Home / BGAdmin (page 119)

BGAdmin

ಅಪಘಾತ..ಅಪಘಾತ..ಅಪಘಾತ…ಆಘಾತ..ಆಘಾತ…!!

ಹುಕ್ಕೇರಿ: ಸಮೀಪದ ಹೊಳೆಮ್ಮನ ಗುಡಿ ಹಳ್ಳದ ಹತ್ತಿರ ಸೋಮವಾರ ಸಂಜೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಬೈಕ್‌ ಮೇಲೆ ಹೊರಟಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಸವದತ್ತಿ ತಾಲ್ಲೂಕಿನ ಚಚಡಿ ಗ್ರಾಮದ ಮಲ್ಲನಗೌಡ ಯಲ್ಲನಗೌಡ ಪಾಟೀಲ (22) ಹಾಗೂ ಸಿದ್ಧಾರೂಢ ವೀರಭದ್ರ ಕರೋಶಿ (24) ಮೃತಪಟ್ಟವರು. ಭಾರಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ರಕ್ತಸ್ರಾವ ಆಗಿದ್ದರಿಂದ ಅವರು ಬದುಕುಳಿಯಲಿಲ್ಲ. …

Read More »

ಹಿಂಡಲಗಾ ಜೈಲು ಸೇರಿದ,ಬೆಳಗಾವಿಯ PFI ಮುಖಂಡರು ಯಾರು ಗೊತ್ತಾ..??

ಬೆಳಗಾವಿ-ರಾಷ್ಟ್ರಾದ್ಯಂತ್ಯ ಪಿಎಫ್ಐ ಸಂಟನೆಯ ನಾಯಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮುಂದುವರೆದಿದ್ದು,ಬೆಳಗಾವಿಯಲ್ಲೂ ಪಿಎಫ್ಐ ಸಂಘಟನೆಗೆ ಲಗಾಮು ಹಾಕುವ ಕಾರ್ಯಾಚರಣೆ ನಡೆದಿದೆ‌. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಬೆಳಗಾವಿಯ ಪಿಎಫ್ಐ ಸಂಘಟನೆಯ ಮುಖಂಡರ ಮನೆಗಳ ಮೇಲೆ ದಾಳಿ ಮಾಡಿರುವ ಪೋಲೀಸರು ಬೆಳಗಾವಿಯ ಒಟ್ಟು ಏಳು ಜನ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದು,ವಿಚಾರಣೆ ಮಾಡಿ ನಂತರ ಬಂಧಿಸಿ ಏಳು ಜನ ಪಿಎಫ್ಐ ಮುಖಂಡರನ್ನು ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಬೆಳಗಾವಿಯ ಕಾಕತಿ …

Read More »

ಬೆಳ್ಳಂ ಬೆಳಗ್ಗೆ ಬೆಳಗಾವಿಯಲ್ಲಿ ರೇಡ್…ರೇಡ್…!!

ಬೆಳಗಾವಿ-ಬೆಳಗಾವಿಯಲ್ಲಿ ಐವರು ಪಿಎಫ್ಐ ಮುಖಂಡರನ್ಬು ಬೆಳಗಾವಿ ಪೊಲೀಸರು ವಶಕ್ಜೆ ಪಡೆದು ವಿಚಾರಣೆ ನಡೆಸಿದ್ದಾರೆ.ಬೆಳ್ಳಂಬೆಳಗ್ಗೆ 4 ಗಂಟೆಗೆ ಬೆಳಗಾವಿಯ ಹಿರಿಯ ಪೋಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,ಪಿಎಫ್ಐ ಮುಖಂಡರ ಪಟ್ಟಿ ಮಾಡಿಕೊಂಡು ದಾಳಿ ನಡೆಸಿದ್ದಾರೆ. ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ‌.ಎಸಿಪಿ ನಾರಾಯಣ ಭರಮಣಿ, ಸದಾಶಿವ ಕಟ್ಟಿಮನಿ, ಮಾರ್ಕೆಟ್, ಎಪಿಎಂಸಿ, ಟಿಳಕವಾಡಿ, ಮಾಳಮಾರುತಿ ಠಾಣೆ ಸಿಪಿಐಗಳ ಸಾಥ್ ನೀಡಿದ್ದಾರೆ.ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿರುವ …

Read More »

ಬೆಳಗಾವಿ ನಗರದಲ್ಲಿ ಯುವಕನಿಗೆ ಚೂರಿ ಇರಿತ…!!

