Breaking News
Home / Breaking News / ಅಶೋಕ್ ಮಣ್ಣೀಕೇರಿಗೆ ಆಗಿದ್ದು ಹೃದಯಾಘಾತವೋ ಅಥವಾ ಅದೊಂದು ಕೊಲೆಯೋ??

ಅಶೋಕ್ ಮಣ್ಣೀಕೇರಿಗೆ ಆಗಿದ್ದು ಹೃದಯಾಘಾತವೋ ಅಥವಾ ಅದೊಂದು ಕೊಲೆಯೋ??

ಬೆಳಗಾವಿ-ಆತ ವೃತ್ತಿಯಲ್ಲಿ ಗ್ರೇಡ್ ೨ ತಹಶೀಲ್ದಾರ್.. ನಿನ್ನೆ ಎಂದಿನಂತೆ ಕೆಲಸ ಮುಗಿಸಿ ಬಂದ ಆತ ಊಟ ಮಾಡಿ ಮಲಗಿದ್ದೆ ಬಂತು.ಮತ್ತೆ ಮೇಲೇಳಲೇ ಇಲ್ಲ. ತಹಶೀಲ್ದಾರ್ ಪತ್ನಿ ಹೃದಯಾಘಾತ ಆಗಿ ಅವರು ತೀರಿ ಹೋಗಿದ್ದಾರೆ ಅಂತ ಹೇಳಿದ್ರೆ ಇತ್ತ ತಹಶೀಲ್ದಾರ್ ಪೋಷಕರು ಹಾಗೂ ಸಹೋದರಿಯರು ಅನುಮಾನಾಸ್ಪದ ಸಾವು ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ದಕ್ಷ ಆಡಳಿದಿಂದಲೇ ಹೆಸರಾಗಿದ್ದ ತಹಶೀಲ್ದಾರ್ ಯಾರು ಅವರಿಗೇ ಏನಾಯತು ಅನ್ನೋದು ಅನುಮಾನ.

ಹೃದಯಾಘಾತ ಆಗಿದೆ ಬೇಗ ಬನ್ನಿ ಅಂತ ಫೋನ್ ಮಾಡಿದ್ಳು ತಹಶೀಲ್ದಾರ್ ಪತ್ನಿ!!

ಅಲ್ಲ ಅಲ್ಲ ಇದು ಅನುಮಾನಾಸ್ಪದ ಸಾವು ಎಂದ ತಹಶೀಲ್ದಾರ್ ಕುಟುಂಬಸ್ಥರು!!

ಗ್ರೇಡ್ ೨ ತಹಶೀಲ್ದಾರ್ ಅಶೋಕ್ ಮಣ್ಣೀಕೇರಿಗೆ ಆಗಿದ್ದು ಹೃದಯಾಘಾತವೋ ಅಥವಾ ಅದೊಂದು ಕೊಲೆಯೋ??

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದಣ.

ಅಶೋಕ್ ಮಣ್ಣೀಕೇರಿ ಅಂತ ಬೆಳಗಾವಿಯ ಎಸಿ ಕಚೇರಿಯಲ್ಲಿ ಗ್ರೇಡ್ ೨ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸಧ್ಯ ಈ ಅಶೋಕ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ನಿನ್ನೆ ಎಂದಿನಂತೆ ಮನೆಯಲ್ಲಿ ‌ಊಟ ಮಾಡಿ ಮಲಗಿದ್ದ ಅಶೋಕ್ಗೆ ಮುಂಜಾನೆ ೩ ಗಂಟೆಗೆ ಹೃದಯಾಘಾತ ಆಗಿದೆ ನೀವು ಬೇಗ ಬನ್ನಿ ಅಂತ ಮೃತ ಅಶೋಕ್ ಪತ್ನಿ ಭೂಮಿ ಅಶೋಕ್ ಸಹೋದರಿ ಗಿರಿಜಾ ಅವರಿಗೆ ಕರೆ ಮಾಡಿದ್ದರು ತಕ್ಷಣವೇ ಅಶೋಕ್ ಮತ್ತು ಭೂಮಿ ಮನೆಗೆ ಗಿರಿಜಾ ಹೊರಡಿಸಿದ್ದರು. ಇನ್ನೂ ಗಿರಿಜಾ ದಾರಿ ಮಧ್ಯೆ ಇರುವಾಗಲೇ ಮತ್ತೊಂದು ಬಾರಿ ಕರೆ ಮಾಡಿದ ಭೂಮಿ ನೀವು ಆಸ್ಪತ್ರೆಗೆ ಬನ್ನಿ ಅಂತ ಹೇಳಿದ್ರಂತೆ. ಗಿರಿಜಾ ಅಲ್ಲಿಗೆ ಹೋಗುವಷ್ಟರಲ್ಲಿ ಅಶೋಕ್ ಸಾವನ್ನಪ್ಪಿದ್ದು ಗಿರಿಜಾ ಹಾಗೂ ಕುಟುಂಬಕ್ಕೆ ಗೊತ್ತಾಗಿದೆ.ಅಶೋಕ್ ಗೆ ಹೃದಯಾಘಾತ ಆಗಿದೆಯಾ ಎಂದು ವೈದ್ಯರನ್ನು ಕೇಳಿದ ಗಿರಿಜಾಗೆ ವೈದ್ಯರು ಇಲ್ಲ ಎಂದು ಉತ್ತರಿಸಿದ್ದಾರಂತೆ

