನಾಡಿಗೆ ಆಗಿಮಿಸಿದ್ದೇನೆ. 1857ರ ಕ್ರಾಂತಿಗೂ ಮುನ್ನ. ಸ್ವಾತಂತ್ರ್ಯದ ಹೋರಾಟದ ಕಿಚ್ಚನ್ನು ಹಚ್ಚಿದ್ದವಳು ವೀರರಾಣಿ ಕಿತ್ತೂರು ಚೆನ್ನಮ್ಮ.
ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನವೂ ಆಗಿರುವುದು ಇತಿಹಾಸವಾಗಿದೆ ಎಂದರು.

About BGAdmin

Check Also

ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹಾಜರ್

ಬೆಳಗಾವಿ-ರಾಷ್ಟ್ರಪತಿಗಳನ್ನು ಸ್ವಾಗತಿಸಲು ಬೆಳಗಾವಿಯ ಸಾಂಬ್ರಾ ಎರಪೋರ್ಟ ಗೆ ಸಚಿವ ರಮೇಶ ಜಾರಕಿಹೋಳಿ ಆಗಮಿಸಿದರು ಸರ್ಕಾರಿ ವಾಹನ ಬಿಟ್ಟು ಎಸ್ಕಾಟ್ ಇಲ್ಲದೇ …

Leave a Reply

Your email address will not be published. Required fields are marked *