ಬೆಳಗಾವಿ-ಬೆಳಗಾವಿ ನಗರದಲ್ಲಿ ಕ್ಯಾಂಪ್ ಮೂಲದ ಯುವಕನಿಗೆ ಅನಂತಶಯನ ಗಲ್ಲಿ ಹತ್ತಿರ ಚೂರಿ ಇರಿತವಾಗಿದ್ದು ಯುವಕ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬೆಳಗಾವಿ ನಗರದ ಅಂಬಾ ಭವನ ಹತ್ತಿರ ಬೈಕ್ ಮೇಲೆ ಮೂರು ಜನ ಯುವಕರು ಹೋಗುತ್ತಿರುವಾಗ, ಹತ್ತು ಜನ ಯುವಕರ ಗುಂಪು ಬೈಕ್ ಸವಾರರನ್ನು ತಡೆದು ಫರಾನ್ ಧಾರವಾಡಕರ ಎಂಬ 15 ವರ್ಷದ ಯುವಕನ ಮೇಲೆ ಚೂರಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಫರಾನ್ ಧಾರವಾಡಕರ ಜೊತೆ ತೆರಳುತ್ತಿದ್ದ …

Read More »

ವಸತಿ ಶಾಲೆಯ ಅಡುಗೆ ಕೋಣೆಯಲ್ಲಿ, ಸಿಲೆಂಡರ್ ಸ್ಪೋಟ ತಪ್ಪಿದ ಅನಾಹುತ….!!.

ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ ಗೋಕಾಕ ಸೆ 26 : ಇಲ್ಲಿನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದದಿಂದ ಸ್ಥಳಾಂತರಗೊಂಡಿರುವ ಡಾ..ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರದಂದು ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದ್ದು,ಒಳಗೆ ಇರುವ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳಿಗೆ ಸುಟ್ಟಿವೆ. ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ನಿಂದ ಭಾರಿ ಶಬ್ದ ಬಂದಾಗ ಅಡುಗೆಯವರು …

Read More »

ಚೋರ್ಲಾ ಘಾಟ್ ಮೂಲಕ ಗೋವಾ ರಾಜ್ಯಕ್ಕೆ ತೆರಳುವ ಲಾರಿಗಳಿಗೆ ತಡೆ

ಬೆಳಗಾವಿ- ಬೆಳಗಾವಿಯ ತರಕಾರಿ ಬೇಡ ಎಂದು ಗೋವಾ ಸಿಎಂ ಹೇಳಿಕೆ ನೀಡಿದ ಬೆನ್ನಲ್ಲಿಯೇ ಗೋವಾ ಸರ್ಕಾರ ಈಗ ಮತ್ತೊಂದು ಕಿರಿಕ್ ಮಾಡಿದೆ.ಭಾರಿ ವಾಹನ ಪ್ರವೇಶಕ್ಕೆ ಗೋವಾ ಸರ್ಕಾರ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಚೋರ್ಲಾ ಘಾಟ್ ಮೂಲಕ ಗೋವಾ ರಾಜ್ಯಕ್ಕೆ ತೆರಳುವ ಲಾರಿಗಳಿಗೆ ತಡೆಯಲಾಗಿದೆ. ಭಾರಿ ಲಾರಿಗಳಿಂದ ಸಂಚಾರ ದಟ್ಟಣೆ ಆಗುತ್ತೆ ಎಂದು ಗೋವಾ ರಾಜ್ಯದಲ್ಲಿ ಭಾರಿ ವಾಹನಗಳ ಪ್ರವೇಶವನ್ನು ನಿಷೇಧಿಸಿದೆ.ಉತ್ತರ ಗೋವಾ ಟ್ರಾಫಿಕ್ ಎಸ್‌ಪಿ ಮನವಿ ಮೇರೆಗೆ‌ ಉತ್ತರ …

Read More »

VTU ಉಪ ಕುಲಪತಿ ಸ್ಥಾನಕ್ಕೆ ಮೂರು ಜನ ಆಯ್ಕೆ….

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದ ಉಪ ಕುಲಪತಿ ಸ್ಥಾನಕ್ಕೆ ಸರ್ಚ್ ಕಮೀಟಿ ಒಟ್ಟು ಮೂರು ಜನರನ್ನು ಅರ್ಹಗೊಳಿಸಿದೆ. NIT goa ಡೈರೆಕ್ಟರ್ ಗೋಪಾಲ ಮುರುಗರೆ,ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪ ಕುಲಪತಿ ವಿದ್ಯಾಶಂಕರ,ಬೆಳಗಾವಿಯ ವಿಟಿಯ ರಜಿಸ್ಟ್ರಾರ್ ಆನಂದ ದೇಶಪಾಂಡೆ ಅವರನ್ನು ಸರ್ಚ್ ಕಮೀಟಿ ಆಯ್ಕೆ ಮಾಡಿದ್ದು ಮೂವರಲ್ಲಿ ಒಬ್ಬರು ನಾಳೆ ಅಥವಾ ನಾಡಿದ್ದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಆನಂದ ದೇಶಪಾಂಡೆ ಹಾಗೂ ವಿದ್ಯಾಶಂಕರ ನಡುವೆ ಪೈಪೋಟಿ …

Read More »

ಬೆಳಗಾವಿ ಜಿಲ್ಲೆಗೆ ರಾಷ್ಟ್ರದಲ್ಲೇ 10ನೇ ರ್ಯಾಂಕ್…!!

ಸೆ.26 ರಂದು ನವದೆಹಲಿಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲರಿಗೆ ಗೌರವ ಪ್ರದಾನ ಬೆಳಗಾವಿ, -ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿ‌ಯಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯು ದೇಶದಲ್ಲಿಯೇ ಹತ್ತನೇ ರ್ಯಾಂಕ್ ಗಳಿಸಿದೆ. ಕೇಂದ್ರ ಸರಕಾರದ ವತಿಯಿಂದ ಏಪ್ರಿಲ್ 12, 2022 ರಿಂದ ಹಮ್ಮಿಕೊಳ್ಳಲಾಗಿದ್ದ ಆಝಾದಿಸೇ ಅಂತ್ಯೋದಯ ತಕ್ (ಎ.ಎಸ್.ಎ.ಟಿ) ಅಭಿಯಾನವು 15ನೇ ಆಗಸ್ಟ್ 2022 ರಂದು ಮುಕ್ತಾಯಗೊಂಡಿತ್ತು. ಈ ಅಭಿಯಾನದಲ್ಲಿ ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 75 ಜಿಲ್ಲೆಗಳು …

Read More »

ಬೆಳಗಾವಿಯಲ್ಲಿ ಒಂದೇ ದಿನ ಇಬ್ಬರು,ಧರ್ಮಗುರುಗಳ ಜಯಂತಿ…..!!!

ಬೆಳಗಾವಿ: ಗಣೇಶೋತ್ಸವ ಹಬ್ಬವನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿ ಸೈ ಎನಿಸಿಕೊಂಡಿದ್ದ ಬೆಳಗಾವಿ ಪೊಲೀಸರಿಗೆ ಈಗ ಮತ್ತೊಂದು ಸವಾಲು ಎದುರಾಗಿದೆ. ಎರಡು ಹಬ್ಬಗಳು ಒಂದೇ ದಿನ ಬಂದಿದ್ದು, ಅದು ಮುಸ್ಲಿಂ ಹಾಗೂ ಹಿಂದುಗಳ ಆಚರಣೆ ಒಂದೇ ದಿನ ಇರುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಹೌದು, ಅಕ್ಟೋಬರ್ 9 ಮಹತ್ವದ ದಿನವಾಗಿದ್ದು, ಈ ಬಾರಿ ಮುಸ್ಲಿಮರ ಪವಿತ್ರ ಹಬ್ಬ ಈದ್ …

Read More »

ಬೆಳಗಾವಿಯಲ್ಲಿ ಜಾನುವಾರಗಳಿಗೆ ರೋಗ ಬಂದಿದೆ ಹುಷಾರ್…!!!

*ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ: ಎಚ್ಚರಿಕೆ ವಹಿಸಲು ಪಶುಪಾಲನಾ ಇಲಾಖೆ ಸಲಹೆ* ಬೆಳಗಾವಿ,  ಜಿಲ್ಲೆಯ ಬೆಳಗಾವಿ ತಾಲೂಕಿನ ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ,ನೊಣ,ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ …

Read More »