ಯಾವಾಗ ವೈದ್ಯರ ಹೇಳಿಕೆಗೂ ಹಾಗೂ ಮೃತ ಅಶೋಕ್ ಪತ್ನಿ ಭೂಮಿ ಹೇಳಿಕೆಗೂ ಒಂದಕ್ಕೊಂದು ತಾಳ ಮೇಳ‌ ಇರದೆ ಇರುವುದು ಕಂಡು ಬಂತೋ ಆಗಲೇ ಕುಟುಂಬಸ್ಥರು ಹಾಗೂ ಅಶೋಕ್ ಸ್ನೇಹಿತರು ಸೇರಿ ಅನುಮಾನಾಸ್ಪದ ಕೊಲೆ ಕೇಸ್ ದಾಖಲಿಸಲು ನಿರ್ಧಾರ ಮಾಡಿ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ತೆರಳಿ ದೂರು‌ ನೀಡಿದ್ದಾರೆ. ಈ ವೇಳೆ ಕ್ಯಾಂಪ್ ಠಾಣೆ ಎದುರು ಪ್ರತ್ಯಕ್ಷವಾದ ಮೃತ ಅಶೋಕ್ ಭಾಮೈದ ಸ್ಯಾಮ್ಯುಯಲ್ ಮೇಲೆ ಅಶೋಕ್ ಸ್ನೇಹಿತರು ಹಾಗೂ ಕುಟುಂಬಸ್ಥರು ಹಲ್ಲೆಗೂ ಮುಂದಾಗಿದ್ದರು. ಎಫ್ ಡಿ ಎ ಮಾಡಿಕೊಂಡು ತಮ್ಮ ವೃತ್ತಿ ಜೀವನ‌ ಪ್ರಾರಂಭ ಮಾಡಿದ್ದ ಅಶೋಕ್ ಕೆಲ ಕಾಲ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಆಪ್ತ‌ ಸಹಾಯಕನಾಗಿಯೂ ಕೆಲಸ ಮಾಡಿದ್ದು. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಅಶೋಕ್ ಸಾವಿಗೆ ಸಂತಾಪ ಸೂಚಿಸಿದ್ದು ಜನಾನುರಾಗಿ ಅಧಿಕಾರಿಯಾಗಿದ್ದ ಅಶೋಕ್‌ ಕಳೆದುಕೊಂಡಿದ್ದು ನನ್ನದೆ ಒಂದು ಕೈ ಕಳೆದುಕೊಂಡಂತಾಗಿದೆ. ಅಂತ ಭಾವುಕರಾದರು.ಅಶೋಕ್ ಸಾವು ಅನುಮಾನಾಸ್ಪದ ಅಂತ ದೂರು ನೀಡಲಾಗಿದೆ ಎಂಬ ಪ್ರಶ್ನೆಗೆ ಅದಕ್ಕೆ ಕಾನೂನಿದೆ ಕಾನೂನು ಪ್ರಕಾರ ಕ್ರಮ ಆಗುತ್ತೆ ಎಂದು ಹೆಬ್ಬಾಳಕರ್ ಹೇಳಿದರು..

ಒಟ್ಟಿನಲ್ಲಿ ಅಶೋಕ್ ಹೃದಯಾಘಾತವೋ ಅಥವಾ ಕೊಲೆಯೋ ಪೊಲೀಸರ ತನಿಖೆಯ ನಂತರವಷ್ಟೆ ತಿಳಿಯಬೇಕಿದೆ. ಆದರೆ ಜನಾನುರಾಗಿ ಅಧಿಕಾರಿಯಾಗಿದ್ದ ಅಶೋಕ್‌ ಕಳೆದುಕೊಂಡು ಕುಟುಂಬದಸ್ಥರೂ ಸೇರಿದಂತೆ ಸಾರ್ವಜನಿಕರೂ ಸಹ ಮಮ್ಮಲ ಮರುಗುತ್ತಿದ್ದಾರೆ.

ಪೋಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಅಶೋಕ ಪತ್ನಿ.

ಸದಾಶಿವ ನಗರದಲ್ಲಿ ಮೃತ ಅಶೋಕ ಮನ್ನೀಕೇರಿಯ ಅಂತ್ಯಕ್ರಿಯೆ ನಡೆಯಿತು, ಅಂತ್ಯಕ್ರಿಗೆ ಅಶೋಕ ಮನ್ನೀಕೇರಿ ಪತ್ನಿ ಭೂಮಿ ಪೋಲೀಸ್ ಭದ್ರೆತೆಯಲ್ಲಿ ಭಾಗವಹಿಸಿದ್ದು ಘಟನಾವಳಿಯ ವಿಶೇಷ.ಪತ್ನಿ ಭೂಮಿ ಸ್ಮಶಾನದಲ್ಲಿ ಕಾಲಿಡುತ್ತಿದ್ದಂತೆಯೇ ಅಲ್ಲಿದ್ದ ಜನ ಅಕ್ರೋಶ ವ್ಯಕ್ತಪಡಿಸಿದ್ರು,ಕೂಗಾಡಿದ್ರು,ಚೀರಾಡಿದ್ರು ಅಶೋಕ ಸಾವಿಗೆ ನೀನೇ ಕಾರಣ ಎಂದು ಕೆಲ ಮಹಿಳೆಯರು ಭೂಮಿಯನ್ನು ಎಳೆದಾಡುವ ವಿಫಲಯತ್ನ ನಡೆಸಿದ ಪ್ರಸಂಗವೂ ಅಲ್ಲಿ ನಡೆಯಿತು.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *